Advertisement
ಸೋಮವಾರ ಬಿಂಡಿಗ ದೇವೀರಮ್ಮ ಬೆಟ್ಟದಲ್ಲಿ ಶ್ರೀ ದೇವೀರಮ್ಮ ದರ್ಶನ ಪಡೆದು ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿ ವರ್ಷ ದೇವಿಯ ದರ್ಶನ ಪಡೆದು ಬಳಿಕ ದೇವಸ್ಥಾನಕ್ಕೆ ಹೋಗಿ ಪೂಜಾ ವಿ ಧಿ ವಿಧಾನಗಳನ್ನು ನೆರವೇರಿಸುವುದು ಈ ಭಾಗದ ವಾಡಿಕೆ. ಭಕ್ತರು ಉಪವಾಸವಿದ್ದು ದೇವಿಗೆ ಆರತಿ ಮಾಡಿದ ಬಳಿಕ ಉಪವಾಸ ತ್ಯಜಿಸುವ ಮತ್ತು ಹರಕೆ ಕಟ್ಟಿ ಬೆಟ್ಟ ಹತ್ತುವ ಪ್ರತೀತಿ ಬಹಳ ವರ್ಷಗಳಿಂದ ಇದೆ. ಅದರಂತೆ ಬಹಳ ವರ್ಷಗಳಿಂದ ಬೆಟ್ಟ ಹತ್ತುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರುವಾಗಿ ಜಗತ್ತಿಗೆ ಮಾರ್ಗದರ್ಶನ ಮಾಡಲಿ ಎಂದು ಪಾರ್ಥಿಸಿದ್ದೇನೆ ಎಂದರು.
ಕಾಂತಾರ ತುಳು ಮತ್ತು ಮಲೆನಾಡಿನ ಜಾನಪದ ದೇವತೆ-ಸಾಂಸ್ಕೃತಿಕ ಹಿನ್ನೆಲೆಯ ಚಿತ್ರವಾಗಿದ್ದು, ಸಹಜವಾಗಿ ಜನಾಕರ್ಷಣೆ ಮಾಡಿದೆ. ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿರುವುದರಿಂದ ಚಲನಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ದೇವರಲ್ಲಿ ಶ್ರದ್ಧೆ ಮತ್ತು ಭಕ್ತಿ ಭಾವವನ್ನು ಗಟ್ಟಿಗೊಳಿಸುವ ಕೆಲಸ ಮಾಡಿದೆ. ವಿರೋಧ ಮಾಡುವವರು ಎಲ್ಲ ಕಾಲದಲ್ಲೂ ಇದ್ದಾರೆ. ದುಷ್ಟರು, ರಾಕ್ಷಸರು ಇಲ್ಲದಿದ್ದರೆ ದೇವರು ತಮ್ಮ ಪವಾಡವನ್ನು ತೋರಿಸುವುದು ಹೇಗೆ ಎಂದು ಪ್ರಶ್ನಿಸಿದರು.