Advertisement
2 ಪರೀಕ್ಷೆ ಪತ್ರಿಕೆಗಳುಈ ಸ್ಪರ್ಧಾತ್ಮಕ ಪರೀಕ್ಷೆಯು 2 ವಿಧದ ಪ್ರಶ್ನೆ ಪತ್ರಿಕೆಗಳನ್ನು ಹೊಂದಿದ್ದು, ಆಬೆjಕ್ಟಿವ್(120 ನಿಮಿಷ ಅವಧಿ) ಮತ್ತು ವಿವರಣಾತ್ಮಕ ಪರೀಕ್ಷೆ (60) ಯಾವ ರೀತಿಯ ಪ್ರಶ್ನೆಗಳು
ಆಬೆjಕ್ಟಿವ್ ಪರೀಕ್ಷೆಯು 200 ಅಂಕಗಳ 200 ಪ್ರಶ್ನೆಗಳನ್ನು ಒಳಗೊಂಡಿದ್ದು, ತಲಾ 50 ಪ್ರಶ್ನೆಗಳ 4 ವಿಭಾಗಗಳನ್ನು ಒಳಗೊಂಡಿರುತ್ತದೆ.
ವಿಶ್ಲೇಷಣೆ ಮತ್ತು ಪರಿಮಾಣಾತ್ಮಕ ಯೋಗ್ಯತಾ ವಿಭಾಗ, ತರ್ಕ, ಸಾಮಾನ್ಯ ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ, ಮಾರ್ಕೆ ಟಿಂಗ್, ಕಂಪ್ಯೂಟರ್. 50 ಅಂಕಗಳ ವಿವಿರ ಣಾತ್ಮಕ ಪರೀಕ್ಷೆಗೆ ಪ್ರಬಂಧ, ಪತ್ರ ಮತ್ತು ಸಂಕ್ಷಿಪ್ತ ರೂಪದಲ್ಲಿ ಉತ್ತರಗಳನ್ನು ಬರೆಯಬೇಕು. ಮಾಹಿತಿ ಎಲ್ಲಿ ಲಭ್ಯ ?
ಕಳೆದ 2 ವರ್ಷಗಳ ಪರೀಕ್ಷೆಯ ಹಳೆ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಸೂಕ್ತ. ಬ್ಯಾಂಕಿಂಗ್ ಸರ್ವೀಸ್ ಕ್ರಾನಿಕಲ್ ಪುಸ್ತಕ ಪರೀಕ್ಷೆಗೆ ಪೂರಕ ವಾದ ಮಾಹಿತಿ ನೀಡುತ್ತದೆ.
Related Articles
ಭಾರತ ಸರಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದಾದರೂ ಪದವಿ ಹೊಂದಿರಬೇಕು. ಅಧಿಕೃತ ಅಂಕ ಪಟ್ಟಿ ಅಥವಾ ಡಿಗ್ರಿ ಸರ್ಟಿಫಿಕೇಟ್ ಇರಬೇಕು. ವಯೋಮಿತಿ: 20-23 ವರ್ಷ
Advertisement
ಆಯ್ಕೆ ಪ್ರಕ್ರಿಯೆಪ್ರಿಲಿಮಿನರಿ ಪರೀಕ್ಷೆ, ಮೈನ್ಸ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಿಲಿಮಿನರಿ ಪರೀಕ್ಷೆಯು 100 ಅಂಕಗಳನ್ನು ಹೊಂದಿದ್ದು 1 ಗಂಟೆ ಅವಧಿಯಿದೆ. ಮೈನ್ಸ್ ಪರೀಕ್ಷೆಯು 200 ಅಂಕಗಳನ್ನು ಹೊಂದಿದ್ದು, 3 ಗಂಟೆ ಅವಧಿಯಿದೆ.ಮೈನ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಆಹ್ವಾನ ನೀಡಲಾಗುತ್ತದೆ. ಸಂದರ್ಶನವನ್ನು ಐಬಿಪಿಎಸ್‌ನ ಸಹಾಯದಿಂದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳಲ್ಲಿ ನೋಡಲ್ ಬ್ಯಾಂಕ್ ನಡೆಸುತ್ತದೆ. ಸಂದರ್ಶನಕ್ಕೆ 100 ಅಂಕ
ಸಂದರ್ಶನಕ್ಕೆ ಒಟ್ಟು 100 ಅಂಕ ನಿಗದಿ ಯಾಗಿದ್ದು, ಇದರಲ್ಲಿ ಶೇ.40ಕ್ಕಿಂತ (ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಶೇ. 35) ಹೆಚ್ಚು ಅಂಕ ಪಡೆಯ ಬೇಕು. ಆಯ್ಕೆ ಪಟ್ಟಿ ಸಿದ್ಧಪಡಿಸುವಾಗ ಮುಖ್ಯ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಪಡೆದ ಅಂಕವನ್ನು 80:20ರ ಅನುಪಾತದಲ್ಲಿ ಪರಿಗ ಣಿಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯ ಹಂತದಲ್ಲಿಯೇ ಸರಿ ಸುಮಾರು 1:10ರ ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ಕಿರು ಪಟ್ಟಿ ಮಾಡಿ, ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವ ಸಾಧ್ಯತೆಗಳಿರುತ್ತವೆ.