Advertisement
ಜೋ ಬೈಡೆನ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆ ಭಾರತೀಯರು ಹೆಚ್ಚಿನ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಟ್ರಂಪ್ ರೀತಿಯಲ್ಲಿಯೇ ಬೈಡೆನ್ ಅಧಿಕಾರಾವಧಿಯಲ್ಲಿಯೂ ಭಾರತ ಮತ್ತು ವಾಷಿಂಗ್ಟನ್ ನಡುವಿನ ಸ್ನೇಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿ ಹೇಳಿದೆ.
Related Articles
Advertisement
ಕಳೆದ ವರ್ಷ ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಆರ್ ಸಿ)ಯನ್ನು ಜಾರಿಗೊಳಿಸಿದ್ದಕ್ಕೆ ಬೈಡೆನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ರೀತಿ ಡೆಮಾಕ್ರ್ಯಾಟ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೂಡಾ, 370ನೇ ವಿಧಿಯನ್ನು ರದ್ದುಪಡಿಸಿದ್ದರ ಬಗ್ಗೆ ನೀಡಿದ್ದ ಹೇಳಿಕೆಯನ್ನೂ ಕೂಡಾ ಭಾರತ ಮರೆತಿಲ್ಲ ಎಂದು ಹೇಳಿದೆ.
ಕಾಶ್ಮೀರಿಗಳು ಕೂಡಾ ಏಕಾಂಗಿಯಲ್ಲ. ನಾವು ಕಾಶ್ಮೀರದಲ್ಲಿನ ಸನ್ನಿವೇಶದ ಬಗ್ಗೆ ಅವಲೋಕನ ನಡೆಸುತ್ತಿದ್ದೇವೆ. ಒಂದು ವೇಳೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಒತ್ತಾಯಕೇಳಿ ಬಂದರೆ ನಾವು ಮಧ್ಯಪ್ರವೇಶಿಸುವುದಾಇ ಹೇಳಿದ್ದರು. ವಿಶ್ಲೇಷಕರ ಪ್ರಕಾರ, ಬೈಡೆನ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಈ ವಿಚಾರವನ್ನು ಹೆಚ್ಚು ಪ್ರಸ್ತಾಪಿಸದಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಬೈಡೆನ್ ಗೆ ಅಧ್ಯಕ್ಷಗಾದಿ- ಪಾಕಿಸ್ತಾನಕ್ಕೆ ಸಂತಸ:
ಒಂದು ವೇಳೆ ಜೋ ಬೈಡೆನ್ ಅಮೆರಿಕದ ನೂತನ ಅಧ್ಯಕ್ಞರಾಗಿ ಆಯ್ಕೆಯಾದರೆ ಪಾಕಿಸ್ತಾನಕ್ಕೆ ಹೆಚ್ಚಿನ ಸಂತೋಷವಾಗಲಿದೆ. ಅಷ್ಟೇ ಅಲ್ಲ ಬೈಡೆನ್ ಮಾಜಿ ರಾಯಭಾರಿ ಕೂಡಾ ಆಗಿದ್ದು, ಪಾಕ್ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಜೋ ಬೈಡೆನ್ ಗೆ ಬಹುಪರಾಕ್ ಹೇಳುತ್ತಿದೆ.
2008ರಲ್ಲಿ ಜೋ ಬೈಡೆನ್ ಗೆ ಪಾಕಿಸ್ತಾನ ಸರ್ಕಾರ ತನ್ನ ದೇಶದ ಎರಡನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ “ಹಿಲಾಲ್ ಇ ಪಾಕಿಸ್ತಾನ್” ಅನ್ನು ಕೊಟ್ಟು ಗೌರವಿಸಿತ್ತು. ಪಾಕಿಸ್ತಾನಕ್ಕೆ 1.5 ಬಿಲಿಯನ್ ಡಾಲರ್ ನಷ್ಟು ಹಣಕಾಸಿನ ನೆರವು ಸಿಗುವ ಪ್ರಸ್ತಾಪದ ಹಿಂದೆ ಇದ್ದ ವ್ಯಕ್ತಿ ಜೋ ಬೈಡೆನ್ ಮತ್ತು ಸೆನೆಟರ್ ರಿಚರ್ಡ್ ಲೂಗಾರ್ ಎಂದು ತಿಳಿಸಿದೆ.