Advertisement
1983ರ ಜೂ. 25ರಂದು ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್, ಭಯಾನಕ ವೆಸ್ಟ್ ಇಂಡೀಸನ್ನು ಫೈನಲ್‌ನಲ್ಲಿ 43 ರನ್ನುಗಳಿಂದ ಉರುಳಿಸಿದ ‘ಕಪಿಲ್ ಡೆವಿಲ್ಸ್’ ಹೊಸ ಇತಿಹಾಸ ಬರೆದ ಅದ್ಭುತ ಕ್ಷಣವದು.
ಸಹಜವಾಗಿಯೇ ಕಪಿಲ್ ತನ್ನ ತಂಡದ ಸಾಧನೆಯನ್ನು ಮೆಲುಕು ಹಾಕಿದ್ದಾರೆ. ‘ಸಾಧನೆಯ ಹಾದಿ ಯಾವತ್ತೂ ದುರ್ಗಮವಾಗಿರುತ್ತದೆ. ನಾವು ಈ ಎಲ್ಲ ಘಟ್ಟಗಳನ್ನು ದಾಟಿ ಮುನ್ನಡೆದು ಯಶಸ್ಸಿನ ಶಿಖರವನ್ನು ತಲುಪಿದೆವು. ನಮ್ಮ ಪಾಲಿಗೆ ಇದೊಂದು ಅನಿರೀಕ್ಷಿತ, ಆದರೆ ಅಷ್ಟೇ ರೋಮಾಂಚಕಾರಿ ಪಯಣವಾಗಿತ್ತು. ಉತ್ತಮ ಆಲ್‌ರೌಂಡರ್‌ಗಳ ಪಡೆ, ಅಮೋಘ ಮಟ್ಟದ ಫೀಲ್ಡಿಂಗ್, ಇದಕ್ಕೂ ಮಿಗಿಲಾಗಿ ನಮ್ಮ ಮೇಲೆ ಯಾವುದೇ ನಿರೀಕ್ಷೆ ಮತ್ತು ಒತ್ತಡ ಇಲ್ಲವಾದ್ದರಿಂದ ಇಂಥ ಅಸಾಮಾನ್ಯ ಸಾಧನೆಯೊಂದು ದಾಖಲಾಯಿತು ಎನ್ನುತ್ತಾರೆ ಕಪಿಲ್.
ನಾವು ಇದಕ್ಕೆ ಇನ್ನೊಂದು ಅಂಶವನ್ನು ಸೇರಿಸಬೇಕು, ಅದು ಕಪಿಲ್‌ದೇವ್ ಅವರ ಸ್ಫೂರ್ತಿಯುತ ನಾಯಕತ್ವ. ಇದನ್ನು ನೆನಪಿಸಿಕೊಂಡವರು ಅಂದಿನ ಟಾಪ್ ಸ್ಕೋರರ್ ಕೆ. ಶ್ರೀಕಾಂತ್. ‘183 ರನ್ ಸಣ್ಣ ಮೊತ್ತ. ನಾವು ಗೆಲ್ಲುತ್ತೇವೋ ಇಲ್ಲವೋ, ಆದರೆ ತೀವ್ರ ಪ್ರತಿರೋಧವನ್ನೊಡ್ಡಲೇಬೇಕು. ಅವರನ್ನು ಸುಲಭದಲ್ಲಿ ಗೆಲ್ಲಲು ಬಿಡಬಾರದು’ ಎಂದು ಕಪಿಲ್ ತಮ್ಮನ್ನು ಹುರಿದುಂಬಿಸಿದ್ದರು ಎಂದು ಶ್ರೀಕಾಂತ್ ಹೇಳಿದರು.
ವಿಂಡೀಸಿಗೆ ಮೊದಲ ಸೋಲು
ಭಾರತ ಲೀಗ್ ಹಂತದ ಮೊದಲ ಪಂದ್ಯದಲ್ಲೇ ವೆಸ್ಟ್ ಇಂಡೀಸನ್ನು 34 ರನ್ನುಗಳಿಂದ ಉರುಳಿಸಿದಾಗಲೇ ಕಪಿಲ್ ಪಡೆ ಅಸಾಮಾನ್ಯ ಸಾಹಸವೊಂದಕ್ಕೆ ಮುನ್ನುಡಿ ಬರೆದಿತ್ತು. ಅದು ವಿಂಡೀಸಿಗೆ ವಿಶ್ವಕಪ್‌ನಲ್ಲಿ ಎದುರಾದ ಪ್ರಪ್ರಥಮ ಸೋಲಾಗಿತ್ತು. ಹಿಂದಿನ ದಿನವೇ ಬೋನಸ್!
ಭಾರತ ಆತಿಥೇಯ ಇಂಗ್ಲೆಂಡನ್ನು ಮಣಿಸಿ ಫೈನಲ್ ಪ್ರವೇಶಿಸಿದಾಗ ಜಾಗತಿಕ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಮೂಡಿತ್ತು. ಬಿಸಿಸಿಐ ಅಧಿಕಾರಿಗಳೆಲ್ಲ ಜೂ. 24ರ ಸಂಜೆ ಸಭೆ ಸೇರಿ, ತಂಡದ ಸದಸ್ಯರಿಗೆಲ್ಲ 25 ಸಾವಿರ ರೂ. ಬೋನಸ್ ಪ್ರಕಟಿಸಿದ್ದರು!
Related Articles
Advertisement