Advertisement

ಡಿಜಿಟಲ್‌ ಹಣ ಪಾವತಿ ಸೌಲಭ್ಯಪರಿಚಯಿಸಿದ ಎಚ್‌ಪಿಸಿಎಲ್‌

11:29 AM Dec 07, 2018 | Team Udayavani |

ಬೆಂಗಳೂರು: ಹಿಂದೂಸ್ತಾನ್‌ ಪೆಟ್ರೋಲಿಯಂ ಕಾಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) ಡಿಜಿಟಲ್‌ ಇಂಡಿಯಾ ಅಭಿಯಾನಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಡಿಜಿಟಲ್‌ ಪೇಮೆಂಟ್‌ ಸೌಲಭ್ಯ ಪರಿಚಯಿಸಿದೆ ಎಂದು ಎಚ್‌ ಪಿಸಿಎಲ್‌ನ ದಕ್ಷಿಣ ವಲಯದ ಪ್ರಧಾನ ವ್ಯವಸ್ಥಾಪಕ ಅಂಬಾಭವಾನಿ ಕುಮಾರ್‌ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಪಿ ಅಡುಗೆ ಅನಿಲ ಸಿಲಿಂಡರ್‌ ಅನ್ನು ಬಳಸುವ ಗ್ರಾಹಕರಿಗಾಗಿ ಎಚ್‌ಪಿಸಿಎಲ್‌ ಸಂಸ್ಥೆ ಏಕ Rಛಿ ಊuಛಿl ಆ್ಯಪ್‌ ರೂಪಿಸಿದೆ. ಗ್ರಾಹಕರು ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಡಿಜಿಟಲ್‌ ಪೇಮೆಂಟ್‌ ಮಾಡಬಹುದು.

ಇದರಿಂದ ಗ್ರಾಹಕರು ಗ್ಯಾಸ್‌ ಸಿಲಿಂಡರ್‌ ಹಣ ಪಾವತಿಸುವಾಗ ಚಿಲ್ಲರೆ ಸಮಸ್ಯೆ ಉಂಟಾಗುವುದಿಲ್ಲ. ಇದರಿಂದ ಏಜೆನ್ಸಿ ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲವಾಗಲಿದೆ. ಅಲ್ಲದೆ ಈ ಆ್ಯಪ್‌ ಬಳಸುವ ಗ್ರಾಹಕರಿಗೆ ಡಿ.31ರವರೆಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ಡಿಜಿಟಲ್‌ ಪೇಮೆಂಟ್‌ ಮಾಡುವ ಗ್ರಾಹಕರಿಗೆ ಒಂದು ಸಿಲಿಂಡರ್‌ಗೆ 85 ರೂ. ರಿಯಾಯಿತಿ ದೊರೆಯಲಿದ್ದು, ಯಾವುದೇ ಎಚ್‌ಪಿ ಪೆಟ್ರೋಲ್‌ ಬಂಕ್‌
ನಲ್ಲಿ ಒಂದು ಲೀಟರ್‌ ಪೆಟ್ರೋಲ್‌ ಉಚಿತವಾಗಿ ಪಡೆಯಬಹುದಾಗಿದೆ. ಇದಲ್ಲದೆ ಡಿಜಿಟಲ್‌ ಪ್ರಚಾರ ವಾಹನ ಸೇವೆ ಆರಂಭಿಸಲಾಗಿದೆ. ಈ ವಾಹನ
ವಸತಿ ಪ್ರದೇಶಗಳಲ್ಲಿ ಸಂಚರಿಸುವ ಮೂಲಕ ಸಿಲಿಂಡರ್‌ ಖರೀದಿಸಿ ನೇರ ನಗದು ಪಾವತಿಸುವ ಬದಲು ಡಿಜಿಟಲ್‌ ವ್ಯವಸ್ಥೆ ಮೂಲಕ ಹಣ ಪಾವತಿ
ಮಾಡುವ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಲಿದೆ ಎಂದು ಹೇಳಿದರು. ಆಧಾರ್‌ ಆಧಾರಿತ ಪೇಮೆಂಟ್‌ ವ್ಯವಸ್ಥೆ, ಆನ್‌ಲೈನ್‌ ಬ್ಯಾಂಕಿಂಗ್‌,
ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಸೇರಿದಂತೆ ಡಿಜಿಟಲ್‌ ವ್ಯವಸ್ಥೆಯಲ್ಲಿ ಹಣ ಪಾವತಿ ಮಾಡುವವರಿಗೆ ಪ್ರತಿ ಸಿಲಿಂಡರ್‌ಗೆ 5 ರೂ. ರಿಯಾಯಿತಿ ದೊರೆಯಲಿದೆ.
ಹೀಗಾಗಿ ಗ್ರಾಹಕರು ಡಿಜಿಟಲ್‌ ಹಣ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next