Advertisement

ಸೆರೆ ಸಿಕ್ಕ ಕುಖ್ಯಾತ ಮನೆಗಳ್ಳನ ಮೇಲೆ 25 ಪ್ರಕರಣ

03:08 PM May 03, 2023 | Team Udayavani |

ಬೆಂಗಳೂರು: ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕನ್ನ ಹಾಕುತ್ತಿದ್ದ ರಘು ಅಲಿಯಾಸ್‌ ಪೆಪ್ಸಿ (23) ಎಂಬಾತನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಕಳವು ಮಾಡಿದ್ದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಿತ್ತಾಳೆ ಸಾಮಗ್ರಿ, ಎರಡು ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ತಮಿಳುನಾಡು ಮೂಲದ ರಘು ಉದ್ಯೋಗ ಅರಸಿ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಸರಿಯಾದ ಉದ್ಯೋಗ ಸಿಗದೆ, ವಿಲಾಸಿ ಜೀವನ, ದುಶ್ಚಟಗಳಿಗೆ ಹಣ ಹೊಂದಿಸಲು ಕಳ್ಳತನ ವೃತ್ತಿಗೆ ಇಳಿದಿದ್ದ. 2019ರಿಂದ ನಗರದ ಬೇರೆ ಬೇರೆ ಭಾಗಗಳಲ್ಲಿ ಬೈಕ್‌ ಕಳವು, ಸುಲಿಗೆ, ಮನೆಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ, ಹೀಗೆ ಸುಮಾರು 25 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರಘು, ಹಲವು ಬಾರಿ ಜೈಲಿಗೆ ಹೋಗಿದ್ದರೂ ಜಾಮೀನು ಪಡೆದು ಹೊರಬಂದು ಪುನಃ ತನ್ನ ಚಾಳಿ ಮುಂದುವರಿಸಿದ್ದ. ಕಳ್ಳತನ ಮಾಡಲು ಮುಬಾರಕ್‌, ನಾಗರಾಜ, ಮುರುಗನ್‌ ಎಂಬ ಹುಡುಗರ ಪಡೆ ಕಟ್ಟಿಕೊಂಡಿದ್ದ ಆರೋಪಿ, ರಸ್ತೆ ಬದಿ ನಿಲ್ಲಿಸು ತ್ತಿದ್ದ ಬೈಕ್‌ಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ. ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್‌ ಮಾಡಿಕೊಂಡು ಕಳವು ಮಾಡಿ ಕದ್ದ ಆಭರಣ, ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next