Advertisement
ಕಾಲೇಜ್ ಆವರಣದಲ್ಲಿರುವ ವಸತಿ ನಿಲಯ ವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿದ್ದು, ವಸತಿ ಕಟ್ಟಡ ಸ್ವತ್ಛತೆಗೆ ರಾಜ್ಯ ಸರ್ಕಾರ ಹಣ ನೀಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವಿದ್ಯಾರ್ಥಿಗಳು ಹೇಳಿದರು.
Related Articles
Advertisement
ವಸತಿ ನಿಲಯದ ಕಟ್ಟಡದಲ್ಲಿ ರಾಶಿ ರಾಶಿ ಕಸ, ತರಕಾರಿಯಲ್ಲಿ ಸೊಳ್ಳೆಗಳ ದಂಡು, ಅಡುಗೆ ಕೋಣೆಯಲ್ಲಿನ ಕಸ ವಾರವಾದರೂ, ಹೊರಗೆ ಚೆಲ್ಲದ ಪರಿಣಾಮ ಅಡುಗೆ ತುಂಬಾ ಸೊಳ್ಳೆಗಳು ರಾಶಿ ರಾಶಿ ಇವೆ. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸನಾಯ್ಕ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದೇ ಇಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಕೇಂದ್ರದ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ವಿದ್ಯಾರ್ಥಿಗಳ ಒತ್ತಾಯವಾಗಿದೆ.
“ಸರ್ಕಾರದಿಂದ ಅನುದಾನ ಸಕಾಲದಲ್ಲಿ ಬಿಡುಗಡೆಯಾಗುತ್ತಿಲ್ಲ. ವಸತಿ ನಿಲಯ ನಡೆಸಲು ಕೂಡ ಸಕಾಲದಲ್ಲಿ ಅನುದಾನ ನೀಡುತ್ತಿಲ್ಲ. ಸ್ವಂತ ಹಣದಲ್ಲಿ ವಸತಿ ನಿಲಯ ನಡೆಸಲಾಗುತ್ತಿದೆ. ಅಡುಗೆ ಸಹಾಯಕರು ಹೇಳಿದ ಮಾತೇ ಕೇಳಲ್ಲ.” ●ಅಶ್ವತ್ಥಪ್ಪ, ನಿಲಯ ಪಾಲಕರು
“ಎರಡು, ಮೂರು ಬಾರಿ ಭೇಟಿ ನೀಡಿದ್ದೆ. ಆಗ ಸ್ವತ್ಛತೆಯಿಂದ ಕೂಡಿತ್ತು. ಇತ್ತೀಚೆಗೆ ಭೇಟಿ ನೀಡಿಲ್ಲ. ಪರಿಶೀಲನೆ ಮಾಡುತ್ತೇನೆ.” ●ಶ್ರೀನಿವಾಸ ನಾಯ್ಕ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪಾವಗಡ
“ವಸತಿ ನಿಲಯದಲ್ಲಿ ಮೇನು ಪ್ರಕಾರ ಊಟ ಇಲ್ಲ. ಕೇಳಿದರೆ ದೌರ್ಜನ್ಯ ಮಾಡುತ್ತಾರೆ. ಊಟ ಕಡಿಮೆ ಬಂದರು ಕೇಳುವಂತಿಲ್ಲ. ಊಟದ ಸಮಯದಲ್ಲಿ ನಿಲಯ ಪಾಲಕರೆ ಇರುವುದಿಲ್ಲ. ಯಾರನ್ನು ಕೇಳಬೇಕು.” ●ಹೆಸರು ಹೇಳದ ವಿದ್ಯಾರ್ಥಿಗಳು