Advertisement

ಪಾನ್, ಆಧಾರ್ ಕಾರ್ಡ್ ಲಿಂಕ್ ಮಾಡಿ. ಇಲ್ಲವಾದರೇ ದಂಡ ಖಚಿತ.! ಲಿಂಕ್ ಮಾಡುವುದು ಹೇಗೆ.?

11:06 AM Mar 26, 2021 | Team Udayavani |

ನವ ದೆಹಲಿ : ಮಾರ್ಚ್ 31 ರೊಳಗೆ ನಿಮ್ಮ ಪ್ಯಾನ್ ಅಥವಾ ಶಾಶ್ವತ ಖಾತೆ ಸಂಖ್ಯೆಯನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡದಿದ್ದರೆ, ನೀವು 1,000 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಮಾರ್ಚ್ 31 ರೊಳಗೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನ್ನು ಲಿಂಕ ಮಾಡಿ.

Advertisement

ನಿಮ್ಮ ಆಧಾರ್ ಹಾಗೂ ಪಾನ್ ಕಾರ್ಡ್ ನ್ನು ಲಿಂಕ್ ಮಾಡುವುದಕ್ಕೆ ತಲೆ ಕೆಡಿಸಿಕೊಳ್ಳಬೇಕಂತಿಲ್ಲ. ನಾವೇ ಸ್ವತಃ ಮಾಡಿಕೊಳ್ಳಬಹುದು. ಆ ಸುಲಭ ಮಾರ್ಗವನ್ನು ನಾವು ಈ ಮೂಲಕ ಸವಿವರವಾಗಿ ತಿಳಿಸಿಕೊಳ್ಳುತ್ತೇವೆ.

ಓದಿ : ಮುಂಬೈ: ಮಾಲ್ ನೊಳಗಿರುವ ಕೋವಿಡ್ ಸೆಂಟರ್ ನಲ್ಲಿ ಬೆಂಕಿ ಅವಘಡ, ಇಬ್ಬರು ಸಾವು

ನಿಮ್ಮ ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ:

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ incometaxindiaefiling.gov.in ಅನ್ನು ತೆರೆಯಿರಿ

Advertisement

2.ಅದರ ಮೇಲೆ ನೋಂದಾಯಿಸಿ (ಈಗಾಗಲೇ ಮಾಡದಿದ್ದರೆ). ನಿಮ್ಮ ಪಾನ್ ಸಂಖ್ಯೆ ನಿಮ್ಮ ಬಳಕೆದಾರ ಐಡಿಯಾಗಿರುತ್ತದೆ.

3.ಬಳಕೆದಾರರ ಐಡಿ, ಪಾಸ್‌ ವರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ

4.ಪಾಪ್ ಅಪ್ ವಿಂಡೋ ಕಾಣಿಸುತ್ತದೆ, ಲಿಂಕ್ ಮಾಡಲು ನಿಮ್ಮನ್ನು ಕೇಳುತ್ತದೆ.

5 . ಪಾನ್  ನಲ್ಲಿ ಇರುವ ಹಾಗೆ  ಹುಟ್ಟಿದ ದಿನಾಂಕ ಮತ್ತು ಲಿಂಗ ಇತ್ಯಾದಿ ವಿವರಗಳನ್ನು ನಮೂದಿಸುವುದು.

6.ನಿಮ್ಮ ಆಧಾರ್‌ನಲ್ಲಿ ನಮೂದಿಸಿರುವ ವಿವರಗಳೊಂದಿಗೆ ಪರದೆಯ ಮೇಲೆ ಪಾನ್ ವಿವರಗಳನ್ನು ಪುನಃ ಪರಿಶೀಲಿಸಿ. ಹೊಂದಾಣಿಕೆಯಿಲ್ಲದಿದ್ದರೆ, ದಾಖಲೆಗಳಲ್ಲಿ ನೀವು ಅದನ್ನು ಸರಿಪಡಿಸಬೇಕು.

7.ವಿವರಗಳು ಹೊಂದಿಕೆಯಾದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು “ಈಗ ಲಿಂಕ್ ಮಾಡಿ” ಬಟನ್ ಕ್ಲಿಕ್ ಮಾಡಿ.

8.ನಿಮ್ಮ ಆಧಾರ್ ಅನ್ನು ನಿಮ್ಮ ಪಾನ್ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ಪಾಪ್ ಅಪ್ ಸಂದೇಶವು ನಿಮಗೆ ತಿಳಿಸುತ್ತದೆ.

9.ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ ನ ಮುಖಪುಟದಿಂದ, ನೇರವಾಗಿ “ಲಿಂಕ್ ಆಧಾರ್” ಕ್ಲಿಕ್ ಮಾಡಿ.

10.ನಿಮ್ಮ ಪಾನ್ ಮತ್ತು ಆಧಾರ್ ಲಿಂಕ್ ಮಾಡಲು ನೀವು https://www.utiitsl.com ಅಥವಾ https://www.egov-nsdl.co.in/ ಗೆ ಭೇಟಿ ನೀಡಬಹುದು.

ಓದಿ :  ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಮನದನ್ನೆಯ ಸಹಕಾರ, ಪ್ರೀತಿ ವಿಶ್ವಾಸ ಹಿತವೆನಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next