Advertisement

ಜಪಾನ್ ಮಾಸ್ಕ್ ನಲ್ಲಿ ವ್ಯಕ್ತಿ ನೈಜವಾದ ನಗು

09:41 AM Aug 29, 2020 | Nagendra Trasi |

ಮಣಿಪಾಲ: ಕೋವಿಡ್‌ 19ನಿಂದ ವಿಶ್ವದ ಬಹುತೇಕ ದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಂಕ್ರಾಮಿಕ ರೋಗವನ್ನು ತಪ್ಪಿಸಲು ಇತರೆ ಕ್ರಮಗಳನ್ನು ಸಹ ಜಾರಿಗೆ ತರಲಾಗಿದೆ.

Advertisement

ಕೋವಿಡ್‌ ಬಂದ ಬಳಿಕ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ  ಎಂಬ ಆಪಾದನೆ ಇದೆ. ಇದು ವಾಸ್ತವದಲ್ಲಿ ಹೌದಾಗಿದ್ದರೂ ಕೋವಿಟ್‌ ಮಟ್ಟಹಾಕುವ ಕಾರಣ ಇದು ತುಂಬಾ ಆಗತ್ಯವಾಗಿದೆ. ಆದರೆ ಜಪಾನ್‌ನ ವ್ಯಾಪಾರ ಮಳಿಗೆಯೊಂದು ತನ್ನ ಕಾರ್ಮಿಕರಿಗಾಗಿ ವಿಶೇಷ ರೀತಿಯ ಮಾಸ್ಕ್ ಗಳನ್ನು ತಯಾರಿಸಿದೆ.

ಇದರಲ್ಲಿ ವ್ಯಕ್ತಿಯ ನಿಜವಾದ ನಗುವನ್ನು ಅವರಿಗೆ ನೀಡಲಾದ ಮಾಸ್ಕ್ಗಳ ಮೇಲೆ ಮುದ್ರಿಸಲಾಗಿದೆ.ಇದರಿಂದಾಗಿ ನೀವು ಅವರನ್ನು ಬೈದರೂ, ಅಳಿಸಿದರೂ ಅವರು ಮಾತ್ರ ನಗು ನಗುತ್ತಾ ನಿಮ್ಮೊಂದಿಗೆ ವ್ಯವಹರಿಸಲಿದ್ದಾರೆ. ಇದೀಗ ಮಾಲ್‌ನಲ್ಲಿ ಕೆಲಸಗಾರರ ಮನಸ್ಥಿತಿ ಏನೇ ಇದ್ದರೂ ಅವರು ಗ್ರಾಹಕರನ್ನು ನೋಡಿ ನಗುತ್ತಿರುವುದು ಕಂಡುಬರುತ್ತದೆ.

ನ್ಯೂ ನಾರ್ಮಲ್‌ ಬಳಿಯ ಜಪಾನಿನ ಅಂಗಡಿಯೊಂದು ವಿನೂತನ ಪ್ರಯತ್ನವನ್ನು ನಡೆಸಿದ್ದು, ಅದಕ್ಕೆ “ಸ್ಮೈಲ್‌  ಕ್ಯಾಂಪ್‌’ ಎಂದು ಹೆಸರಿಸಲಾಗಿದೆ. ಕಂಪನಿಯು ತನ್ನ ಪುರುಷ ಮತ್ತು ಮಹಿಳಾ ಉದ್ಯೋಗಿಗಳಿಗೆ ವಿಭಿನ್ನ ಮುಖವಾಡಗಳನ್ನು ಮುದ್ರಿಸಿದೆ. ಕಂಪನಿಯ ಪ್ರಕಾರ ಈ ಕ್ಯಾಂಪೇನ್‌ ಉದ್ದೇಶವು ತನ್ನ ಉದ್ಯೋಗಿಗಳನ್ನು ಸ್ನೇಹಪರ ಮತ್ತು ವಿಶ್ವಾಸಾರ್ಹ ಎಂದು ತೋರಿಸುವುದಾಗಿದೆ ಎಂದು ಹೇಳಿದ್ದಾರೆ.

ಇದೀಗ ಈ ಮಾಲ್‌ ತನ್ನ ಈ ವಿಶೇಷ ನಡೆಯನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದೆ. ಈ ಮೂಲಕ ನಾವು ಜನರ ಮುಖದಲ್ಲಿ ಕಿರುನಗೆ ಬೀರಲು ಬಯಸುತ್ತಿದ್ದೇವೆ ಎಂದು ಹೇಳಿದೆ. ಟ್ವಿಟರ್‌ನಲ್ಲಿ ಈ ಅಭಿಯಾನ ಪರಿಚಯಿಸಿದ ಬಳಿಕ ಇದು ವಿಶ್ವಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಈ ಪರಿಕಲ್ಪನೆಯನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next