Advertisement

Hubballi: ಅಲ್ಫಾನ್ಸೋ ಮಾವಿನ ಹಣ್ಣು ರಫ್ತಿಗೆ ಹೇರಳ ಅವಕಾಶ

05:40 PM Nov 09, 2023 | Team Udayavani |

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫು¤ ನಿಗಮ ನಿಯಮಿತ ಬೆಂಗಳೂರು, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ ಧಾರವಾಡ ಆಶ್ರಯದಲ್ಲಿ ಬುಧವಾರ ಮಾವು ರಫ್ತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

Advertisement

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್‌.ಬಂಥನಾಳ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾವು ಬೆಳೆದ ಗುಣಮಟ್ಟದ ಅಲ್ಫಾನ್ಸೋ ಮಾವು ಹೊರ ದೇಶಗಳಿಗೆ ರಫ್ತು ಮಾಡಲು
ಪ್ರಯತ್ನಿಸಬೇಕು. ಇದಕ್ಕೆ ಬೇಕಾದ ರಫ್ತು ವಿಧಾನ, ಪೋಸ್ಟ್‌ ಹಾರ್ವೇಸ್ಟ್‌ಗೆ ಬೇಕಾದ ಮೂಲಸೌಕರ್ಯಗಳಾದ ಶೀತಲೀಕರಣ ಘಟಕ, ವೇರ್‌ಹೌಸ್‌, ರಿಫರ್‌ ವ್ಯಾನ್‌ ಇತ್ಯಾದಿ ಕೆಪೆಕ್‌ ಸಂಸ್ಥೆಯಿಂದ ಹುಬ್ಬಳ್ಳಿಯಲ್ಲಿ ಸ್ಥಾಪಿಸಿದ್ದು, ಇದನ್ನು ಮಾವು ಬೆಳೆಗಾರರು ಉಪಯೋಗಿಸಿಕೊಂಡು ರಫ್ತು ಕೈಗೊಳ್ಳ ಬಹುದು ಎಂದರು.

ವಿಟಿಪಿಸಿಯ ಸಹಾಯಕ ನಿರ್ದೇಶಕ ಟಿ.ಎಸ್‌. ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಮಾವು ಧಾರವಾಡ ಜಿಲ್ಲೆಯಲ್ಲಿ ಗುರುತಿಸಿದ್ದು,  ಮಾವು ಬೆಳೆಗಾರರು ಮಾವು ಬೆಳೆ ವಿಸ್ತರಿಸಿ ಗುಣಮಟ್ಟದ ಉತ್ಪನ್ನ ಬೆಳೆದು ರಫ್ತು ಕೈಗೊಳ್ಳಲು ಆಸಕ್ತಿ ವಹಿಸಬೇಕೆಂದರು.

ಮಾವು ಹಾಗೂ ಇತರೆ ಹಣ್ಣುಗಳ ಬೆಳೆಗಾರರ ಸಂಘದ ಅಧ್ಯಕ್ಷ ಗುರುನಾಥ ಓದುಗೌಡರ ಮಾತನಾಡಿ, ಮಾವಿನ ಹಣ್ಣಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಗುಣಮಟ್ಟದ ಹಣ್ಣು ಹಾಗೂ ಮಾವಿನಿಂದ ಸಂಸ್ಕರಿಸಿದ ಉತ್ಪನ್ನಗಳಾದ ಜ್ಯೂಸ್‌, ಉಪ್ಪಿನಕಾಯಿ, ಜಾಮ್‌ ಸೇರಿದಂತೆ ಇತರೆ ಉತ್ಪನ್ನಗಳನ್ನು ರಫ್ತು ಏಜೆನ್ಸಿಗಳಾದ ನಾಮದಾರಿ ಸೀಡ್ಸ್‌ , ಇನೋವಾ ಪ್ರೈ.ಲಿ.ಮುಖಾಂತರ ರಫ್ತು ಮಾಡಿದರೆ ಉತ್ತಮ ಬೆಲೆ ದೊರೆಯುವುದು ಎಂದರು.

ಮೆ.ಕೆನ್‌ ಅಗ್ರಿಟೆಕ್‌ ಹಾಗೂ ಟ್ರಾಫಿಕೂಲ್‌ ಕಂಪನಿ ಎಂಡಿ ವಿವೇಕ ನಾಯಕ ಮಾತನಾಡಿ, ತಮ್ಮ ಸಂಸ್ಥೆಯಿಂದ ಹೆಚ್ಚಾಗಿ
ಸಂಸ್ಕರಿಸಿ ಮಾವು(ಫಲ ) ಹಾಗೂ ಫ್ರೂಜನ್‌ ಮಾವುಗಳನ್ನು ರಫ್ತು ಮಾಡುತ್ತಿದ್ದು, ರೈತರು ಸಂಸ್ಕರಿಸಿದ ಮಾವುಗಳನ್ನು ರಫ್ತು ಮಾಡಲು ವಿಫುಲ ಅವಕಾಶಗಳಿವೆ ಎಂದರು.

Advertisement

ಕೆಸಿಸಿಐ ಅಧ್ಯಕ್ಷ ಎಸ್‌.ಪಿ.ಸಂಶಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾವು ಹಾಗೂ ಇತರೆ ದೇಶಿಯ ತಳಿಗಳ ಹಣ್ಣುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ದೆಹಲಿಗೆ ಕಳಿಸಲು ಕೇಂದ್ರ ಸರಕಾರ ಕಿಸಾನ್‌ ರೈಲನ್ನು ಪರಿಚಯಿಸಿದೆ. ಎಲ್ಲ ಎಪಿಎಂಸಿ ಪ್ರಾಂಗಣಗಳಲ್ಲಿ ಶೀತಲೀಕರಣ/ ರಿಫರ್‌ ವ್ಯಾನ್‌/ವೇರ್‌ಹೌಸ್‌ ಇತ್ಯಾದಿ ಪ್ರತಿ ಪಂಚಾಯಿತಿಗೊಂದು ಸ್ಥಾಪಿಸಿದರೆ ಕೃಷಿ ಉತ್ಪನ್ನಗಳ ರಫ್ತಿಗೆ ಇನ್ನೂ ಹೆಚ್ಚು ಅನುಕೂಲವಾಗುವುದು ಎಂದರು.

ಗೌರವ ಕಾರ್ಯದರ್ಶಿ ರವೀಂದ್ರ ಎಸ್‌. ಬಳಿಗಾರ ಸ್ವಾಗತಿಸಿ, ಮಾತನಾಡಿ, ಕೃಷಿ ಉತ್ಪಾದಕರು, ರಫು¤ದಾರರು, ವ್ಯಾಪಾರಿಗಳು
ಮತ್ತು ಖರೀದಿದಾರರ ನಡುವಿನ ವ್ಯಾಪಾರ ಜಾಲವು ಕೃಷಿ-ಆಹಾರ ಸಂಸ್ಕರಣಾ ವಲಯಕ್ಕೆ ಬಹಳ ಅವಶ್ಯಕವಾಗಿದೆ. ಪ್ಯಾಕಿಂಗ್‌, ಗ್ರೇಡಿಂಗ್‌ ಮತ್ತು ಸಪ್ಲೈ ಚೈನ್‌ ಲಾಜಿಸ್ಟಿಕ್ಸ್‌ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.

ಬೆಂಗಳೂರಿನ ಅಪೇಡಾ ಸಂಸ್ಥೆ ಅಧಿಕಾರಿ ಬಿ.ಕಾರಂತ, ಬಾಗಲಕೋಟೆ ತೋಟಗಾರಿಕೆ ವಿವಿ ಸಹಾಯಕ ಪ್ರೊ|ಆನಂದ ನಂಜಪ್ಪನವರ, ಎಸ್‌ಬಿಐನ ಎಸ್‌ಎಂಇಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಿಮೋನ್‌, ರಫು¤ ಸಲಹೆಗಾರ ಸುಧೀರ ಚಿತ್ರಗಾರ, ಬೆಳಗಾವಿಯ ಗ್ರೀನ್‌ ಲ್ಯಾಂಡ್‌ ಪ್ರಸ್ಕೋ ಎಕ್ಸಪೋರ್ಟ್‌ದ ಲೇಖರಾಜ ಮಾಳಗಿ ತಾಂತ್ರಿಕ ಅಧಿವೇಶನ ನಡೆಸಿಕೊಟ್ಟರು. ಸಂಸ್ಥೆಯ ಮಾಜಿ ಅಧ್ಯಕ್ಷ ರಮೇಶ ಎ.ಪಾಟೀಲ, ವಿನಯ ಜವಳಿ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ
ಮಹೇಂದ್ರ ಸಿಂಘಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next