Advertisement

ರಫೇಲ್‌: ಸಚಿವರಿಗೆ ಮಾಹಿತಿ

06:00 AM Sep 06, 2018 | Team Udayavani |

ನವದೆಹಲಿ: ರಫೇಲ್‌ ಯುದ್ಧ ವಿಮಾನಗಳ ನೂತನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ಸೂಕ್ತವಾಗಿ ಉತ್ತರಿಸಲು ಕೇಂದ್ರ ಸಚಿವರನ್ನು ಸನ್ನದ್ಧಗೊಳಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸಚಿವರ ತಂಡವೊಂದಕ್ಕೆ ಸಂವಾದ 
ಕಾರ್ಯಕ್ರಮ ಬುಧವಾರ ನಡೆಸಲಾಗಿತ್ತು. ಅದರಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಒಪ್ಪಂದದ ರೂಪು ರೇಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ರಕ್ಷಣಾ ಕಾರ್ಯದರ್ಶಿ ಅಜಯ್‌ ಕುಮಾರ್‌ ಸೇರಿದಂತೆ ಹಲವು ಇದ್ದರು. ರಫೇಲ್‌ನ ಯುದ್ಧ ವಿಮಾನದ ದರ ಆಯಾ ವಿಮಾನಗಳ ಬಿಡಿ ಭಾಗಗಳು, ಶಸ್ತ್ರಾಸ್ತ್ರ ಕೊಂಡೊಯ್ಯುವ ಸಾಮರ್ಥ್ಯ ಹಾಗೂ ತಂತ್ರಜ್ಞಾನಗಳನ್ನು ಹೇಗೆ ಅವಲಂಬಿಸಿದೆ ಎಂಬುದರ ಬಗ್ಗೆ ಪೂರಕ ಮಾಹಿತಿ ನೀಡಿದೆ. 

Advertisement

ಸುಪ್ರೀಂಗೆ ಕೇಸು: ಮತ್ತೂಂದೆಡೆ ಡೀಲ್‌ನಲ್ಲಿ ಅಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಖಾತೆಯ ಮಾಜಿ ಸಚಿವ ಮನೋಹರ ಪರ್ರಿಕರ್‌ ವಿರುದ್ಧ  ಎಫ್ಐಆರ್‌ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ. ಮುಂದಿನ ವಾರ ಅರ್ಜಿ ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next