Advertisement

ಜನಿವಾರಧಾರಿ ರಾಹುಲ್‌ ಹಿಂದೂ ನಂಬಿಕೆ ದಾಳಿಗೆ ಆಸ್ಪದ ನೀಡುವುದೇಕೆ? BJP

10:28 AM Jan 30, 2019 | Team Udayavani |

ಹೊಸದಿಲ್ಲಿ : ಚುನಾವಣೆ ಬಂದಾಗ ರಣತಂತ್ರವಾಗಿ ಜನಿವಾರ ಧರಿಸಿಕೊಳ್ಳುವ ರಾಹುಲ್‌ ಗಾಂಧಿ, ವಿಶ್ವಾದ್ಯಂತದ ಕೋಟ್ಯಂತರ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಶಶಿ ತರೂರ್‌ ಅವರಂತಹವರ ಹೇಳಿಕೆಗೆ ಹೇಗೆ ಆಸ್ಪದ ನೀಡುತ್ತಾರೆ ಎಂದು ಕೇಂದ್ರ ಸಚಿವೆ ಸ್ಮ್ರತಿ ಇರಾನಿ ಪ್ರಶ್ನಿಸಿದ್ದಾರೆ. 

Advertisement

ಚುನಾವಣೆ ಬಂದಾಗಲೆಲ್ಲ ರಾಜಕೀಯ ಲಾಭಕ್ಕಾಗಿ  ತಾನೋರ್ವ ಹಿಂದು ಎಂದು ಹೇಳಿಕೊಂಡು ದೇವಾಲಯಗಳಿಗೆಲ್ಲ ಭೇಟಿ ಕೊಡುವ ರಾಹುಲ್‌ ಗಾಂಧಿ, ಶಶಿ ತರೂರ್‌ ಅವರಂತಹವರ ಹಿಂದೂ ಸಂಪ್ರದಾಯಗಳ ಮನ ನೋಯಿಸುವ ಟೀಕೆಗೆ ಹೇಗೆ ಆಸ್ಪದ ನೀಡುತ್ತಾರೆ; ಇದಕ್ಕೆ ರಾಹುಲ್‌ ಖುದ್ದು ಉತ್ತರ ನೀಡಬೇಕಿದೆ ಎಂದು ಸಚಿವೆ ಇರಾನಿ ಹೇಳಿದರು. 

ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಅವರ ಸಂಗಡಿಗರು ತ್ರಿವೇಣಿ ಸಂಗಮದಲ್ಲಿ  ಪವಿತ್ರ ಕುಂಭ ಪುಣ್ಯ ಸ್ನಾನ ಮಾಡಿರುವ ಫೋಟೋಗೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ “ಇಸ್‌ ಸಂಗಮ್‌ ಮೇ ಸಬ್‌ ನಂಗೇ ಹೇಂ (ಈ ಸಂಗಮದಲ್ಲಿ ಎಲ್ಲರೂ ನಗ್ನರಿದ್ದಾರೆ) ಎಂದು ಕ್ಯಾಪ್ಶನ್‌ ಬರೆದು ಕಟು ವ್ಯಂಗ್ಯದಿಂದ ಟೀಕಿಸಿದ್ದರು. 

ಇದೇ ವೇಳೆ ಬಿಜೆಪಿ ವಕ್ತಾರ ನಳಿನ್‌ ಕೊಹ್ಲಿ ಅವರು, ತರೂರ್‌ ಒಬ್ಬ ತುಂಬ ಸುಶಿಕ್ಷಿತ ಮತ್ತು ಗೌರವಾನ್ವಿತ ವ್ಯಕ್ತಿ. ಆದರೆ ಆಗೀಗ ಎಂಬಂತೆ ಹಿಂದೂ ಸಂಪ್ರದಾಯಗಳನ್ನು ಟೀಕಿಸುವ ಅವರಿಂದ ಈ ರೀತಿಯ ಹೇಳಿಕೆಗಳು ಬರುತ್ತಿರುವುದು ದುರದೃಷ್ಟಕರ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next