Advertisement

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

12:41 PM Oct 24, 2024 | Team Udayavani |

ಅಂಕಾರ-ಟರ್ಕಿ: ಟರ್ಕಿ ರಾಜಧಾನಿ ಅಂಕಾರ ಸಮೀಪದ ಟರ್ಕಿಶ್‌ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಕಂಪನಿ (TUSAS) ಮೇಲೆ ಬುಧವಾರ (ಅ.23) ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಮೃ*ತಪಟ್ಟಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ದಾಳಿಯ ಬೆನ್ನಲ್ಲೇ ಟರ್ಕಿ ಇರಾಕ್‌ ಮತ್ತು ಸಿರಿಯಾದಲ್ಲಿನ ಕುರ್ದಿಶ್‌ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇರಾಕ್‌, ಸಿರಿಯಾದಲ್ಲಿರುವ 30ಕ್ಕೂ ಅಧಿಕ ಕುರ್ದಿಶ್‌ ಅಡಗುತಾಣಗಳನ್ನು ವೈಮಾನಿಕ ದಾಳಿಯಲ್ಲಿ ಧ್ವಂಸಗೊಳಿಸಿರುವುದಾಗಿ ಟರ್ಕಿ ರಕ್ಷಣಾ ಸಚಿವಾಲಯ ಖಚಿತಪಡಿಸಿರುವುದಾಗಿ ವರದಿ ವಿವರಿಸಿದೆ.

ಬುಧವಾರ ಟರ್ಕಿಯ ಮೇಲೆ ಶಂಕಿತ ಕುರ್ದಿಶ್‌ ಭಯೋತ್ಪಾದಕರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಟರ್ಕಿ ಪ್ರತೀಕಾರವಾಗಿ ಸಿರಿಯಾ, ಇರಾಕ್‌ ನಲ್ಲಿರುವ ಕುರ್ದಿಶ್‌ ನೆಲೆಗಳ ಮೇಲೆ ದಾಳಿ ನಡೆಸಿದೆ.

ದಾಳಿಕೋರರ ಹತ್ಯೆ:

Advertisement

ಪುರುಷ ಮತ್ತು ಮಹಿಳಾ ದಾಳಿಕೋರರು ಕೈಯಲ್ಲಿ ಎಕೆ47 ಗನ್‌ ಹಿಡಿದು ಏಕಾಏಕಿ ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರೂ ದಾಳಿಕೋರರನ್ನು ಟರ್ಕಿ ಸೇನೆ ಹೊಡೆದುರುಳಿಸಿದೆ ಎಂದು ವರದಿ ತಿಳಿಸಿದೆ.

ಟರ್ಕಿ ಮೇಲಿನ ದಾಳಿಯ ಹಿಂದೆ ಕುರ್ದಿಶ್‌ ವರ್ಕರ್ಸ್‌ ಪಾರ್ಟಿ(PKK) ಕೈವಾಡ ಇದ್ದಿರುವುದಾಗಿ ಟರ್ಕಿ ಆರೋಪಿಸಿದ್ದು, ದಾಳಿಕೋರರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next