Advertisement

ಟೀಕೆಗಳಿಲ್ಲದಿರೆ ಪ್ರಜಾಪ್ರಭುತ್ವ ನಿರಂಕುಶ ಪ್ರಭುತ್ವವಾಗುತ್ತದೆ

06:10 AM Aug 11, 2017 | Team Udayavani |

ಹೊಸದಿಲ್ಲಿ: ನಿರ್ಗಮಿತ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರಿಗೆ ರಾಜ್ಯಸಭೆ ಗುರುವಾರ ಗೌರವಪೂರ್ವಕ, ಆತ್ಮೀಯ ಬೀಳ್ಕೊಡುಗೆ ನೀಡಿತು. 

Advertisement

ಕಳೆದ 10 ವರ್ಷಗಳಿಂದ ರಾಜ್ಯಸಭೆ ಅಧ್ಯಕ್ಷರಾಗಿ ಅನ್ಸಾರಿ ಅವರು ಸುದೀರ್ಘಾವಧಿ ಸೇವೆ ಸಲ್ಲಿಸಿದ್ದು, ಅಧ್ಯಕ್ಷರಾಗಿ ತಮ್ಮ ಕೊನೆಯ ಕಲಾಪದಲ್ಲಿ ಸದನವನ್ನು ಉದ್ದೇಶಿಸಿದ ಅವರು ಮಾತನಾಡಿದ್ದಾರೆ. “ಸರಕಾರದ ನೀತಿಗಳ ಬಗ್ಗೆ ನೇರ, ಸ್ಪಷ್ಟ ಟೀಕೆಗಳು ಇಲ್ಲದೇ ಹೋದಲ್ಲಿ ಪ್ರಜಾಪ್ರಭುತ್ವ ನಿರಂಕುಶ ಪ್ರಭುತ್ವದತ್ತ ಬದಲಾಗಬಹುದು’ ಎಂದು ಎಚ್ಚರಿಸಿದ್ದಾರೆ.
 
“ಭಾರತದ ವೈವಿಧ್ಯತೆಯನ್ನು ಚಿತ್ರಿಸಲೆಂದೇ ರಾಜ್ಯಸಭೆಯ ಸ್ಥಾಪನೆಯಾಗಿದೆ. ಮಾಜಿ ರಾಷ್ಟ್ರಪತಿ ರಾಧಾಕೃಷ್ಣನ್‌ ಅವರು ಹೇಳಿದಂತೆ, ಪ್ರಜಾಪ್ರಭುತ್ವದಲ್ಲಿ ಉತ್ತಮ ಟೀಕೆಗಳು ಕೇಳಿಬರಬೇಕು. ಇಲ್ಲದಿದ್ದರೆ ಅದು ಏಕಾಧಿಪತ್ಯದತ್ತ ಹೊರಳುತ್ತದೆ. ಪ್ರತಿ ಸದಸ್ಯರಿಗೂ ಟೀಕೆಗೆ ಅವಕಾಶವಿದ್ದು, ಮುಕ್ತವಾಗಿ ಟೀಕಿಸಬಹುದು. ಆದರೆ ಇದು ಸಂಸತ್ತಿನ ಕಲಾಪವನ್ನು ಭಂಗಪಡಿಸುವ ಉದ್ದೇಶ ಹೊಂದಿರಬಾರದು’ ಎಂದಿದ್ದಾರೆ. 

ಇದೇ ವೇಳೆ ಪ್ರಜಾಪ್ರಭುತ್ವ ಅಲ್ಪಸಂಖ್ಯಾಕರಿಗೆ ರಕ್ಷಣೆ ನೀಡುತ್ತದೆ. ಅದೇ ಹೊತ್ತಿನಲ್ಲಿ, ಅಲ್ಪಸಂಖ್ಯಾಕರೂ  ತಮ್ಮ ಜವಾಬ್ದಾರಿಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದರು.ಶಾಸನ ರೂಪಿಸುವಲ್ಲಿ ರಾಜ್ಯಸಭೆಯ ಪಾತ್ರದ ಬಗ್ಗೆಯೂ ಹೇಳಿದ ಅವರು, ಧಾವಂತದಲ್ಲಿ ಶಾಸನ ಗಳನ್ನು ಅಂಗೀಕರಿಸಬಾರದು. ಅದರ ಬಗ್ಗೆ ವಿಸ್ತೃತ ಚರ್ಚೆ ಯಾಗಬೇಕು. ಹೀಗೆ ಚರ್ಚೆ ನಡೆಸುವುದು ಶಾಸನಗಳನ್ನು ತಡೆಯಲು ಅಲ್ಲ, ಬದಲಿಗೆ ಉತ್ತಮ ರೀತಿಯಲ್ಲಿ  ಶಾಸನ ರೂಪಿಸಲು ಎಂದು ಅಭಿಪ್ರಾಯಪಟ್ಟರು. 

ಪ್ರಧಾನಿ ಸಹಿತ ಸದಸ್ಯರಿಂದ ಅಭಿನಂದನೆ: ಅನ್ಸಾರಿ ಅವರ ಭಾಷಣಕ್ಕೂ ಮುನ್ನ ಮೇಲ್ಮನೆ ಸದಸ್ಯರು ಅಭಿನಂ ದನೆಯ ಮಾತುಗಳನ್ನಾಡಿದರು. ಈ ವೇಳೆ ಮಾತನಾ ಡಿದ ಪ್ರಧಾನಿ ಮೋದಿ, ರಾಜತಾಂತ್ರಿಕರಾಗಿ ಅಪೂರ್ವ ಅನುಭವ ಹೊಂದಿದ ಅನ್ಸಾರಿ ಅವರಿಂದ ತಾವು ರಾಜ್ಯಸಭೆಯಲ್ಲಿ ಕೈಗೊಳ್ಳಬೇಕಾದ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವಂತಾಗಿದೆ. ಅವರಿಂದ ಅಪಾರ ಅಂಶಗ ಳನ್ನು ತಿಳಿದುಕೊಂಡಿದ್ದು, ರಾಜತಾಂತ್ರಿಕತೆಯ ಒಳಸಂಗ ತಿ ಗಳನ್ನು ಹಲವು ಬಾರಿ ಕಲಿತಿದ್ದಾಗಿ ಹೇಳಿದರು. 
 
ಸದನದ ನಾಯಕರಾಗಿರುವ ಸಚಿವ ಅರುಣ್‌ ಜೇಟಿÉ ಮಾತನಾಡಿ, ಅನ್ಸಾರಿ ಅವರ ಕಾರ್ಯಾವಧಿಯಲ್ಲಿ ಕೆಲವೊಮ್ಮೆ ಸದನ ಕಲಾಪಕ್ಕೆ ಭಂಗವುಂಟಾಗಿದ್ದರೂ ಮಹ ತ್ವದ ಚರ್ಚೆಗಳು ನಡೆದಿವೆ ಎಂದರು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು, ಅತ್ಯಧಿಕ ಮಾರ್ಗದ ರ್ಶನಗಳನ್ನು ತಾವು ಅನ್ಸಾರಿ ಅವರಿಂದ ಪಡೆದಿದ್ದಾಗಿ ಹೇಳಿದ್ದಾರೆ. ಅಲ್ಲದೆ ಅನ್ಸಾರಿ ತಮಗೆ ಓರ್ವ ಸ್ನೇಹಿತ, ಮಾರ್ಗದರ್ಶಕ, ತತ್ವಜ್ಞಾನಿ ಎಂದಿದ್ದಾರೆ. ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಸಹಿತ ವಿವಿಧ ನಾಯಕರೂ ಅನ್ಸಾರಿ ಅವರನ್ನು ಅಭಿನಂದಿಸಿದರು. 

ಬಿಸಿಯೂಟಕ್ಕೆ ಪ್ಯಾಕ್‌ 
ಮಾಡಿದ ಆಹಾರ ಇಲ್ಲ

ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ಪ್ಯಾಕ್‌ ಮಾಡಿದ ಆಹಾರವನ್ನು ನೀಡುವ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ ಮಾನವ ಸಂಪನ್ಮೂಲ ಖಾತೆ ಸಹಾಯಕ ಸಚಿವ ಉಪೇಂದ್ರ ಕುಶ್ವಾಹ ಅವರು, ಈಗಿನ ತಾಜಾ ಆಹಾರ ನೀಡುವ ಪದ್ಧತಿಯನ್ನು ಬದಲಿಸುವ ಇರಾದೆಯನ್ನು ಸರಕಾರ ಹೊಂದಿಲ್ಲ. ಆದರೆ ಬಿಸಿಯೂಟದ ಗುಣಮಟ್ಟದ ಬಗ್ಗೆ ಸರಕಾರಕ್ಕೆ ಚಿಂತೆ ಇದೆ ಎಂದು ಹೇಳಿದರು. 

Advertisement

ಪಿಯೂಶ್‌ ಗೋಯೆಲ್‌ “ಪ್ರೊಫೆಸರ್‌’
ವಿದ್ಯುತ್‌ ವಲಯದ ಬಗ್ಗೆ ಇರುವ ಅಪಾರ ಜ್ಞಾನದಿಂದಾಗಿ ಕೇಂದ್ರ ವಿದ್ಯುತ್‌ ಸಚಿವ ಪಿಯೂಶ್‌ ಗೋಯೆಲ್‌ ಅವರನ್ನು “ಪ್ರೊಫೆಸರ್‌’ ಎಂದು ಕರೆಯಬೇಕು ಎಂದು ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದು ಸದನವನ್ನು ನಗೆಗಡಲಲ್ಲಿ ತೇಲಿಸಿತು. ಗ್ರಾಮೀಣ ಭಾಗದಲ್ಲಿ ವಿದ್ಯುದೀಕರಣ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ವಿಸ್ತೃತ ಉತ್ತರವನ್ನು ಗೋಯೆಲ್‌ ನೀಡಿದ್ದು, ಆ ಬಳಿಕ ಸ್ಪೀಕರ್‌, “ಅವರ ಜ್ಞಾನ ಪ್ರೊಫೆಸರ್‌ ಮಟ್ಟದ್ದು’ ಎಂದು ಗೋಯೆಲ್‌ ಅವರ ಬಗ್ಗೆ ಹೇಳಿದರು. ಮತ್ತೂಂದು ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯ ಗೌರವ್‌ ಗೊಗೋಯ್‌ ಅವರ ಹಿಂದಿಯನ್ನೂ ಸ್ಪೀಕರ್‌ ತಿದ್ದಿದರು. ಅಸ್ಸಾಂನಲ್ಲಿ ನೆರೆಯಿಂದ ಅಪಾರ ಮಂದಿ “ಕೊಲ್ಲಲಾಗಿದೆ'(ಮರ್ಡರ್ಡ್‌) ಎಂಬ ಮಾತನ್ನು ಹಾಗಲ್ಲ. ಅವರು “ಮೃತಪಟ್ಟರು'(ಕಿಲ್ಡ್‌) ಎಂದಾಗ ಬೇಕು ಎಂದು ಕೂಡಲೇ ತಿದ್ದಿದರು. 

ಎನ್ನುವುದು ವ್ಯವಸ್ಥಿತ ಅಪಪ್ರಚಾರ
ದೇಶದಲ್ಲಿ ಅಲ್ಪಸಂಖ್ಯಾಕರಿಗೆ ಅಭದ್ರತೆ ಕಾಡುತ್ತಿದೆ ಎಂದು ನಿರ್ಗಮಿತ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು ಸಂದರ್ಶನವೊಂದರಲ್ಲಿ ಹೇಳಿದ ವಿಚಾರ ವಿವಾದಕ್ಕೀಡಾಗಿದ್ದು, ಈ ಬಗ್ಗೆ ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಬಿಜೆಪಿ ಕಿಡಿಕಾರಿದೆ. “ಇದೊಂದು ವ್ಯವಸ್ಥಿತ ರಾಜಕೀಯ ಅಪಪ್ರಚಾರ ತಂತ್ರ ಎಂದು ಹೇಳಿರುವ ನಾಯ್ಡು, ಜಗತ್ತಿನ ಯಾವುದೇ ಪ್ರದೇಶವನ್ನು ಗಮನಿಸಿದರೂ ಇಂದು ಅಲ್ಪಸಂಖ್ಯಾಕರು ಭಾರತದಲ್ಲೇ ಹೆಚ್ಚು ಸುರಕ್ಷಿತವಾಗಿ ದ್ದಾರೆ’ ಎಂದಿದ್ದಾರೆ ಅಲ್ಲದೇ ಭಾರತೀಯ ಸಮಾಜ ಅತಿ ಹೆಚ್ಚು ಸಹಿಷ್ಣುತೆ ಹೊಂದಿದೆ. ಆದ್ದರಿಂದಲೇ ನಮ್ಮಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದಿದ್ದಾರೆ. ಅನ್ಸಾರಿ ಅವರಂಥ ಸ್ಥಾನದಲ್ಲಿರುವವರು ಅಲ್ಪಸಂಖ್ಯಾಕರಿಗೆ ಅಭದ್ರತೆ ಕಾಡುತ್ತಿದೆ ಎಂಬ ಕ್ಷುಲ್ಲಕ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಬಿಜೆಪಿ ಹೇಳಿದೆ. ಅಲ್ಲದೇ ನಿವೃತ್ತಿ ಬಳಿಕ ಅನ್ಸಾರಿ ಅವರು ರಾಜಕೀಯ ಆಶ್ರಯಕ್ಕಾಗಿ ಹೀಗೆ ಹೇಳುತ್ತಿರಬಹುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯ ವರ್ಗೀಯ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next