ಆ. 31ರಂದು 511.50 ರೂ. ಇದ್ದರೆ, ಸೆ. 2ರಿಂದ 585.50 ರೂ. ಬಿಲ್ ಆಗುತ್ತಿದೆ. ಗ್ರಾಹಕರು ಸಿಲಿಂಡರ್‌ಗೆ 585.50 ರೂ. ಪಾವತಿಸಬೇಕು. ಹಿಂದಿನ ತಿಂಗಳು 23 ರೂ. ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿತ್ತು. ಈ ಬಾರಿ ಹೆಚ್ಚಿಗೆ ಆದ 74 ರೂ. ಮತ್ತು 23 ರೂ. ಸೇರಿ 97 ರೂ. ಆಗುತ್ತದೆ. ಆದರೆ ಈ ಬಾರಿ ಸಿಲಿಂಡರ್ ಮೇಲೆ 7 ರೂ. ಜಾಸ್ತಿಯಾದ ಕಾರಣ 90 ರೂ. ಸಬ್ಸಿಡಿ ಮೊತ್ತ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಸಬ್ಸಿಡಿ ಬೇಡ ಎನ್ನುವವರು 585.50 ರೂ. ಪಾವತಿಸಬೇಕು. ಪ್ರತಿ ತಿಂಗಳು 1ನೇ ತಾರೀಕಿನಂದು ದರ ಪರಿಷ್ಕರಣೆಯಾಗುತ್ತದೆ.
Advertisement