Advertisement

ಎಚ್ ಪಿ ಯಿಂದ ಲೇಸರ್ ಜೆಟ್ ‘ಟ್ಯಾಂಕ್ ಪ್ರಿಂಟರ್’ಗಳ ಬಿಡುಗಡೆ

03:06 PM Mar 26, 2022 | Team Udayavani |

ಬೆಂಗಳೂರು: ಅತ್ಯಾಧುನಿಕ ಮುದ್ರಣ ತಂತ್ರಜ್ಞಾನದೊಂದಿಗೆ ಸಣ್ಣ-ಮಧ್ಯಮ ಗಾತ್ರದ ವ್ಯವಹಾರಗಳನ್ನು ಬೆಂಬಲಿಸುವ ಸಲುವಾಗಿ ಉನ್ನತ-ಗುಣಮಟ್ಟದ, ಕಡಿಮೆ ವೆಚ್ಚದ ಮುದ್ರಣವನ್ನು ಒದಗಿಸಲು ಎಚ್ ಪಿ ಇಂಡಿಯಾ ಉದ್ಯಮದಲ್ಲೇ ಪ್ರಥಮವೆನಿಸಿದ Laser Jet Tank Printer ಶ್ರೇಣಿಯನ್ನು ಬಿಡುಗಡೆ ಮಾಡಿದೆ.

Advertisement

ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳ ಗಮನಾರ್ಹ ಬೆಳವಣಿಗೆಯನ್ನು ಗಮನದಲ್ಲಿ ಇರಿಸಿಕೊಂಡು, HP Laser Jet ಶ್ರೇಣಿಯಲ್ಲಿನ ಹೊಸ ಆವಿಷ್ಕಾರಗಳು ಮತ್ತು ವೈಶಿಷ್ಟ್ಯಗಳನ್ನೊಳಗೊಂಡ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಅನುಕೂಲಕರವಾದ ಪ್ರಿಂಟರ್ ಗಳನ್ನು ಹೊರತಂದಿದೆ.

ಇದನ್ನೂ ಓದಿ:ಪೆಟ್ರೋಲ್‌ ಬೈಕ್‌ಗಳಿಗೆ ಕರೆಂಟ್‌ ಶಾಕ್‌!ಇಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳತ್ತ ಹೆಚ್ಚಿದ ಒಲವು

ಟ್ಯಾಂಕ್ ಪ್ರಿಂಟರ್ಗಳನ್ನು ನಿರ್ವಹಿಸುವುದು ಮತ್ತು ಅವುಗಳಲ್ಲಿ ಕೆಲಸ ಮಾಡುವುದು ಸುಲಭ. ಹೊಸ ಪ್ರಿಂಟರ್ಗಳು 5,000 ಪುಟಗಳನ್ನು ಸುಲಲಿತವಾಗಿ ಮುದ್ರಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಪ್ರಮಾಣಿತ ಇತರ ಕಾರ್ಟ್ರಿಜ್ಗಳಿಗೆ ಹೋಲಿಸಿದರೆ ಟೋನರ್ಗಳು 5 ಪಟ್ಟು ಹೆಚ್ಚು ಪುಟಗಳ ಮುದ್ರಣ ನೀಡುತ್ತವೆ. ಅಧಿಕ ಪ್ರಮಾಣದ ಮುದ್ರಣ ಅಗತ್ಯಗಳಿಗೆ ಸೂಕ್ತವಾಗಿದೆ. ಹೊಸ Laser Jet Tank 40-ಹಾಳೆಗಳ ದಾಖಲೆಯನ್ನು ತಾನಾಗಿ ಫೀಡ್ ಮಾಡಿಕೊಳ್ಳುವ ಬೆಂಬಲದೊಂದಿಗೆ ಮುದ್ರಿಸಬಲ್ಲದು ಮತ್ತು 50,000-ಪುಟಗಳ ದೀರ್ಘಾವಧಿಯ ಮುದ್ರಣ ಮಾಡಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.

HP Laser Jet Tank 1005 ಮತ್ತು 1020 ಸರಣಿ ವಿಶೇಷತೆ:

  • ಪ್ರತಿ ಪುಟದಲ್ಲೂ ಅತ್ಯುತ್ತಮ ಗುಣಮಟ್ಟದ ಮುದ್ರಣ, ಅದೂ ಕಡಿಮೆ ಖರ್ಚಿನಲ್ಲಿ.
  • ಅಧಿಕ ಪ್ರಮಾಣದ ಮುದ್ರಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ – ಮೊದಲೇ ಭರ್ತಿ ಮಾಡಲಾದ ಟೋನರ್ 5,000 ಪುಟಗಳನ್ನು ಮುದ್ರಿಸಬಲ್ಲದು.
  • ರಿ-ಫಿಲ್ ಗಳಲ್ಲಿ ಹೆಚ್ಚು ಉಳಿತಾಯ ನೀಡುವ ಗರಿಷ್ಠ ಮುದ್ರಣ HP ಟೋನರ್ ರೀಲೋಡ್ ಕಿಟ್
  • ಸುಂದರವಾದ ಮತ್ತು ಸ್ಪಷ್ಟವಾದ ಮುದ್ರಣ, ಪ್ರತಿ ಪುಟದಲ್ಲೂ ಅಸಾಧಾರಣ ಗುಣಮಟ್ಟ.
  • ಮೂಲ HP ಟೋನರ್ ಅನ್ನು ಕೇವಲ 15 ಸೆಕೆಂಡುಗಳಲ್ಲಿ ಸುಲಭವಾಗಿ ರೀಫಿಲ್ ಮಾಡಬಹುದು
  • HP Laser Jet Tank 2606 ಪ್ರಿಂಟರ್ಗಳು ಒಳಗೊಂಡಿವೆ
  • ಡ್ಯುಪ್ಲೆಕ್ಸ್ ಹೈ-ಸ್ಪೀಡ್ ಪ್ರಿಂಟಿಂಗ್ (ಸ್ವಯಂಚಾಲಿತ ಎರಡು-ಬದಿಯ ಮುದ್ರಣ ಮತ್ತು ಜೀವಿತಾವಧಿಗೆ ಬಹುಪುಟಗಳ ದಾಖಲೆಯ ತ್ವರಿತ ಮುದ್ರಣ)
  • SDW ರೂಪಾಂತರದಲ್ಲಿ 40 ಪುಟ ADF (ಸ್ವಯಂಚಾಲಿತ ಡಾಕ್ಯುಮೆಂಟ್ ಫೀಡರ್).
  • 250 ಹಾಳೆಗಳ ದೊಡ್ಡ ಇನ್ಪುಟ್ ಟ್ರೇ
  • ಪ್ರತಿ ಪುಟದಲ್ಲೂ ಅತ್ಯುತ್ತಮ ಗುಣಮಟ್ಟದ ಮುದ್ರಣ.
Advertisement

ಪ್ರಮುಖ ವೈಶಿಷ್ಟ್ಯಗಳು ಇಂತಿವೆ:

ಕಾರ್ಟ್ರಿಜ್ ಇಲ್ಲದ ಏಕೈಕ ಲೇಸರ್ ಪ್ರಿಂಟರ್

  • ಗೊಂದಲರಹಿತ ಟೋನರ್ ರಿ-ಫಿಲ್ ಪರಿಹಾರ, ಕೇವಲ 15 ಸೆಕೆಂಡ್ ಸಾಕಾಗುತ್ತದೆ
  • ಮೊದಲೇ ಭರ್ತಿ ಮಾಡಿರುವ ಮೂಲ HP ಟೋನರ್ನಿಂದ ಸುಮಾರು 5000 ಪುಟಗಳ ಮುದ್ರಣ, ಹಾಗೂ ಹೆಚ್ಚು ಉತ್ಪಾದಕವಾದ HP ಟೋನರ್ ರಿಲೋಡ್ ಕಿಟ್ ಮೇಲೆ ಉಳಿತಾಯ.

 ಬೆಲೆ ಮತ್ತು ಲಭ್ಯತೆ:

  • HP Laser Jet Tank 1005w ರೂ. 23,695
  • HP Laser Jet Tank 1020 ರೂ. 15,963
  •  HP Laser Jet Tank 2606 ರೂ, 29,558
Advertisement

Udayavani is now on Telegram. Click here to join our channel and stay updated with the latest news.

Next