Advertisement
ರಣವೇಗದಲ್ಲಿರುವ ಕಾಲಘಟ್ಟದಲ್ಲಿ ಎಲ್ಲರೂ ಆಶಾವಾ ದಿಗಳೇ. ಎಲ್ಲರಿಗೂ ಗೆಲ್ಲುವ ಹಂಬಲವಿದ್ದೇ ಇದೆ. ರನ್ನಿಂಗ್ ಟ್ರ್ಯಾಕ್‌ನಲ್ಲಿ ನಿಂತರೆಂದರೆ ಗೆಲ್ಲಲು ನಿರ್ಧರಿಸಿದ್ದಾರೆ ಎಂದರ್ಥವೇ. ಆದರೆ ಇಂಥದೊಂದು ನಿರ್ಧಾರ ಎಷ್ಟೊಂದು ನಿರ್ಧಾರಗಳ ಒಟ್ಟೂ ಸಂಯೋಜನೆಯಲ್ಲವೇ. ಖಂಡಿತಾ ಹೌದು.
Related Articles
ನಿಮ್ಮ ಓದಿಗೆ ಸಹಕಾರಿಯಾಗಬಲ್ಲ ಅಂಶಗಳನ್ನು ಟಿಪ್ಪಣಿ ಮಾಡಿಟ್ಟುಕೊಳ್ಳುವ ಅಭ್ಯಾಸವೂ ಉತ್ತಮವಾದುದು.ತಮ್ಮ ಅಧ್ಯಯನಕ್ಕೆ ಬೇಕಾಗುವ ಪುಸ್ತಕ, ಮಾಹಿತಿ ಇತ್ಯಾದಿ ಕುರಿತು ಎಲ್ಲೇ ಒಂದು ಚಿಕ್ಕ ಮಾಹಿತಿ ಸಿಕ್ಕರೂ ಅದನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು. ಬಿಡುವಿನ ವೇಳೆಯಲ್ಲಿ ಅದನ್ನು ಮನನ ಮಾಡಲು ಅನುಕೂಲ. ಇದು ಓದಿದ ವಿಷಯವನ್ನು ನೆನಪಿನಲ್ಲಿರಿಸಲು ಸಹಕರಿಸುವುದರ ಜತೆಗೆ ಸಮಯ ಉಳಿಸಲು ಸಹಕಾರಿ. ಪಾಯಿಂಟ್ಸ್ ರೂಪದಲ್ಲಿ ಟಿಪ್ಪಣಿ ಮಾಡಿಟ್ಟುಕೊಂಡರೆ ಓದಲು ಸುಲಭ.
Advertisement
ಅಣಕು ಪರೀಕ್ಷೆನೀವು ಎಷ್ಟೇ ಪೂರ್ವ ತಯಾರಿ ನಡೆಸಿದರೂ ಅಣಕು ಪರೀಕ್ಷೆಗಳನ್ನು ಮಾಡಿಕೊಳ್ಳದಿದ್ದರೆ ನಿಮ್ಮ ಗುರಿ ಮುಟ್ಟಲು ಕಷ್ಟವೆನಿಸಬಹುದು. ಅದಕ್ಕಾಗಿ ಕೆಲವು ಅಣುಕು ಪರೀಕ್ಷೆ ಎದುರಿಸಿ. ಅದರಿಂದ ನಿಮ್ಮ ಓದಿನ ಕ್ರಮದಲ್ಲಿನ ಒಳ್ಳೆಯ ಅಂಶ ಮತ್ತು ಕೆಟ್ಟ ಅಂಶ ತಿಳಿಯಲು ಸಾಧ್ಯ. ಸಿನೆಮಾ ನೋಡುವುದು
ಸಿನೆಮಾಗಳನ್ನು ನೋಡುವುದರಿಂದ ಸಮಯ ವ್ಯರ್ಥವಾಗುತ್ತದೆ, ಅದು ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತಿದೆ. ಆದರೆ ಕೆಲವರ ಪ್ರಕಾರ ಅದು ಸುಳ್ಳು. ಆದರೆ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಪ್ರೇರಣಾದಾಯಕ ಕಥಾವಸ್ತುಗಳನ್ನು ಆಯ್ದುಕೊಳ್ಳಿ. ಅಂಥ ಚಿತ್ರಗಳನ್ನೇ ನೋಡಿದರೆ, ನಿಮ್ಮಲ್ಲಿ ಮತ್ತಷ್ಟು ಸ್ಫೂರ್ತಿಯನ್ನು ತುಂಬಬಹುದು. ಸಕಾರಾತ್ಮಕ ಯೋಚನೆ ಮತ್ತು ಧ್ಯಾನ
ಮನಸ್ಸಿನ ನಿಯಂತ್ರಣಕ್ಕಾಗಿ ಆದಷ್ಟು ಸಕಾರಾತ್ಮಕ ಆಲೋಚನೆ ಮತ್ತು ದಿನದ ಕೆಲ ಸಮಯವಾದರೂ ಧ್ಯಾನ ಮಾಡುವುದು ಉತ್ತಮ. ಇದರಿಂದ ಮನಸ್ಸು ಶಾಂತವಾಗುವುದಲ್ಲದೆ ಓದಿನ ಮೇಲೆ ಗಮನ ಕೇಂದ್ರೀಕರಿಸಲೂ ಸಹಾಯವಾಗುತ್ತದೆ. ಸಮಯದ ಅರಿವು
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಮುಖ್ಯವಾಗಿ ಬೇಕಾದದ್ದು ಸಮಯದ ಅರಿವು. ಸಮಯ ನಮಗಾಗಿ ನಿಲ್ಲುವುದಿಲ್ಲ ಆದರೆ ಇರುವ ಸಮಯವನ್ನು ಹೇಗೆ ಸದುಪಯೋ ಗಿಸಿಕೊಳ್ಳಬೇಕು. ಯಾವ ಸಮಯದಲ್ಲಿ ಏನು ಓದಬೇಕು? ಹೇಗೆ ಓದಬೇಕು? ಮತ್ತು ಎಷ್ಟು ಸಮಯದಲ್ಲಿ ಅದನ್ನು ಓದಿ ಮುಗಿಸಬೇಕು ಎನ್ನುವ ಯೋಜನೆ ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಾಗ ಆದಷ್ಟು ಚಿಕ್ಕ ನೋಟ್ಸ್‌ಗಳನ್ನು ಮಾಡಿಕೊಳ್ಳಿ.ಅದರಲ್ಲಿ ಮುಖ್ಯವಾದ ವಿಷಯಗಳನ್ನು ಬರೆದಿಟ್ಟುಕೊಳ್ಳಿ. ಇದು ಮನನ ಮಾಡಲು ಸಹಾಯ ಮಾಡುತ್ತದೆ. ತುಂಬಾ ಹೊತ್ತು ಓದಿ ಬೋರ್ ಆದಲ್ಲಿ ಬೇರೆ ವಿಷಯಗಳತ್ತ ಗಮ ನಹರಿಸಿ, ಮತ್ತೆ ಓದು ಮರು ಸ್ಥಾಪಿಸಿಕೊಳ್ಳಿ. ಕೆಲವರಿಗೆ ಗೇಮ್ಸ್‌ಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಅಂಥವರು ಓದಿನ ಬಿಡುವಿನಲ್ಲಿ ಸ್ವಲ್ಪ ಸಮಯ ಆಟವಾಡಿ ಅಥವಾ ಒಂದು ಚಿಕ್ಕ ವಾಕ್ ಹೋಗಿ ಬರುವುದರಿಂದ ಮನಸ್ಸು ಹಗುರವಾಗುತ್ತದೆ. ಯಾವಾಗಲೂ ಬದುಕಿ ನಲ್ಲಿ ಗೆಲ್ಲುತ್ತೇವೆ ಎನ್ನುವ ಹಂಬಲವಿರಲಿ. ಆದರೆ ಸೋತರೆ ಪ್ರಯತ್ನ ಬಿಡಬಾರದು. ಸೋಲು ಅಥವಾ ಗೆಲುವನ್ನು ಸಮಾನವಾಗಿ ಸ್ವೀಕರಿಸಿ.
-ಮಿಚೆಲ್ ಕ್ವೀನಿ ಡಿ’ ಕೋಸ್ತಾ
ಜಿಎಸ್‌ಟಿ ವಿಭಾಗದ ಸಹಾಯಕ ಆಯುಕ್ತರು, ಮುಂಬಯಿ