Advertisement

ಮಾಜಿ ಪತ್ನಿಯ ರೆಸ್ಟೋರೆಂಟ್‌ನಲ್ಲಿ ಗರ್ಲ್ ಫ್ರೆಂಡ್‌ ಜೊತೆ ಹೃತಿಕ್‌ ಪಾರ್ಟಿ

08:59 PM Apr 06, 2022 | Team Udayavani |

ಬಾಲಿವುಡ್‌ ನಟ ಹೃತಿಕ್‌ ರೋಷನ್‌, ನಟಿ ಸಬಾ ಆಜಾದ್‌ ಜೊತೆ ಡೇಟಿಂಗ್‌ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

Advertisement

ಇದೀಗ ಹೃತಿಕ್‌, ಗರ್ಲ್ ಫ್ರೆಂಡ್‌ ಸಬಾ ಜೊತೆ ಮಾಜಿ ಪತ್ನಿ ಸುಸ್ಸಾನೆ ಖಾನ್‌ರ ರೆಸ್ಟೋರೆಂಟ್‌ನಲ್ಲೇ ಪಾರ್ಟಿ ಮಾಡಿದ್ದಾರೆ. ಇತ್ತೀಚೆಗೆ ಸುಸ್ಸಾನೆ ಖಾನ್‌ ಗೋವಾದಲ್ಲಿ ವೆಡ್ರೊ ಹೆಸರಿನ ರೆಸ್ಟೋರೆಂಟ್‌ ಆರಂಭಿಸಿದ್ದು, ಅದೇ ಖುಷಿಯಲ್ಲಿ ಪಾರ್ಟಿ ನಡೆಸಿದ್ದಾರೆ.

ಪಾರ್ಟಿಯಲ್ಲಿ ಹೃತಿಕ್‌ ತಮ್ಮ ನೂತನ ಗರ್ಲ್ ಫ್ರೆಂಡ್‌ ಜೊತೆಗೇ ಭಾಗವಹಿಸಿದ್ದಾರೆ. ಉಳಿದಂತೆ ಸುಸ್ಸಾನೆ ಅವರ ಬಾಯ್‌ಫ್ರೆಂಡ್‌ ಅರ್ಸಲ್‌ ಗೋನಿ ಸೇರಿ ಅನೇಕರು ಪಾರ್ಟಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next