Advertisement
ಕುಮಾರೀ, ಜೇನು ಹಾಗೂ ದಾಲ್ಚಿನಿ ಫೇಸ್ಮಾಸ್ಕ್ಕುಮಾರೀ ರಸದಲ್ಲಿ ಮೊಡವೆಯಲ್ಲಿನ ಬ್ಯಾಕ್ಟೀರಿಯಾ ನಿವಾರಕ, ಜೀವಾಣು ನಿರೋಧಕ ಗುಣಗಳಿವೆ. ಜೇನು ಹಾಗೂ ದಾಲಿcàನಿ ಹುಡಿಯಲ್ಲಿಯೂ ರೋಗಾಣುನಾಶಕ ಗುಣಗಳಿವೆ. ಜೊತೆಗೆ ಜೇನು ಕಲೆ ನಿವಾರಕ, ಕಾಂತಿವರ್ಧಕ. ದಾಲಿcàನಿ ಪುಡಿ ಮೊಡವೆ ಬೇಗ ಮಾಯಲು ಸಹಕಾರಿ.
Related Articles
ದೊಡ್ಡ ಕೆಂಪು ಮೊಡವೆಗಳನ್ನು ಮಾಯಿಸಲು ಹಾಗೂ ಕಲೆಯನ್ನು ನಿವಾರಿಸಲು ಇದು ಸಹಾಯಕ.
Advertisement
ವಿಧಾನ: 1/2 ಕಪ್ ಕೊಬ್ಬರಿ ಎಣ್ಣೆಗೆ 1/2 ಕಪ್ ಸಕ್ಕರೆ ಬೆರೆಸಿ ಚೆನ್ನಾಗಿ ಕಲಕಬೇಕು. ಕೊನೆಯಲ್ಲಿ ಒಂದೂಕಾಲು ಕಪ್ ಎಲೋವೆರಾದ ರಸ ಅಥವಾ ತಿರುಳು ಬೆರೆಸಬೇಕು. ಇದನ್ನು ಫ್ರಿಜ್‌ನಲ್ಲಿಟ್ಟು ವಾರಕ್ಕೆ 2-3 ಬಾರಿ ಬಳಸಬಹುದು. ಕಣ್ಣಿನ ಸುತ್ತಲಿನ ಭಾಗವನ್ನು ಬಿಟ್ಟು ಉಳಿದ ಭಾಗಕ್ಕೆ ಲೇಪಿಸಿ, ತುದಿ ಬೆರಳುಗಳಿಂದ ಮೃದುವಾಗಿ ಮಾಲೀಶು ಮಾಡಬೇಕು. ಇದರಿಂದ ಮೃತಚರ್ಮ ನಿವಾರಣೆ (ಎಕ್ಸ್ ಫೋಲಿಯೇಶನ್) ಉಂಟಾಗಿ, ಮೊಡವೆ, ಕಲೆ ನಿವಾರಣೆಯಾಗುತ್ತದೆ. ಮೊಡವೆ ನಿವಾರಣೆ, ಕಲೆನಿವಾರಣೆ ಜೊತೆಗೆ ಚಳಿಗಾಲದಲ್ಲಿ ಚರ್ಮವನ್ನು ಮಾಯಿಶ್ಚರೈಸ್ ಮಾಡಿ ತೇವಾಂಶವನ್ನು ವರ್ಧಿಸಲು ಪರಿಣಾಮಕಾರಿ ಮನೆಮದ್ದು:
ಬೇಕಾಗುವ ಸಾಮಗ್ರಿ: 1 ಕಪ್ ಎಲೋವೆರಾ ತಿರುಳು, 1/2 ಕಪ್ ಕೊಬ್ಬರಿ ಎಣ್ಣೆ , 10 ಚಮಚ ಜೊಜೋಬಾ ತೈಲ, 15 ಚಮಚ ಜೇನುಮೇಣ (ಅಥವಾ ಬೀವ್ಯಾಕ್ಸ್ ಬಾರ್‌ನ 3/4 ಭಾಗ), ಲ್ಯಾವೆಂಡರ್ ತೈಲ 5-8 ಹನಿ.
ವಿಧಾನ: ಕೊಬ್ಬರಿ ಎಣ್ಣೆ, ಜೇನುಮೇಣ ಹಾಗೂ ಜೊಜೊಬಾ ತೈಲ ಸಣ್ಣ ಉರಿಯಲ್ಲಿ ಬಿಸಿಮಾಡಿ ಚೆನ್ನಾಗಿ ಕಲಕಬೇಕು. ತದನಂತರ ಗ್ಲಾಸ್ ಬ್ಲೆಂಡರ್‌ನಲ್ಲಿ ಹಾಕಿ ಸರಿಯಾಗಿ ತಣ್ಣಗಾಗಲು ಬಿಡಬೇಕು. ಒಂದು ಅಥವಾ ಒಂದೂವರೆ ಗಂಟೆಯ ಬಳಿಕ ಗ್ಲಾಸ್ ಬ್ಲೆಂಡರ್‌ನ ಮಿಶ್ರಣವನ್ನು ಪುನಃ ಮಿಶ್ರ ಮಾಡಿ, ನಿಧಾನವಾಗಿ ಬ್ಲೆಂಡ್ ಮಾಡಬೇಕು. ಈ ಮಿಶ್ರಣಕ್ಕೆ ಎಲೋವೆರಾ ತಿರುಳು ಅಥವಾ ಜೆಲ್ ಬೆರೆಸಿ ಪುನಃ ಚೆನ್ನಾಗಿ ಕಲಕಬೇಕು. ಕೊನೆಯಲ್ಲಿ ಲ್ಯಾವೆಂಡರ್ ತೈಲ 10 ಹನಿ ಬೆರೆಸಿ ಮಿಶ್ರಣವನ್ನು ಗಾಳಿಯಾಡದ ಗಾಜಿನ ಬಾಟಲಲ್ಲಿ ಸಂಗ್ರಹಿಸಿ ಇಡಬೇಕು. ಇದನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟರೆ 3-4 ತಿಂಗಳುಗಳ ಕಾಲ ಬಳಸಬಹುದು. ಮನೆಯಲ್ಲೇ ಫೇಸ್ವಾಶ್ಕುಮಾರಿಯರಿಗೆ ಉತ್ತಮ ಫೇಸ್‌ವಾಶ್-ಕುಮಾರೀ ತಿರುಳಿನಿಂದ ಮನೆಯಲ್ಲೇ ಈ ವಿಧಾನಲ್ಲಿ ತಯಾರಿಸಬಹುದು. ಸಾಮಗ್ರಿಗಳು: ಕುಮಾರೀ ಎಲೆಯ ತಿರುಳು, ಸೋಪ್ ಬಾರ್, ಬೇಕಿಂಗ್ ಸೋಡಾ, ಜೇನು ಹಾಗೂ ಫಿಲ್ಟರ್ ಮಾಡಿದ ನೀರು 1 ಕಪ್.
ವಿಧಾನ: ಸ್ವಲ್ಪ ನೀರಿನಲ್ಲಿ 4 ಚಮಚ ಬೇಕಿಂಗ್ ಸೋಡಾವನ್ನು ಕರಗಿಸಿ ಇಡಬೇಕು. ತೀಕ್ಷ್ಣ ಗುಣವಿಲ್ಲದ ಸೋಪ್‌ಬಾರನ್ನು ತೆಗೆದುಕೊಂಡು ಅದನ್ನು ಗ್ರೇಟ್ (ತುರಿಯಬೇಕು) 8 ಚಮಚದಷ್ಟು ಸೋಪ್ ತುರಿಯನ್ನು ಒಂದು ಬೌಲ್‌ನಲ್ಲಿ ತೆಗೆದುಕೊಳ್ಳಬೇಕು. ಒಂದು ಸಾಸ್‌ಪ್ಯಾನ್‌ನಲ್ಲಿ 1 ಕಪ್ (20ml) ನೀರನ್ನು ಬಿಸಿ ಮಾಡಿ, ಅದನ್ನು ಸೋಪ್ ತುರಿ ಇರುವ ಬೌಲ್‌ನಲ್ಲಿ ನಿಧಾನವಾಗಿ ಕಲಕುತ್ತಾ ಸುರಿಯಬೇಕು. ಸರಿಯಾಗಿ ಸೋಪ್‌ತುರಿ ಕರಗುವವರೆಗೆ ಚೆನ್ನಾಗಿ ಮಿಶ್ರಮಾಡಬೇಕು. ತದನಂತರ ಬೇಕಿಂಗ್ ಸೋಡಾ ಮಿಶ್ರಮಾಡಿದ ನೀರನ್ನು ಹಾಕಿ ಕಲಕಬೇಕು. ಕೊನೆಯಲ್ಲಿ 3 ದೊಡ್ಡ ಚಮಚ ಎಲೋವೆರಾದ ತಿರುಳು, 2 ದೊಡ್ಡ ಚಮಚ ಜೇನು ಬೆರೆಸಿ ಚೆನ್ನಾಗಿ ಮಿಶ್ರಮಾಡಿದರೆ ಎಲೋವೆರಾ ಜೇನುತುಪ್ಪದ ಫೇಸ್‌ವಾಶ್ ರೆಡಿ. ಇದನ್ನು ಒಂದು ಬಾಟಲಲ್ಲಿ ಸಂಗ್ರಹಿಸಿ ಇಡಬೇಕು.
ಬಳಸುವ ವಿಧಾನ: ಮೊದಲು ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಬೇಕು. 1-2 ಚಮಚದಷ್ಟು ಕುಮಾರೀ ಫೇಸ್‌ವಾಶ್‌ನ್ನು ಅಂಗೈಯಲ್ಲಿ ತೆಗೆದುಕೊಂಡು, ತುದಿ ಬೆರಳುಗಳಿಂದ ಮುಖಕ್ಕೆ ವರ್ತುಲಾಕಾರದಲ್ಲಿ ಮಾಲೀಶು ಮಾಡಬೇಕು. 2-3 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದರೆ ಮುಖ ಕಾಂತಿಯುತ ಹಾಗೂ ಫ್ರೆಶ್ ಆಗುತ್ತದೆ. ದಿನಕ್ಕೆ 1-2 ಬಾರಿ ನಿತ್ಯ ಬಳಸಿದರೆ ಶ್ರೀಘ್ರ ಮೊಡವೆ, ಕಲೆ ನಿವಾರಣೆಯಾಗುತ್ತದೆ. ಕುಮಾರೀ ಜ್ಯೂಸ್ ಸೇವನೆ: 1-2 ಚಮಚ ಎಲೋವೆರಾದ ರಸವನ್ನು 1 ಕಪ್ ನೀರಿಗೆ ಸೇರಿಸಿ, ನಿತ್ಯ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಮೊಡವೆ ನಿವಾರಕ. ಹೀಗೆ ಕುಮಾರಿಯರ ಮನೆಯಲ್ಲಿ ಕುಮಾರೀ ಗಿಡವೊಂದಿದ್ದರೆ ಮೊಡವೆಯ ಗೊಡವೆ ಇಲ್ಲ ! ಡಾ. ಅನುರಾಧಾ ಕಾಮತ್