Advertisement

ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಭವಿಷ್ಯಕ್ಕೆ ಕುತ್ತು ತರಬಹುದೇ ಐಸಿಸಿ ನಿರ್ಧಾರ?

03:11 PM Sep 13, 2020 | keerthan |

ಕೇಪ್ ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ ಮೇಲೆ ತೂಗುಗತ್ತಿಯಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ನಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಆಟಗಾರರ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ಸಂಚಕಾರ ತಂದೊಡ್ಡುವ ಲಕ್ಷಣ ಗೋಚರಿಸುತ್ತಿದೆ.

Advertisement

ದಕ್ಷಿಣ ಆಫ್ರಿಕಾ ಕ್ರಿಕೆಟ್ ನಲ್ಲಿ ಕಳೆದ ಐದು ವರ್ಷಗಳಿಂದಲೂ ಭ್ರಷ್ಟಾಚಾರ ಮತ್ತು ವಿವಾದಗಳು ನಡೆಯುತ್ತಲೇ ಇದೆ. ಈ ಬಗ್ಗೆ ಹಲವರು ಅಸಮಾಧಾನ ಹೊರಹಾಕಿದ್ದರು. ಕ್ರಿಸ್ ನೆನ್ಜಾನಿ ಬೋರ್ಡ್ ಅಧ್ಯಕ್ಷರಾದ ಬಳಿಕ ಅರಾಜಕತೆ ಹೆಚ್ಚಾಗಿತ್ತು. ಬೋರ್ಡ್ ನ ಈ ಬಾರಿಯ ಟಿ20 ಗ್ಲೋಬಲ್ ಚಾಲೆಂಜ್ ಇದೇ ಕಾರಣದಿಂದ ರದ್ದಾಗಿತ್ತು.

ಬೋರ್ಡ್ ನ ವಾರ್ಷಿಕ ಸಭೆ ರದ್ದಾದ ಕಾರಣಕ್ಕೆ ಕಳೆದ ವಾರ ರಾಷ್ಟ್ರೀಯ ಪುರುಷರ ಮತ್ತು ಮಹಿಳಾ ತಂಡದ 30 ಸದಸ್ಯರು ಟೀಕಿಸಿ ಬರೆದ ಪತ್ರಕ್ಕೆ ಸಹಿ ಹಾಕಿದ್ದರು. ಇದರಿಂದ ದಕ್ಷಿಣ ಆಫ್ರಿಕಾ ಕ್ರೀಡಾ ಮತ್ತ ಒಲಿಂಪಿಕ್ ಮಂಡಳಿ ಸಿಎಸ್ ಎಯನ್ನು ಅಮಾನತು ಮಾಡಿ ತನ್ನ ತೆಕ್ಕೆಗೆ ಪಡೆದಿದೆ.

ಇದನ್ನೂ ಓದಿ: ಗುಣಮುಖರಾದ ಸ್ಟೀವ್ ಸ್ಮಿತ್ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲು ರೆಡಿ

Advertisement

ಐಸಿಸಿ ನಡೆಯೇನು?

ಯಾವುದೇ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಐಸಿಸಿ ಒಪ್ಪುವಿದಿಲ್ಲ. ಇದು ಐಸಿಸಿ ನಿಯಮಕ್ಕೂ ವಿರುದ್ಧವಾಗಿದೆ. ಇಂತಹ ಸಂದರ್ಭದಲ್ಲಿ ಐಸಿಸಿ ಆ ಮಂಡಳಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡುತ್ತದೆ. ದ. ಆಫ್ರಿಕಾದ ಬೆಳವಣಿಗೆಯ ಬಗ್ಗೆ ಐಸಿಸಿ ಇದುವರೆಗೆ ಏನೂ ಹೇಳದೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಒಂದು ವೇಳೆ ಐಸಿಸಿ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡಿದರೆ ತಂಡ ಯಾವುದೇ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವಂತಿಲ್ಲ. ಐಸಿಸಿ ನಡೆಸುವ ಕೂಟಗಳಲ್ಲಿ ಆಡುವಂತಿಲ್ಲ. ಮಾಜಿ ಆಟಗಾರರಿಗೆ ಸಿಗುವ ಪಿಂಚಣಿಯೂ ಕೈತಪ್ಪುತ್ತದೆ. ಐಸಿಸಿ ಕಡೆಯಿಂದ ಬೋರ್ಡ್ ಗೆ ಸಿಗುವ ಧನಸಹಾಯವೂ ತಪ್ಪಿ ಹೋಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next