Advertisement

ಈ ಮಗುವಿನ ನಡೆ ಎಷ್ಟು ನಿಸ್ವಾರ್ಥ ಅಲ್ವಾ : ತಾನು ನೆನೆದರೂ ನಾಯಿಯನ್ನು ನೆನೆಯಲು ಬಿಡುತ್ತಿಲ್ಲ

10:10 AM May 01, 2021 | Team Udayavani |

ಚಿಕ್ಕ ಚಿಕ್ಕ ಮಕ್ಕಳು ಏನು ಮಾಡಿದರೂ ಕೂಡ ಅದನ್ನು ನೋಡಲು ಸುಂದರವಾಗಿರುತ್ತದೆ. ಅಲ್ಲದೆ ನಾವು ಎಷ್ಟೇ ಬೇಸರದಲ್ಲಿದ್ದರೂ ಒಂದರಗಳಿಗೆ ಮಕ್ಕಳ ಜೊತೆ ನಿಂತು ಅವರು ಆಟವಾಡುದನ್ನು ನೋಡಿದರೆ ಮನಸ್ಸಿಗೆ ಉಲ್ಲಾಸದ ಜೊತೆ ಖುಷಿಯಾಗುತ್ತದೆ. ಮುಗ್ಧ ಮನಸ್ಸಿನ ಆ ಕಂದಮ್ಮಗಳ ಆಟವೇ ಆಗಿರುತ್ತದೆ.

Advertisement

ಇನ್ನು ಕೆಲವು ಬಾರಿ ಮಕ್ಕಳು ಮಾಡುವ ಕೆಲಸಗಳು ದೊಡ್ಡವರಿಗೂ ಕೂಡ ಸ್ಪೂರ್ತಿಯಾಗುತ್ತವೆ. ಅಲ್ಲದೆ ಪಾಠವನ್ನು ಕಲಿಸುವಂತಿರುತ್ತದೆ. ಇದಕ್ಕೆ ಸಾಕ್ಷಿಯಾಗುವಂತಹ ಸುದ್ದಿಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಣಸಿಗುತ್ತದೆ. ಇಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೋಡುಗರನ್ನು ಖುಷಿ ಪಡಿಸುತ್ತಿದೆ.

@HopkinsBRFC ಎನ್ನುವ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಆ ವಿಡಿಯೋದಲ್ಲಿ ಮಗುವೊಂದು ಮಳೆಯಲ್ಲಿ ತಾನು ನೆನೆದರೂ ಕೂಡ ತನ್ನ ಸಂಗಡ ಇರುವ ನಾಯಿಯನ್ನು ನೆನೆಯಲು ಬಿಡದೆ ಕೊಡೆ ಹಿಡಿಯುತ್ತಿದೆ. ಕೇವಲ 11 ಸೆಕೆಂಡುಗಳು ಇರುವ ಈ ವಿಡಿಯೋದಲ್ಲಿ ಮಗುವಿನ ಆಟ ಎಂಥವರನ್ನೂ ಒಂದುಕ್ಷಣ ತಿರುಗಿ ನೋಡುವಂತೆ ಮಾಡಿದೆ.

ಸುರಿಯುತ್ತಿರುವ ಮಳೆಯಲ್ಲಿ ನೆನೆಯುತ್ತಿದ್ದ ನಾಯಿಯ ಕಷ್ಟಕ್ಕೆ ಮರುಗಿದ ಮಗು ತಾನು ಹಿಡಿದಿದ್ದ ಕೊಡೆಯನ್ನೇ ಶ್ವಾನಕ್ಕೆ ಹಿಡಿಯುವ ದೃಶ್ಯವಿದು. ತಾನು ಮಳೆಯಲ್ಲಿ ಒದ್ದೆಯಾಗುತ್ತಿದ್ದರೂ ಅದರ ಬಗ್ಗೆ ಚಿಂತಿಸದ ಈ ಮಗು ಶ್ವಾನವನ್ನು ಆದಷ್ಟು ಕೊಡೆಯೊಳಗೆ ತರುವ ಪ್ರಯತ್ನ ಮಾಡುತ್ತಿದ್ದಳು.

ಈ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಮುಗ್ಧ ಮಗುವಿನ ಈ ನಡೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next