Advertisement

ಭಕ್ತಿ ಚಾಯ್‌ ಸ್ಥಾಪಕಿ ಕೋಟ್ಯಧಿಪತಿ

10:30 AM Mar 30, 2018 | Karthik A |

ಹೊಸದಿಲ್ಲಿ: ಪುಣೆಯ ವ್ಯಕ್ತಿಯೊಬ್ಬರು ಚಹಾ ಮಾರಾಟ ಮಾಡಿ ಕೋಟ್ಯಧಿಪತಿಯಾದ ಬೆನ್ನಲ್ಲೇ, ಅಮೆರಿಕದ ಕೊಲೊರಾಡೊದ ಬ್ರೂಕ್‌ ಎಡ್ಡಿ ಅದೇ ಉದ್ದಿಮೆಗೆ ಇಳಿದು ಯಶಸ್ವಿಯಾಗಿದ್ದಾರೆ. ಬ್ರೂಕ್‌ ಎಡ್ಡಿಯವರ ಈ ಚಾಯ್‌ ಉದ್ದಿಮೆಯ ಮೌಲ್ಯ ಈಗ 45 ಕೋಟಿ ರೂ. (7 ಮಿಲಿಯಲ್‌ ಡಾಲರ್‌). 2002ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಅವರು ಇಲ್ಲಿ ಸಿಗುತ್ತಿದ್ದ ಚಹಾ ಸೇವಿಸಿ , ಮನಸೋತಿದ್ದರು. ಸ್ವದೇಶಕ್ಕೆ ತೆರಳಿದ ಬಳಿಕ ಅಲ್ಲಿನ ಕೆಫೆಗಳಲ್ಲಿ ಅದೇ ಮಾದರಿಯ ಸ್ವಾದ ಕಂಡುಹಿಡಿಯಲು ಯತ್ನಿಸಿದರು. ಹೀಗಾಗಿ 2006ರಲ್ಲಿ ಅವರೇ ‘ಭಕ್ತಿ ಚಾಯ್‌’ ಹೆಸರಿನಲ್ಲಿ ಕಾರಿನ ಡಿಕ್ಕಿಯಲ್ಲಿಟ್ಟು ಮಾರಲು ಮುಂದಾದರು. 

Advertisement

2007ರಲ್ಲಿ ಚಹಾಕ್ಕಾಗಿ ವೆಬ್‌ಸೈಟ್‌ ಆರಂಭಿಸಿದ ಅವರು, ಶುಂಠಿ ಮತ್ತು ವಿಶೇಷವಾದ ಮಸಾಲೆಯುಕ್ತ ಚಹಾದಿಂದಾಗಿ ಹೆಚ್ಚಿನ ಜನಪ್ರಿಯತೆ ಗಳಿಸಿರುವುದಾಗಿ ಬರೆದುಕೊಂಡರು. ಎಂಟ್ರೆಪ್ರನರ್‌ ಮ್ಯಾಗಜಿನ್‌ ನಡೆಸುವ 2014ರ ‘ವರ್ಷದ ಉದ್ಯಮಿ’ ಪ್ರಶಸ್ತಿ ಇವರಿಗೆ ಸಿಕ್ಕಿದೆ. ಅಂದ ಹಾಗೆ ಇವರಿಗೆ ಸ್ಫೂರ್ತಿ ನೀಡಿದ್ದು, ಭಗವದ್ಗೀತೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next