Advertisement

ಬ್ಯಾಡ್ಮಿಂಟನ್‌ ಲೀಗ್‌ ಹರಾಜು: ಪ್ರಣಯ್‌,ಶ್ರೀಕಾಂತ್‌ಗೆ ಗರಿಷ್ಠ ಮೊತ್ತ

07:10 AM Oct 10, 2017 | Team Udayavani |

ಹೈದರಾಬಾದ್‌: ಮೂರನೇ ಆವೃತ್ತಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಹರಾಜಿನಲ್ಲಿ ಭಾರತ  ಖ್ಯಾತ  ಆಟಗಾರರಾದ ಎಚ್‌.ಎಸ್‌ಪ್ರಣಯ್‌ ಹಾಗೂ ಕಿದಂಬಿ ಶ್ರೀಕಾಂತ್‌ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿದ್ದಾರೆ.

Advertisement

ಪ್ರಣಯ್‌ 62 ಲಕ್ಷ ರೂ.ಗೆ ಅಹಮದಾಬಾದ್‌ ಪಾಲಾದರು. ಶ್ರೀಕಾಂತ್‌ 56.1 ಲಕ್ಷ ರೂ.ಗೆ ಅವಧ್‌ ವಾರಿಯರ್ ತೆಕ್ಕೆಗೆ ಬಿದ್ದರು. ಉಳಿದಂತೆ ಪುರುಷರ ವಿಭಾಗದಲ್ಲಿ ಸಮೀರ್‌ ವರ್ಮ, ಮುಂಬೈ ರಾಕೆಟ್ಸ್‌ ತಂಡಕ್ಕೆ 52 ಲಕ್ಷ ರೂ.ಗೆ ಹಾಗೂ ಅಜಯ್‌ ಜಯರಾಮ್‌, ನಾರ್ಥ್ ಈಸ್ಟ್‌ ವಾರಿಯರ್ ತಂಡಕ್ಕೆ 45 ಲಕ್ಷ ರೂ.ಗೆ ಮಾರಾಟಗೊಂಡರು.

ಮಹಿಳಾ ವಿಭಾಗದಲ್ಲಿ ಸಿಂಧುಗೆ ಗರಿಷ್ಠ: ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ, ಇತ್ತೀಚೆಗೆ ವಿಶ್ವ ಬ್ಯಾಡ್ಮಿಂಟನ್‌ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ಅಗ್ರಮಾನ್ಯ ಮಹಿಳಾ ಸಿಂಗಲ್ಸ್‌ ಆಟಗಾರ್ತಿ ಪಿ.ವಿ.ಸಿಂಧು ಅವರನ್ನು 48.75 ಲಕ್ಷ ರೂ.ಗೆ ಚೆನ್ನೈ ಸ್ಮ್ಯಾಶರ್ ತಂಡ ಖರೀದಿಸಿತು. 41.2 ಲಕ್ಷ ರೂ. ನೀಡುವ ಮೂಲಕ  ಅವಧ್‌ ವಾರಿಯರ್ ತಂಡ ಸೈನಾ ನೆಹ್ವಾಲ್‌ ಅವರನ್ನು ತನ್ನಲ್ಲೇ ಉಳಿಸಿಕೊಂಡಿತು. ವಿದೇಶಿ ಆಟಗಾರರ ವಿಭಾಗದಲ್ಲಿ ಚೀನಾದ ಟಿಯಾನ್‌ ಹ್ಯುವಾಯ್‌ (ದಿಲ್ಲಿ ಏಸರ್ 58  ಲಕ್ಷ ರೂ.), ಇಂಗ್ಲೆಂಡ್‌ನ‌ ಕ್ರಿಸ್‌ ಎಡ್ಲಾಕ್‌ (ಚೆನ್ನೈ 54ಲಕ್ಷ ರೂ.), ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ (ಬೆಂಗಳೂರು 50 ಲಕ್ಷ ರೂ.), ತೈವಾನ್‌ ನ ವಾಂಗ್‌ (ನಾರ್ಥ್ ಈಸ್ಟ್‌ 52 ಲಕ್ಷ ರೂ.)ಗೆ ಮಾರಾಟಗೊಂಡರು.

ಒಟ್ಟು 11 ದೇಶದ ಒಟ್ಟು 120 ಆಟಗಾರರು ಹರಾಜು ಪಟ್ಟಿಯಲ್ಲಿ ಇದ್ದರು. 82 ಮಂದಿ ಭಾರತೀಯ ಆಟಗಾರರು ಇದ್ದರು. ತಂಡವೊಂದಕ್ಕೆ ಗರಿಷ್ಠ ಎಂದರೆ 2.12 ಕೋಟಿ ರೂ.ಗೆ ಬಿಡ್‌ ಸಲ್ಲಿಸುವ ಅವಕಾಶ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next