Advertisement

ಅಂತೂ ಇಂತೂ ನಾಮ ಪತ್ರ ಸಲ್ಲಿಕೆ ಪ್ರಾರಂಭವಾಯ್ತು

12:46 PM Mar 18, 2017 | Team Udayavani |

ನಂಜನಗೂಡು: ಇಲ್ಲಿನ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಬೇಕಾದ ನಾಲ್ಕನೇ ದಿನವಾದ ಶುಕ್ರವಾರ ಮೂರು ನಾಮಪತ್ರ ಸಲ್ಲಿಕೆಯೊಡನೆ ಇಲ್ಲಿನ ಚುನಾವಣಾ ಕಾವು ಏರತೊಡಗಿದೆ. ಮಂಗಳವಾರದಿಂದಲೇ ನಾಮಪತ್ರ ಸ್ವಿಕರಿಸಲು ಕಾದು ಕುಳಿತಿದ್ದ ಚುನಾವಣಾಧಿಕಾರಿ ಜಿ. ಜಗದೀಶರ ಪಾಲಿಗೆ ಇಂದು ನಾಮಪತ್ರಸ್ವಕರಿಸುವ ಶುಭಗಳಿಗೆ ಕೂಡಿ ಬಂದಿದೆ.

Advertisement

6 ನಾಮಪತ್ರ ಸಲ್ಲಿಸುವುದಾಗಿ ಹೇಳಿ ಈವರಿಗೆ 13 ಅರ್ಜಿ ವಿತರಣೆಯಾಗಿದ್ದು ಇಂದು ನಾಮಪತ್ರಸಲ್ಲಿಸಿದವರೆಲ್ಲರೂ ಪಕೇತರರಾಗಿಯೇ ಸಲ್ಲಿಸಿರುವದು ಕುತೂಹಲ ಮೂಡಿಸಿದೆ. ಚಾಮರಾಜ ನಗರ ಜಿಲ್ಲೆಯ ಹನೂರಿನ ಯುವಕ ಪ್ರದೀಪ ಕುಮಾರ ಈ ಉಪ ಚುನಾವಣೆಯ ಪ್ರಥಮರಾಗಿ ನಾಮಪತ್ರ ಸಲ್ಲಿಸಿದರೇ ಪಟ್ಟಣದ ಅಶೋಕಪುರಂ ನಿವಾಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 19000 ಮತ ಪಡೆದು ಕಣದಲ್ಲಿದ್ದ ಸುಬ್ಬಯ್ಯ ದ್ವಿತೀಯರಾಗಿ ಉಮೇದುವಾರಿಕೆ ಪತ್ರ ಸಲ್ಲಿಸಿದರು.

ಹಿರಿಯ ಧಿಮಂತ ರಾಜಕಾರಣಿ,  ದೇವರಸನಹಳ್ಳಿಯ ಮಲ್ಲಣ್ಣ ಈ ಬಾರಿ ಮತ್ತೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದೂ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಉಮೇದುದಾರರು ಸೋಮವಾರ ನಾಮಪತ್ರ ಸಲ್ಲಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next