ಮುಂಬಯಿ: ಈ ವರ್ಷ ಬಾಲಿವುಡ್ ಸಿನಿರಂಗಕ್ಕೆ ʼಫೈಟರ್ʼ ಬೂಸ್ಟ್ ತಂದುಕೊಟ್ಟಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸದ್ದು ಮಾಡಿದೆ. ಆ ಮೂಲಕ ನಿರ್ದೇಶಕ ಸಿದ್ದಾರ್ಥ್ ಆನಂದ್ ʼಪಠಾಣ್ʼ ಬಳಿಕ ಮತ್ತೊಂದು ದೊಡ್ಡ ಹಿಟ್ ಕೊಟ್ಟಿದ್ದಾರೆ.
ಭಾರತೀಯ ವಾಯುಪಡೆ ಕಥೆಯನ್ನೊಳಗೊಂಡಿರುವ ʼಫೈಟರ್ʼ ನಲ್ಲಿ ಹೃತಿಕ್ ರೋಷನ್ , ದೀಪಿಕಾ ಪಡುಕೋಣೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದ ದಾಳಿಯೊಂದಕ್ಕೆ ಪ್ರತಿದಾಳಿಯಾಗಿ ಸೇಡು ತೀರಿಸಿಕೊಳ್ಳುವ ರೋಚಕ ಜರ್ನಿಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿನ ಅದ್ಭುತ ದೃಶ್ಯವಲ್ಲಿ ಪ್ರೇಕ್ಷಕರ ಮನಗೆದ್ದಿದೆ.
ಥಿಯೇಟರ್ ನಲ್ಲಿ ಸಿನಿಮಾಕ್ಕೆ ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ. ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ದೀಪಿಕಾ – ಹೃತಿಕ್ ಅವರ ʼಫೈಟರ್ʼ ನಲ್ಲಿನ ಸಂಭಾವನೆಯ ಕುರಿತು ವರದಿಯೊಂದು ಹೊರಬಿದ್ದಿದೆ.
ಇದನ್ನೂ ಓದಿ: Nora Fatehi: ಟಿವಿ ಕಾರ್ಯಕ್ರಮದಲ್ಲಿ ನೋರಾ ಫತೇಹಿ ಹಾಟ್ ಡ್ಯಾನ್ಸ್; ನೆಟ್ಟಿಗರ ತರಾಟೆ
ಸಿನಿಮಾದಲ್ಲಿ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪ್ಯಾಟಿ ಪಠಾನಿಯಾ ಆಗಿ ಹೃತಿಕ್ ಕಾಣಿಸಿಕೊಂಡಿದ್ದು, ಈ ಪಾತ್ರದಲ್ಲಿ ನಟಿಸಲು ಅವರು 85 ಕೋಟಿ ರೂಪಾಯಿಯನ್ನು ಸಂಭಾವನೆ ಆಗಿ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನು ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಲ್ ಮಿನ್ನಿ ಆಗಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆ 20 ಕೋಟಿ ಸಂಭಾವನೆ ಪಡೆದಿದ್ದಾರೆ. ಇದರೊಂದಿಗೆ ಅನಿಲ್ ಕಪೂರ್ 15 ಕೋಟಿ ಸಂಭಾವನೆ ಪಡೆದಿರುವುದಾಗಿ ವರದಿ ತಿಳಿಸಿದೆ.
ರಿಲೀಸ್ ಆದ 5 ದಿನಗಳಲ್ಲಿ ಸಿನಿಮಾ ಭಾರತದಲ್ಲಿ 118 ಕೋಟಿ ಕಲೆಕ್ಷನ್ ಮಾಡಿ ಮುಂದೆ ಸಾಗುತ್ತಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜೀಜ್, ಪ್ರದುಮ್ ಶುಕ್ಲಾ ಮತ್ತು ಪ್ರದುಮ್ ಜಯಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.