ಬೆಂಗಳೂರು : ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯ ಹಿನ್ನಲೆಯಲ್ಲಿ ಬಾಹುಬಲಿ 2 ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗವ ಬಗ್ಗೆಯೇ ಹಲವು ಪ್ರಶ್ನೆಗಳು ಎದ್ದಿದ್ದವು. ಕಡೆಗೂ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ತಮ್ಮ ಹೇಳಿಕೆಯ ಕುರಿತು ಕ್ಷಮೆಯಾಚಿಸಿದ ಬಳಿಕ ಚಿತ್ರ ಬಿಡುಗೆಡೆಯಾಗಿ ಚಿತ್ರಮಂದಿಗಳು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿಕೊಂಡಿದ್ದವು.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ಹೆಚ್ಚು ಹಣ ಬಾಜಿ ಸಾರ್ವಕಾಲಿಕ ದಾಖಲೆಗೆ ಪಾತ್ರವಾಗಿರುವ ಬಾಹುಬಲಿ ಚಿತ್ರ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಗೆ ಹಿಂದೆಂದು ಚಿತ್ರವೊಂದು ತಂದುಕೊಡದ ಬರೋಬ್ಬರಿ 17 ಕೋಟಿ ರೂಪಾಯಿಯಷ್ಟು ತೆರಿಗೆ ತಂದು ಕೊಟ್ಟಿದೆ.
ಬೆಂಗಳೂರಿನಲ್ಲೇ ಅತೀ ಹೆಚ್ಚು 13 ಕೋಟಿ 50 ಲಕ್ಷ ರೂಪಾಯಿ ತೆರಿಗೆ ಸಂಗ್ರಹವಾದರೆ, ರಾಜ್ಯದ ಉಳಿದ ಭಾಗಗಳಲ್ಲಿ 3 ಕೋಟಿ 50 ಲಕ್ಷ ರೂಪಾಯಿ ತೆರಿಗೆ ಬೊಕ್ಕಸಕ್ಕೆ ಹರಿದು ಬಂದಿದೆ.
ಅಂಕಿ ಅಂಶಗಳ ಪ್ರಕಾರ ಮಲ್ಟಿಪ್ಲೆಕ್ಸ್‌ಗಳಲ್ಲಿ 5 ಕೋಟಿ 63 ಲಕ್ಷದಷ್ಟು ತೆರಿಗೆ ಬಂದರೆ, ಚಿತ್ರಮಂದಿರಗಳಿಂದ 2 ಕೋಟಿ 8 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ರಾಜ್ಯದಲ್ಲಿ ಬಾಹುಬಲಿ ಮೊದಲ ಭಾಗದ ಪ್ರದರ್ಶನದಿಂದ ಈ ಬಾರಿ ಸಂಗ್ರಹವಾದ ತೆರಿಗೆ ಅರ್ಧದಷ್ಟು ಅಂದರೆ 8 ಕೋಟಿ 94 ಕೋಟಿ ತೆರಿಗೆ ಸಂಗ್ರಹವಾಗಿತ್ತು.
ವಾಣಿಜ್ಯ ತೆರಿಗೆ ಇಲಾಖೆ ಈ ಬೆಳವಣಿಗೆಯಿಂದ ಸಂತುಷ್ಟವಾಗಿದ್ದು, ಇದುವರೆಗೆ ಚಿತ್ರವೊಂದರಿಂದ ಸಂಗ್ರಹವಾದ ದಾಖಲೆ ಪ್ರಮಾಣದ ತೆರಿಗೆ ಇದಾಗಿದೆ.