Advertisement

Question Paper;ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ 1 ಕೋಟಿ ದಂಡ:ಅಕ್ರಮ ತಡೆ ಕಾಯ್ದೆ ಜಾರಿ

10:27 AM Jun 22, 2024 | Team Udayavani |

ನವದೆಹಲಿ: ನೀಟ್‌, ನೆಟ್‌ ಪರೀಕ್ಷೆಗಳಲ್ಲಿ ಅಕ್ರಮದ ಆರೋಪ ಕೇಳಿ ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಾರ್ವಜನಿಕ ಹಾಗೂ ಸಾಮಾನ್ಯ ಪ್ರವೇಶಾತಿ ಪರೀಕ್ಷೆ ಗಳ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಅಕ್ರಮಗಳನ್ನು ತಡೆಯುವುದಕ್ಕಾಗಿ ಸಾರ್ವಜನಿಕ ಪರೀಕ್ಷೆ(ಅಕ್ರಮ ತಡೆ) 2024ಕ್ಕೆ ಅಧಿಸೂಚನೆ ಹೊರಡಿಸಿದೆ.

Advertisement

ತಪ್ಪಿತಸ್ಥರಿಗೆ ಕನಿಷ್ಠ 3ರಿಂದ 5 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡವನ್ನು ಈ ಕಾಯ್ದೆಯು ಹೊಂದಿದೆ. ಯಾವುದೇ ವ್ಯಕ್ತಿ, ಗುಂಪು, ಸಂಸ್ಥೆ, ಪರೀಕ್ಷಾ ಅಧಿಕಾರಿ ಗಳು ಕೃತ್ಯವೆಸಗಿದಲ್ಲಿ ಕನಿಷ್ಠ 5-10 ವರ್ಷ ಜೈಲು, 1 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಕಾಯ್ದೆಯಲ್ಲಿ ಯುಪಿಎಸ್‌ಸಿ, ಎಸ್‌ಎಸ್‌ಸಿ, ರೈಲ್ವೇ, ಬ್ಯಾಂಕಿಂಗ್‌, ಎನ್‌ಟಿಎ ನಡೆಸುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗಳು ಒಳಗೊಂಡಿವೆ.

ಇದನ್ನೂ ಓದಿ:Kamala Hampana: ಖ್ಯಾತ ಸಾಹಿತಿ ಕಮಲಾ ಹಂಪನಾ ಇನ್ನಿಲ್ಲ!

ಕಾಂಗ್ರೆಸ್‌ ಪ್ರತಿಭಟನೆ: ನೀಟ್‌, ನೆಟ್‌ ಪರೀಕ್ಷಾ ಅಕ್ರಮ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದಿರುವ ಕಾಂಗ್ರೆಸ್‌, ಶುಕ್ರವಾರ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸಿದೆ.

ಯೋಗ ಕಾರ್ಯಕ್ರಮಕ್ಕೆ ಸಚಿವ ಪ್ರಧಾನ್‌ ಗೈರು!:
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ದೆಹಲಿ ವಿವಿ ವಿದ್ಯಾರ್ಥಿಗಳ ಪ್ರತಿಭಟನೆಯ ಬಿಸಿ ತಟ್ಟಿದ ಪ್ರಸಂಗ ನಡೆದಿದೆ. ಶುಕ್ರವಾರ ಪ್ರಧಾನ್‌ ಅವರು ದೆಹಲಿ ವಿವಿಯ ಯೋಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗ ವಹಿಸಬೇಕಾಗಿತ್ತು.

Advertisement

ನೀಟ್‌ ಕೌನ್ಸೆಲಿಂಗ್‌ಗೆ ತಡೆಯಾಜ್ಞೆ ನೀಡಲ್ಲ: ಸುಪ್ರೀಂಕೋರ್ಟ್‌ ಸ್ಪಷ್ಟನೆ
ಅಕ್ರಮ ಹಿನ್ನೆಲೆಯಲ್ಲಿ ನೀಟ್‌ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ತಡೆಯಾಜ್ಞೆ ತರಬೇಕು ಎಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಳ್ಳಿ ಹಾಕಿದೆ.

ಕೌನ್ಸೆಲಿಂಗ್‌ ಆರಂಭಿಸಿ, ನಿಲ್ಲಿಸುವ ಪ್ರಕ್ರಿಯೆ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ವಿಚಾರಣೆ ಜು.8ಕ್ಕೆ ಮುಂದೂಡಿರುವ ಕಾರಣ, ಜು.6ರಿಂದ ಆರಂಭವಾಗಲಿರುವ ಕೌನ್ಸೆಲಿಂಗ್‌ ಅನ್ನು 2 ದಿನ ತಡವಾಗಿ ಆರಂಭಿಸಬಹುದಲ್ಲವೇ ಎಂದು
ಅರ್ಜಿದಾರರ ಪರ ವಕೀಲರು ಕೇಳಿಕೊಂಡರು. ಆದರೆ, ನ್ಯಾಯಪೀಠ ಅದಕ್ಕೆ ಒಪ್ಪಲಿಲ್ಲ

ಮರು ಪರೀಕ್ಷೆ ಪ್ರವೇಶಪತ್ರ ಬಿಡುಗಡೆ:6 ಕೇಂದ್ರ ಬದಲು
ಕೃಪಾಂಕ ಪಡೆದ 1563 ವಿದ್ಯಾರ್ಥಿಗಳಿಗಾಗಿ ನೀಟ್‌-ಯುಜಿ ಮರುಪರೀಕ್ಷೆ ಭಾನುವಾರ ನಡೆಯಲಿದ್ದು, ಅಡ್ಮಿಟ್‌ ಕಾರ್ಡ್‌ ಗಳನ್ನು ಶುಕ್ರವಾರವೇ ಬಿಡುಗಡೆ ಮಾಡಲಾಗಿದೆ. ಜತೆಗೆ ಈ ಅಭ್ಯರ್ಥಿಗಳು ಕಳೆದ ಬಾರಿ ಬರೆದಿದ್ದ ಪರೀಕ್ಷಾ ಕೇಂದ್ರಗಳನ್ನು ಬದಲಿಸಿ, 6 ಹೊಸ ಕೇಂದ್ರಗ ಳಲ್ಲಿಪರೀಕ್ಷೆ ನಡೆಸಲಾಗುತ್ತದೆ ಎಂದು ಎನ್‌ ಟಿಎ ಹೇಳಿದೆ. ಮೇಘಾಲಯ, ಹರ್ಯಾಣ, ಛತ್ತೀಸ್‌ ಗಢ, ಗುಜರಾತ್‌, ಚಂಡೀಗಢದಲ್ಲಿ ಕಳೆದ ಬಾರಿ ಪರೀಕ್ಷೆ ನಡೆಸಲಾಗಿತ್ತು.

ದೇಶಾದ್ಯಂತ ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 43 ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಬಿಜೆಪಿ
ಆಡಳಿತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಯೆಂಬುದು ದೇಶದ ರಾಷ್ಟ್ರೀಯ ಸಮಸ್ಯೆಯಾಗಿ ಬದಲಾಗಿದೆ. ಸರ್ಕಾರವು ಈವರೆಗೆ ಕೋಟ್ಯಂತರ ಯುವಕರ ಭವಿಷ್ಯವನ್ನು ಹಾಳು ಮಾಡಿದೆ.
●ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next