Advertisement
ರಾಜ್ಯ ಸರಕಾರ ಶೇ.1.50 ಇದ್ದ ಎಪಿಎಂಸಿ ಮಾರುಕಟ್ಟೆ ಶುಲ್ಕ(ಸೆಸ್)ವನ್ನು ಶೇ. 0.60ಕ್ಕೆಕಡಿತಗೊಳಿಸಿದ್ದು, ಇದರಿಂದ ಎಪಿಎಂಸಿಯಆದಾಯಕ್ಕೆ ಭಾರಿ ಹೊಡೆತಬಿದ್ದಿದೆ. ಜೊತೆಗೆ ಎಪಿಎಂಸಿ ಹೊರಗಡೆ ವ್ಯಾಪಾರ ಮಾಡಿದರೆ ಸೆಸ್ ಇಲ್ಲವಾಗಿದೆ. ಬಿಲ್ ಹಾಕಿದರೆ ಮಾತ್ರ ಕೆಲವರು ಸೆಸ್ ಕಟ್ಟುತ್ತಿದ್ದಾರೆ. ಹೀಗಾಗಿ ಎಪಿಎಂಸಿಯ ಆದಾಯದಲ್ಲಿ ಶೇ. 50ಕ್ಕೂಅಧಿಕ ಕಡಿತವಾಗಿದ್ದು, ಇದರಿಂದ ನಿರ್ವಹಣೆ ಮಾಡುವುದೇ ತುಂಬಾ ಕಷ್ಟವಾಗುತ್ತಿದೆ. ಸರಕಾರ ಎಪಿಎಂಸಿಗಳ ಆದಾಯ ಹೆಚ್ಚಳಕ್ಕೆ ಮುಂದಾಗದಿದ್ದರೆ ಹಾಗೂ ವಿಶೇಷ ಅನುದಾನ ನೀಡದಿದ್ದರೆ ಮುಂದಿನ ದಿನಗಳಲ್ಲಿಎಪಿಎಂಸಿಗಳು ಬಾಗಿಲು ಮುಚ್ಚಉವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಆರ್ಥಿಕ ತೊಂದರೆಯಿಂದಾಗಿ ಉದ್ಯೋಗಿಗಳನ್ನುಕಡಿತಗೊಳಿಸುತ್ತಿದ್ದು, ಭದ್ರತಾ ಸಿಬ್ಬಂದಿ ಇನ್ನಿತರರನ್ನು ಕಡಿಮೆಗೊಳಿಸಲಾಗುತ್ತಿದೆ.
Related Articles
Advertisement
ಜೊತೆಗೆ ಭದ್ರತಾ ಸಿಬ್ಬಂದಿ, ಸ್ವತ್ಛತಾ ಸಿಬ್ಬಂದಿ,ಡಾಟಾ ಎಂಟ್ರಿ ಸೇರಿದಂತೆ ವಿದ್ಯುತ್,ನೀರು ನಿರ್ವಹಣೆಯ ಹೊರ ಗುತ್ತಿಗೆ ಸಿಬ್ಬಂದಿಯನ್ನೂ ಕೈಬಿಡಲಾಗಿದೆ.
ಅಕ್ಕಿ-ಗೋಧಿ ಸೆಸ್ ಕೂಡ ಇಲ್ಲ :
ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪ್ರಮುಖವಾಗಿ ಅಕ್ಕಿ ಮತ್ತು ಗೋ ದಿಯ ಸೆಸ್ ಎಪಿಎಂಸಿಗೆಬರುತ್ತಿತ್ತು. ಅದು ಸಹ ನಿಂತಿದೆ. ಭಾರತ ಆಹಾರನಿಗಮ (ಎಫ್‌ಸಿಐ)ದ ಗೋದಾಮುಗಳಲ್ಲಿಇರಿಸಲಾಗುತ್ತಿದ್ದ ಅಕ್ಕಿ ಮತ್ತು ಗೋ ದಿಯನ್ನು ವಿವಿಧ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಇವು ಸಂಬಂಧಪಟ್ಟಎಪಿಎಂಸಿಗಳಿಗೆ ಬರುತ್ತಿದ್ದವು. ಅದಕ್ಕೂ ಖೋತಾಆಗಿದೆ. ಇದರಿಂದಾಗಿ ಎಪಿಎಂಸಿಗೆ ಬರುತ್ತಿದ್ದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಎಪಿಎಂಸಿ ಮಾರುಕಟ್ಟೆ ಶುಲ್ಕ ಹಾಗೂ ಅಧಿಕಾರ ವ್ಯಾಪ್ತಿ ಕಡಿತದಿಂದ ಆದಾಯ ಅರ್ಧಕ್ಕರ್ಧ ಕುಸಿದಿದೆ. ಇದರಿಂದ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ರಾಜ್ಯಸರಕಾರವು ಎಪಿಎಂಸಿಯಲ್ಲಿ ಸ್ವಚ್ಛತೆಯನ್ನು ಮಹಾನಗರ ಪಾಲಿಕೆಯಿಂದ, ನೀರು ಸರಬರಾಜು ಜಲಮಂಡಳಿಯಿಂದ ಹಾಗೂವಿದ್ಯುತ್ ನಿರ್ವಹಣೆಯನ್ನು ಹೆಸ್ಕಾಂನಿಂದ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಸರಕಾರಕ್ಕೆ ಮನವಿ ಮಾಡಲಾಗಿದ್ದು, ಯಾವ ನಿರ್ಧಾರ ಕೈಗೊಳ್ಳುತ್ತದೆ ನೋಡಬೇಕು. – ಡಾ| ಕೆ. ಕೊಂಡಿಗೌಡ, ಪ್ರಭಾರ ಕಾರ್ಯದರ್ಶಿ, ಎಪಿಎಂಸಿ ಹುಬ್ಬಳ್ಳಿ
– ಶಿವಶಂಕರ ಕಂಠಿ