ಉಡುಪಿ: ಕಿದಿಯೂರು ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ. 31ರಂದು ನಡೆಯಲಿರುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿ ಯಾಗಿ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ಶನಿವಾರ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ನಾಗಮಂಡಲಕ್ಕೆ ಹರಿದು ಬಂದ ಹಸುರು ಹೊರೆಕಾಣಿಕೆ ಅಕ್ಷಯವಾಗಲಿ ಎನ್ನುವ ಸದಾಶಯದೊಂದಿಗೆ ಸೇರಿನಲ್ಲಿರುವ ಅಕ್ಕಿಯನ್ನು ಕಳಸಕ್ಕೆ ಸುರಿಯುವ ಮೂಲಕ ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೋತಿಷ ವಿದ್ವಾನ್ ಶ್ರೀನಿವಾಸ ಭಟ್ ಕುತ್ಪಾಡಿ ಧಾರ್ಮಿಕ ಉಪನ್ಯಾಸ ನೀಡಿ, ಭಗವಂತನ ವಿಶೇಷ ಸಾನ್ನಿಧ್ಯವಿರುವಲ್ಲಿ ನಾವು ಆರಾಧನೆ ಮಾಡುತ್ತಾ ಬಂದಿದ್ದೇವೆ. ಅದರಲ್ಲಿ ಪ್ರಮುಖವಾದುದು ನಾಗದೇವರ ಆರಾಧನೆ. ಪ್ರಕೃತಿಯಲ್ಲಿ ನಾಗನ ಶಕ್ತಿಗೆ ತಲೆಬಾಗದವರಿಲ್ಲ. ಈ ನೆಲೆಯಲ್ಲಿ ಭಕ್ತರ ಇಷ್ಟಾರ್ಥವನ್ನು ಕರುಣಿಸುವ ನಾಗದೇವರ ಆರಾಧನೆಯಿಂದ ಸಕಲ ಭಾಗ್ಯಗಳು ಲಭಿಸಲಿವೆ ಎಂದರು.
ಕಿದಿಯೂರು ಹೊಟೇಲ್ಸ್ ನ ಎಂಡಿ, ಸೇವಾಕರ್ತ ಭುವನೇಂದ್ರ ಕಿದಿಯೂರು, ನಾಗಮಂಡಲದ ಸಮಗ್ರ ಮಾರ್ಗದರ್ಶಕ, ಜೋತಿಷಿ ವೇ|ಮೂ| ಕಬಿಯಾಡಿ ಜಯರಾಮ ಆಚಾರ್ಯ, ಕಡೆಕಾರು ಜೈಮಾತಾ ಹೊಟೇಲ್‌ನ ಎಂಡಿ ಎರ್ಮಾಳ್ ಶಶಿಧರ್ ಶೆಟ್ಟಿ, ಸಾಯಿರಾಧಾ ಸಮೂಹ ಸಂಸ್ಥೆಯ ಎಂಡಿ ಮನೋಹರ ಎಸ್. ಶೆಟ್ಟಿ, ಹೊಟೇಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಕಾಪು ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಕಾಪು, ಉದ್ಯಾವರ ಹದಿನಾಲ್ಕು ಪಟ್ಣ ಮೊಗವೀರ ಮಹಾಜನ ಸಂಘದ ಆಧ್ಯಕ್ಷ ಕೇಶವ ಕೋಟ್ಯಾನ್, ನಾಗಮಂಡಲ ಆಯೋಜನ ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಸಾಲ್ಯಾನ್ ಮಸ್ಕತ್, ಗಂಗಾಮತಸ್ಥ ಅಧ್ಯಕ್ಷರಾದ ವಿಜಯ ಪುತ್ರನ್, ಉದಯ ಕುಮಾರ್, ಶಾಂತಾ ಎಲೆಕ್ಟ್ರಿಕಲ್ಸ್‌ನ ಶ್ರೀಪತಿ ಭಟ್ , ಶಿವಾನಂದ ಕೋಟ್ಯಾನ್ ಮಸ್ಕತ್ ಉಪಸ್ಥಿತರಿದ್ದರು.
ಭಜನ ಒಕ್ಕೂಟ ಅಧ್ಯಕ್ಷ ಧನಂಜಯ ಕಾಂಚನ್ ಮಲ್ಪೆ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ನಿರೂಪಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ವಂದಿಸಿದರು.
ಸಮ್ಮಾನ-ಅಭಿನಂದನೆ
ಉರಗ ರಕ್ಷಕ ಕೆ. ಹರೀಶ್ ಕುಮಾರ್, ರಕ್ತದ ಆಪದಾºಂಧವ ಸತೀಶ್ ಸಾಲ್ಯಾನ್ ಮಣಿಪಾಲ, ಅಂತಾರಾಷ್ಟ್ರೀಯ ಕ್ರೀಡಾಪಟು ತನ್ವಿ ಜಗದೀಶ್, ಕಿದಿಯೂರು ಹೊಟೇಲ್‌ನ ಫ್ರಂಟ್ ಆಫೀಸ್ ಸಿಬಂದಿ ವಿಲಾಸ್ ಅವರನ್ನು ಸಮ್ಮಾನಿಸಲಾಯಿತು. ಹೊಟೇಲ್‌ನಲ್ಲಿ 25 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿರುವ ಸಿಬಂದಿಯನ್ನು ಅಭಿನಂದಿಸಲಾಯಿತು.