ನವದೆಹಲಿ: ಚೀನ ಮೂಲದ ಕಂಪನಿಗಳಿಗೆ ಮೂಗುದಾರ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ.
ಚೀನ ಮೂಲದ ಹುವಾಯ್ ಕಂಪನಿಗೆ ಸೇರಿದ ಬೆಂಗಳೂರು, ದೆಹಲಿ, ಗುರುಗ್ರಾಮದ ಕಚೇರಿಗಳು ಹಾಗೂ ಘಟಕಗಳ ಮೇಲೆ ಬುಧವಾರ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ತನ್ನ ನೈಜ ಆದಾಯ ಮುಚ್ಚಿಟ್ಟಿರುವ ಹುವಾಯ್ ಕಂಪನಿಯು ತೆರಿಗೆ ವಂಚನೆ ಮಾಡಿದೆ ಎಂಬ ಆರೋಪದಡಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಒಪ್ಪೊ, ಶಿಯೋಮಿ ಕಂಪನಿಗಳು ಸರ್ಕಾರಕ್ಕೆ 6,500 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಲೆಕ್ಕ ನೀಡಿಲ್ಲ. ಇದು ಅನಧಿಕೃತ ಮಾರ್ಗದಿಂದ ಬಂದ ಆದಾಯವೆಂದು ಹೇಳಿ ತೆರಿಗೆ ಇಲಾಖೆ ಪರಿಶೀಲನೆ ನಡೆಸಿತ್ತು. ಒಟ್ಟಾರೆ ನೋಡುವುದಾದರೆ ಚೀನ ಮೂಲದ ಕಂಪನಿಗಳ ಮೇಲೆ ಕೇಂದ್ರ ಬಿಗಿ ನಿಲುವು ಮುಂದುವರಿಸಿದೆ.
ಇದನ್ನೂ ಓದಿ:ಮನುಸ್ಮೃತಿ ಬಂದ್ರೆ ಈಶ್ವರಪ್ಪ ಮಂತ್ರಿಗಿರಿ ಬಿಟ್ಟು ಕುರಿ ಕಾಯಬೇಕು: ಸಿದ್ದರಾಮಯ್ಯ
2020ರಲ್ಲಿ 100ಕ್ಕೂ ಅಧಿಕ ಚೀನ ಆ್ಯಪ್ ಗಳನ್ನು ಕೇಂದ್ರ ನಿಷೇಧಿಸಿತ್ತು. ಇತ್ತೀಚೆಗೆ 53ಕ್ಕೂ ಹೆಚ್ಚುವರಿ ಆ್ಯಪ್‌ಗಳಿಗೆ ನಿಷೇಧ ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.