Advertisement
ಆಂಡ್ರಾಯ್ಡ್ ಮೊಬೈಲ್ ಹೊಂದಿದ ಪ್ರತಿಯೊಬ್ಬರು ಗೂಗಲ್ ಮ್ಯಾಪ್ ಉಪಯೋಗಿಸುತ್ತಾರೆ. ಇಷ್ಟು ಬಹುಮುಖ್ಯವಾಗಿರುವ ಈ ಮ್ಯಾಪ್ ಇದೀಗ ಮತ್ತಷ್ಟು ಗ್ರಾಹಕ ಸ್ನೇಹಿಯಾಗಿದೆ.
Related Articles
Advertisement
ಗೂಗಲ್ ಮ್ಯಾಪ್ ನ್ನು ನೀವು ಡೌನ್ ಲೋಡ್ ಮಾಡುವ ಮೂಲಕ ಡಾಟಾವಿಲ್ಲದೆ ಬಳಸಬಹುದಾಗಿದ್ದು ನಿಮ್ಮ ಡಿವೈಸಿನ ಎಸ್ ಡಿ ಕಾರ್ಡ್ ಅಥವಾ ಇಂಟರ್ನಲ್ ಸ್ಟೋರೇಜ್ ಸಹಾಯದಿಂದ ಬಳಸಬಹುದು.
ಆಫ್ ಲೈನ್ ಬಳಕೆಗಾಗಿ ಗೂಗಲ್ ಮ್ಯಾಪ್ ಡೌನ್ ಲೋಡ್ ಮಾಡುವುದು ಹೇಗೆ?
- ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಗೂಗಲ್ ಮ್ಯಾಪ್ ಆಪ್ ನ್ನು ತೆರೆಯಿರಿ.
- ನೀವು ತಲುಪಬೇಕಿರುವ ಸ್ಥಳವನ್ನು ಹುಡುಕಾಡಿ.
- ಡೈರೆಕ್ಷನ್ ನ್ನು ಟ್ಯಾಪ್ ಮಾಡಿ.ಅದು ನಿಮ್ಮ ಸ್ಕ್ರೀನಿನ ಕೆಳಭಾಗದ ಎಡದಲ್ಲಿರುತ್ತದೆ.
- ನೀವು ಯಾವ ರೀತಿ ಪ್ರಯಾಣ ಬೆಳೆಸಲು ಇಚ್ಛಿಸುತ್ತೀರಿ ಅದನ್ನು ಆಯ್ಕೆ ಮಾಡಿ.
- ನಂತರ ಬಿಳಿ ಬಾರ್ ನ್ನು ಟ್ಯಾಪ್ ಮಾಡಿ. ಇದು ಸ್ಕ್ರೀನಿನ ಕೆಳಭಾಗದಲ್ಲಿರುತ್ತದೆ.
- ಇದೀಗ ಸೇವ್ ಆಫ್ ಲೈನ್ ನ್ನು ಟ್ಯಾಪ್ ಮಾಡಿ.