Advertisement
ಉದ್ಯೋಗಿ ಬೇರೊಂದು ಸಂಸ್ಥೆ ಸೇರಿದಾಗಲೋ, ಇಲ್ಲವೇ ನಿವೃತ್ತಿ ಹೊಂದಿದಾಗಲೋ ಅದರ ಒಟ್ಟು ಮೊತ್ತ, ಆತನ ಕೈಗೆ ಸೇರುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ತನ್ನ ಇಪಿಎಫ್ ಖಾತೆಯಲ್ಲಿ ಎಷ್ಟು ಮೊತ್ತವಿದೆ ಎನ್ನುವುದನ್ನು ಇಪಿಎಫ್ ಖಾತೆ ಹೊಂದಿರುವ ಉದ್ಯೋಗಿಗಳು ಕುಳಿತಲ್ಲಿಂದಲೇ ಚೆಕ್ ಮಾಡಬಹುದು. ಎಸ್ಸೆಮ್ಮೆಸ್ ಮೂಲಕ, ಮಿಸ್ಡ್ ಕಾಲ್ ನೀಡುವ ಮೂಲಕ ಹಾಗೂ ಇಪಿಎಫ್ಒ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.
Related Articles
Advertisement
ಪ್ರತ್ಯೇಕ ಮೆಂಬರ್ ಐಡಿ: ಒಂದು ವೇಳೆ ಉದ್ಯೋಗಿ 3 ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರೆ ಅವರಿಗೆ ಮೂರು ಪ್ರತ್ಯೇಕ ಮೆಂಬರ್ ಐಡಿಗಳನ್ನು ನೀಡಲಾಗಿರುತ್ತದೆ. ಅಂದರೆ, ಒಂದು ಸಂಸ್ಥೆಗೆ ಒಂದು ಮೆಂಬರ್ ಐಡಿ. ಆಯಾ ಮೆಂಬರ್ ಐಡಿ ಎಂಟ್ರಿ ಮಾಡುತ್ತಿದ್ದಂತೆಯೇ ಆಯಾ ಉದ್ಯೋಗ ಸಂಸ್ಥೆಯ ಇಪಿಎಫ್ ವಿವರಗಳು ತೆರೆದುಕೊಳ್ಳುತ್ತವೆ.
ಇಪಿಎಫ್ಒ ಜಾಲತಾಣ* ಮೊದಲು ಇಪಿಎಫ್ ಒ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. * “ಅವರ್ ಸರ್ವೀಸಸ್’ ಎಂಬ ಟ್ಯಾಬ್ ಅಡಿ “ಫಾರ್ ಎಂಪ್ಲಾಯೀಸ್’ ಎಂಬ ಆಯ್ಕೆ ಕ್ಲಿಕ್ ಮಾಡಬೇಕು. * ತೆರೆದುಕೊಳ್ಳುವ ನ್ಯೂ ಪೇಜ್ ನಲ್ಲಿ “ಮೆಂಬರ್ ಪಾಸ್ ಬುಕ್’ ಆಯ್ಕೆ ಕ್ಲಿಕ್ ಮಾಡಬೇಕು. * ಈಗ ಇಪಿಎಫ್ ಖಾತೆದಾರರು ತಮ್ಮ ಯುಎಎನ್ ಸಂಖ್ಯೆ ಮತ್ತು ಪಾಸ್ ವರ್ಡನ್ನು ಆಯಾ ಜಾಗದಲ್ಲಿ ಎಂಟ್ರಿ ಮಾಡಬೇಕು. * ಸರಿಯಾದ ಯುಎಎನ್ ಸಂಖ್ಯೆ ಮತ್ತು ಪಾಸ್ ವರ್ಡನ್ನು ಎಂಟ್ರಿ ಮಾಡಿದ್ದರೆ, ಆಯಾ ಖಾತೆದಾರರ ಪಾಸ್‌ಬುಕ್ ಡಿಜಿಟಲ್ ಪರದೆ ಮೇಲೆ ತೆರೆದುಕೊಳ್ಳುವುದು. ಅದರಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತ ಸಂಸ್ಥೆ ಕಟ್ಟಿರುವ ಮೊತ್ತ ಕಾಣಿಸಿಕೊಳ್ಳುತ್ತದೆ. ಜೊತೆಗೆ, ಒಟ್ಟು ಮೊತ್ತಕ್ಕೆ ಜಮೆಯಾಗಿರುವ ಬಡ್ಡಿಯನ್ನೂ ನಮೂದಿಸಲಾಗಿರುವುದು.