Advertisement
74: ನಡೆಯುವ ಒಟ್ಟು ಪಂದ್ಯಗಳು
Related Articles
ಈ ಬಾರಿ 10 ತಂಡಗಳನ್ನು ತಲಾ 5 ತಂಡಗಳ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಗುಂಪು ಹಂತದಲ್ಲಿ ತಂಡವೊಂದು ತನ್ನದೇ ಗುಂಪಿನ ಉಳಿದ 4 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡುತ್ತದೆ. ಅಲ್ಲಿಗೆ ತಂಡವೊಂದು 8 ಪಂದ್ಯಗಳನ್ನು ಆಡಿದಂತಾಗುತ್ತದೆ. ಅನಂತರ ಎರಡೂ ಗುಂಪುಗಳ ತಂಡಗಳ ನಡುವೆ ಪಂದ್ಯಗಳು ಆರಂಭವಾಗುತ್ತವೆ. ಅರ್ಥಾತ್ ಮೊದಲ ಗುಂಪಿನ ಒಂದು ತಂಡ, ಇನ್ನೊಂದು ಗುಂಪಿನ ತಂಡವೊಂದರ ವಿರುದ್ಧ ತಲಾ 2 ಪಂದ್ಯಗಳನ್ನು ಆಡುತ್ತದೆ. ಇತರ ನಾಲ್ಕು ತಂಡಗಳ ವಿರುದ್ಧ ತಲಾ 1 ಪಂದ್ಯವಾಡುತ್ತದೆ.
Advertisement
ಇದೇ ಮಾದರಿ ಇತರ ತಂಡಗಳಿಗೂ ಅನ್ವಯವಾಗುತ್ತದೆ. ಅಲ್ಲಿಗೆ ತಂಡವೊಂದು ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದಂತಾಗುತ್ತದೆ. ಪ್ಲೇಆಫ್ ಹಂತ ಎಂದಿನಂತೆಯೇ ಇರುತ್ತದೆ. ಅಗ್ರ 2 ಸ್ಥಾನಗಳನ್ನು ಪಡೆದ ತಂಡಗಳು ಮೊದಲ ಅರ್ಹತಾ ಪಂದ್ಯದಲ್ಲಾಡುತ್ತವೆ. ಗೆದ್ದ ತಂಡ ನೇರವಾಗಿ ಫೈನಲ್‌ಗೇರಲಿದೆ. ಸೋತ ತಂಡ 2ನೇ ಅರ್ಹತಾ ಪಂದ್ಯದಲ್ಲಾಡುತ್ತದೆ. 3 ಮತ್ತು 4ನೇ ಸ್ಥಾನ ಪಡೆದ ತಂಡಗಳು ನಿರ್ಗಮನ ಪಂದ್ಯದಲ್ಲಾಡುತ್ತವೆ. ಇಲ್ಲಿ ಗೆದ್ದ ತಂಡ 2ನೇ ಅರ್ಹತಾ ಪಂದ್ಯದಲ್ಲಿ ಆಡುತ್ತದೆ. 2ನೇ ಅರ್ಹತಾ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೇರುತ್ತದೆ.ವಿಶೇಷ ಹೊಸ ನಿಯಮಗಳು ಇಂಪ್ಯಾಕ್ಟ್ ಪ್ಲೇಯರ್: ಆಸ್ಟ್ರೇಲಿಯದ ಬಿಗ್‌ಬಾಶ್ ಟಿ20 ಲೀಗ್‌ನಿಂದ ಪ್ರಭಾವಿತಗೊಂಡು ಐಪಿಎಲ್‌ನಲ್ಲೂ ಈ ಬಾರಿಯಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಅಳವಡಿಸಲಾಗಿದೆ. ತಂಡವೊಂದು ಆಡುತ್ತಿರುವಾಗ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಅರ್ಥಾತ್ 11ರ ಬಳಗದಿಂದ ಹೊರಗಿರುವ ವ್ಯಕ್ತಿಯನ್ನು ಒಳಕ್ಕೆಳೆದುಕೊಳ್ಳಬಹುದು. ಇನಿಂಗ್ಸ್ ಆರಂಭಕ್ಕೂ ಮುನ್ನ, ಒಂದು ಓವರ್ ಮುಗಿದ ಮೇಲೆ, ವಿಕೆಟ್ ಬಿದ್ದಾಗ, ಓವರ್‌ಗಳ ನಡುವಿನ ವಿರಾಮದಲ್ಲಿ ಬದಲಿಯನ್ನು ಪಡೆಯಬಹುದು. ಒಟ್ಟಾರೆ ಒಬ್ಬ ಬದಲಿ ಆಟಗಾರನನ್ನು ಪಡೆದುಕೊಳ್ಳುವುದಕ್ಕೆ ಮಾತ್ರ ಅವಕಾಶವಿದೆ. * ಟಾಸ್ ವೇಳೆ ತಂಡದ ಅಂತಿಮಪಟ್ಟಿ ಕೊಡಬೇಕಾಗಿಲ್ಲ * ಇದೊಂದು ಅತ್ಯಂತ ಮಹತ್ವದ ಬದಲಾವಣೆ. ಇದೀಗ ತಂಡಗಳ ನಾಯಕರು ಟಾಸ್ ಹಾರಿಸುವಾಗ 11 ಆಟಗಾರರ ಅಂತಿಮಪಟ್ಟಿಯನ್ನು ನೀಡಬೇಕಾಗಿಲ್ಲ. ಟಾಸ್ ಫಲಿತಾಂಶ ನೋಡಿಕೊಂಡು ಆಗ 11ರ ಪಟ್ಟಿಯನ್ನು ಅಂತಿಮಗೊಳಿಸಬಹುದು. ವೈಡ್, ನೋಬಾಲ್‌ಗಳೂ ಡಿಆರ್‌ಎಸ್ ವ್ಯಾಪ್ತಿಗೆ
ತಂಡಗಳಿಗೆ ಇನ್ನೊಂದು ವಿಶೇಷ ಅವಕಾಶ ಸಿಕ್ಕಿದೆ. ಅಂಪಾಯರ್‌ಗಳು ನೀಡಿದ ವೈಡ್, ನೋಬಾಲ್ ಕರೆಗಳನ್ನು ಡಿಆರ್‌ಎಸ್ ಮೂಲಕ ಈಗ ಪ್ರಶ್ನಿಸಬಹುದು. ಇದು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ವಿಶೇಷ ಪರಿಣಾಮ ಬೀರಿತ್ತು.