ದೋಹಾ: ಅತ್ಯಂತ ರೋಚಕವಾಗಿದ್ದ ಫಿಫಾ ಫುಟ್ಬಾಲ್ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ 90 ನಿಮಿಷಗಳ ಅವಧಿಯಲ್ಲಿ ಇತ್ತಂಡಗಳೂ ತಲಾ ಎರಡು ಗೋಲು ಗಳಿಸಿದ್ದವು. ನಂತರದ 30 ನಿಮಿಷಗಳ ಹೆಚ್ಚುವರಿ ಅವಧಿಯಲ್ಲಿ ತಲಾ ಒಂದು ಗೋಲು ಗಳಿಸಿ 3-3 ಸಮ ಮಾಡಿಕೊಂಡವು. ಹೀಗಾಗಿ, ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೆಂಟೀನ ಗೆಲುವು ಸಾಧಿಸಿತು. ಮೆಸ್ಸಿ ಎರಡು ಗೋಲು ಗಳಿಸಿ ಗೆಲುವಿಗೆ ನೆರವಾದರು.
ವಿಶ್ವ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಕೊನೆಗೂ ವಿಶ್ವಕಪ್ ಗೆದ್ದರು. ಅರ್ಜೆಂಟೀನಾ ಪರ ಅಂತಿಮ ವಿಶ್ವಕಪ್ ಪಂದ್ಯದಲ್ಲೇ ಮೆಸ್ಸಿ ಗೆಲುವಿನ ನಗೆ ಬೀರಿದರು.
ಫಿಫಾ ಈ ವಿಶ್ವಕಪ್‌ಗಾಗಿ 440 ಮಿಲಿಯನ್ ಡಾಲರ್ ಬಹುಮಾನ ಮೊತ್ತವನ್ನು ನಿಗದಿಪಡಿಸಿತು, ತಂಡಗಳು ಸ್ಪರ್ಧೆಯಲ್ಲಿ ಎಷ್ಟು ಮುನ್ನಡೆ ಸಾಧಿಸಿದವು ಎಂಬುದರ ಆಧಾರದ ಮೇಲೆ ಹಂತಹಂತವಾಗಿ ದೊಡ್ಡ ಮೊತ್ತವನ್ನು ಪಡೆಯುತ್ತವೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಮತ್ತೇ ಮೊಳಗಿದ ಗುಂಡಿನ ಸದ್ದು: ರೌಡಿಶೀಟರ್ ಕಾಲಿಗೆ ಪೋಲಿಸರ ಗುಂಡೇಟು
2018 ರ ವಿಶ್ವಕಪ್ ಚಾಂಪಿಯನ್ ಫ್ರಾನ್ಸ್ 38 ಮಿಲಿಯನ್ ಡಾಲರ್ ಬಹುಮಾನವನ್ನು ಪಡೆದುಕೊಂಡಿತ್ತು. ಈ ಬೃಹತ್ ಕೂಟದಲ್ಲಿ ಮೊದಲ ಸ್ಥಾನ ಪಡೆದ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಬರೋಬ್ಬರಿ 42 ಮಿಲಿಯನ್ ಡಾಲರ್ ಅಂದರೆ 347.48 ಕೋಟಿ ರೂ ಬಾಚಿಕೊಂಡಿದೆ.
ಎರಡನೇ ಸ್ಥಾನ ಪಡೆದ ಫ್ರಾನ್ಸ್ 30 ಮಿಲಿಯನ್ ಡಾಲರ್ ಅಂದರೆ 248 ಕೋಟಿ ರೂ ಬಾಚಿಕೊಂಡಿದೆ.