Advertisement
ಕಡಲ್ಗಳ್ಳರ ಕುರಿತಾದ ರೋಮಾಂಚಕ ಹಾಲಿವುಡ್ ಸಿನಿಮಾ “ಪೈರೇಟ್ಸ್ ಆಫ್ ದಿ ಕೆರೆಬಿಯನ್’. ಈ ಸಿನಿಮಾದ ಐದೂ ಅವತರಣಿಕೆಗಳು ಬಾಕ್ಸಾಫೀಸಿನಲ್ಲಿ ಹಿಟ್ ಎನಿಸಿಕೊಂಡಿದ್ದವು. ಇದು ನಾಯಕ ನಟ ಜಾನಿ ಡೆಪ್‌ಗೆ ಮರುಜೀವ ನೀಡಿದ ಚಿತ್ರವೂ ಹೌದು. ಈ ಸಿನಿಮಾದಲ್ಲಿ ಆತ ಕಡಲ್ಗಳ್ಳ, ಆತನ ಮಾಯಾವಿ ಹಡಗಿನ ಹೆಸರೇ “ಬ್ಲ್ಯಾಕ್ ಪರ್ಲ್’. ಅದರಿಂದಲೇ ಪ್ರೇರಣೆ ಪಡೆದಿದೆ ಈ ರೆಸ್ಟೋರೆಂಟು.
ಒಳಗೆ ಕಾಲಿಟ್ಟರೆ ಹಡಗಿನೊಳಗೆ ಕಾಲಿಟ್ಟ ಅನುಭವವಾಗುವುದು. ಅಲ್ಲದೆ ಹಡಗಿನಲ್ಲಿರುವಂತೆ ಅಪ್ಪರ್ ಡೆಕ್, ಲೋಯರ್ ಡೆಕ್ ಕೂಡಾ ಇದೆ. ಮೇಲಿನಿಂದ ಕಾಣುವ ವಿಹಂಗಮ ನೋಟ ತುಂಬಾ ಚೆನ್ನಾಗಿರುತ್ತದೆ ಎನ್ನುವುದು ಗ್ರಾಹಕರ ಅಭಿಪ್ರಾಯ. ಇಲ್ಲಿನ ಕುರ್ಚಿ ಟೇಬಲ್‌ಗಳೂ ಬ್ರಿಟಿಷರ ಕಾಲದಲ್ಲಿ ತಯಾರಿಸಲ್ಪಟ್ಟಂತೆ ತೋರುತ್ತದೆ. ನಿಧಿಶೋಧನೆ ಕಡಲ್ಗಳ್ಳರ ಭಾಗವಾಗಿರುವುದರಿಂದ ನಕಲಿ ಅಸ್ಥಿಪಂಜರಗಳ ಗೊಂಬೆಯನ್ನೂ ತೂಗುಹಾಕಿದ್ದಾರೆ. ಅಂದ ಹಾಗೆ, ಅವು ಭಯ ಹುಟ್ಟಿಸುವುದಿಲ್ಲ. ಇಲ್ಲಿ ಗ್ರಾಹಕರಿಗೆ ಆಹಾರವನ್ನು ಸರ್ವ್ ಮಾಡುವವರು ಮಾಮೂಲಿ ಕೆಲಸಗಾರರಲ್ಲ, ಕಡಲ್ಗಳ್ಳರು. ಅಸಲಿ ಕಡಲ್ಗಳ್ಳರೇನಲ್ಲ, ಸರ್ವರ್‌ಗಳೇ ಕಡಲ್ಗಳ್ಳರ ವೇಷ ತೊಟ್ಟು ನಗುಮೊಗದಿಂದ ಗ್ರಾಹಕರನ್ನು ಸ್ವಾಗತಿಸುತ್ತಾರೆ.
ವಾರಾಂತ್ಯದಲ್ಲಿ ಹೋಗುವುದಾದರೆ ಮುಂಚಿತವಾಗಿ ಟೇಬಲ್ ಬುಕ್ ಮಾಡುವುದು ಒಳಿತು. ವೆಜ್ ಮತ್ತು ನಾನ್‌ವೆಜ್ ಭಕ್ಷ್ಯಗಳು
ಇಲ್ಲಿನ ಗ್ರಿಲ್ ಕೌಂಟರ್‌ನಲ್ಲಿ ನಾನ್‌ವೆಜ್ ತಿನಿಸುಗಳು ಮತ್ತು ಹಸಿ ತರಕಾರಿಗಳನ್ನು ಉಪ್ಪು, ಖಾರ ಹಾಕಿ ಬೇಯಿಸಿಕೊಡುತ್ತಾರೆ. ಇದಲ್ಲದೆ ಇನ್ನೂ ಹತ್ತು ಹಲವು ಬಗೆಯ ಸ್ಟಾರ್ಟರ್‌ಗಳು ಇಲ್ಲಿ ಲಭ್ಯ. ಮಚ್ಚಿ ಟಿಕ್ಕಾ, ರುಮಾಲಿ ರೋಟಿ, ಕ್ರಿಸ್ಪಿ ಪನೀರ್, ಮಶ್ರೂಮ್ ತಂದೂರಿ, ಎಗ್ ಕುರ್ಮಾ ರೆಸ್ಟೋರೆಂಟಿನ ವೈಶಿಷ್ಟé. ಭೋಜನಪ್ರಿಯರು ಇಲ್ಲಿನ ಬಫೆ ಪ್ರಯತ್ನಿಸಬಹುದು.
Related Articles
ಏನೇನು ಸ್ಪೆಷೆಲ್?: ಕಾರ್ನ್ ಫ್ರೈ, ಮಚ್ಚಿ ಟಿಕ್ಕಾ, ಮಶ್ರೂಮ್ ತಂದೂರಿ
Advertisement