Advertisement
ರಚನೆಗೆ ಹಾನಿಯಾಗದಂತೆ ಸಮೀಕ್ಷೆ ಸಮೀಕ್ಷೆ ನಡೆಸುವುದರಿಂದ ಮಸೀದಿಯ ಮೂಲ ರಚನೆಗೆ ಹಾನಿಯಾಗಬಹುದೆಂದು ಮಸೀದಿ ಸಮೀತಿ ಆತಂಕ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಯಾವುದೇ ಉತ್ಖನನ ನಡೆಸದಂತೆ ಆದೇಶಿಸಿದೆ. ಹೀಗಾಗಿ ಎಎಸ್‌ಐ ಅಧಿಕಾರಿಗಳು ಕಟ್ಟಡದ ಒಳಗಿರುವ ಪ್ರಾಚೀನ ವಸ್ತುಗಳನ್ನು ಪಟ್ಟಿ ಮಾಡಿ, ಅವುಗಳ ಫೋಟೋ ತೆಗೆದು, ಅದರ ಕಾಲಮಾನವನ್ನು ಗೊತ್ತುಪಡಿಸುವ ದಾಖಲೆಗಳನ್ನು ಸಂಗ್ರಹಿಸಲಿದೆ. ಸರ್ವೇಕ್ಷಣೆ ಸಂದರ್ಭದಲ್ಲಿ ಪ್ರಕರಣಕ್ಕೆ ಪುರಾವೆ ದೊರಕಿಸಿಕೊಡುವ ದಾಖಲೆಗಳು ಪತ್ತೆಯಾದಲ್ಲಿ, ಅವುಗಳ ಕಾರ್ಬನ್ ಡೇಟಿಂಗ್ ನಡೆಸುವ ಸಾಧ್ಯತೆಗಳಿದೆ.
* ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್:
ರೇಡಿಯೋ ತರಂಗಗಳನ್ನು ಬಳಸಿಕೊಂಡು ಭೂ ಮೇಲ್ಮೆ„ಗಿಂತ ಕೆಳಗಿರುವ ಚಿತ್ರಗಳನ್ನು ಸೆರೆ ಹಿಡಿಯಲು ಈ ತಂತ್ರಜ್ಞಾನ ಸಹಾಯ ಮಾಡಲಿದೆ. ರಚನೆಯ ಅಡಿಪಾಯಕ್ಕೆ ಯಾವುದೇ ಹಾನಿಯಾಗದಂತೆ ಭೂಗರ್ಭದಲ್ಲಿ ಶೋಧಿಸಿ, ಅಲ್ಲಿರಬಹುದಾದ ಯಾವುದೇ ರಚನೆಗಳ ಸ್ಥಳವನ್ನು ಪತ್ತೆಹಚ್ಚಲಿದೆ.
*ಜಿಪಿಎಸ್:
ರೇಡಿಯೋ ತರಂಗಗಳು ಮತ್ತು ಬಾಹ್ಯಾಕಾಶ ಉಪಗ್ರಹ ವ್ಯವಸ್ಥೆಗಳನ್ನು ಜಿಪಿಎಸ್ ಆಧರಿಸಿದ್ದು, ಸರ್ವೇಕ್ಷಣಾ ಭೂಮಿಯ ಸ್ಥಳಾಕೃತಿ ಹಾಗೂ ದತ್ತಾಂಶಗಳ ಸಂಗ್ರಹಣೆಗೆ ತೆರಳಿರುವ ರೇಡಾರ್‌ನ ಮೇಲ್ವಿಚಾರಣೆ ಮತ್ತು ಅದರ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
*ಡ್ರೋನ್:
ಸಮೀಕ್ಷೆಯ ದಾಖಲೆ, ಕಾರ್ಯಾಚರಣೆ ಸಮನ್ವಯ, ಪರಿಶೋಧನೆ, ಸಂವಹನ, ತಪಾಸಣೆ ಸೇರಿದಂತೆ ಸರ್ವೆ ಭೂಮಿಯ ವಿವಿಧ ಕಾರ್ಯಾಚರಣೆ ಹಾಗೂ ವಿಡಿಯೋಗ್ರಫಿ, ಫೋಟೋಗ್ರಫಿಗಾಗಿ ಬಹು ಉದ್ದೇಶಿತ ಕ್ಯಾಮೆರಾಗಳನ್ನು ಅಳವಡಿಸಿರುವ ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತದೆ.