Advertisement

ಈ ಪಂಚತಾರಾ ಹೋಟೆಲ್ ಕಾಮುಕ ಮ್ಯಾನೇಜರ್ ಮಾಡಿದ್ದೇನು ಗೊತ್ತಾ?

02:41 PM Aug 18, 2017 | Team Udayavani |

ನವದೆಹಲಿ:ಪ್ರತಿಷ್ಠಿತ ಪಂಚತಾರಾ ಹೋಟೆಲ್ ವೊಂದರ ಸೆಕ್ಯುರಿಟಿ ಮ್ಯಾನೇಜರ್ ಮಹಿಳಾ ಸಿಬ್ಬಂದಿಯ ಸೀರೆಯನ್ನು ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

Advertisement

ಎಎನ್ಐ ವರದಿ ಪ್ರಕಾರ, ಕಾಮುಕ ಮ್ಯಾನೇಜರ್ ಮಹಿಳಾ ಸಿಬ್ಬಂದಿಯ ಸೀರೆಯನ್ನು ಎಳೆದು ಲೈಂಗಿಕ ಕಿರುಕುಳ ನೀಡುತ್ತಿರುವ ದೃಶ್ಯ ಹೋಟೆಲ್ ನ ಸಿಸಿಟಿವಿಯಲ್ಲಿ ಸರೆಯಾಗಿದೆ. ಸೆಕ್ಯುರಿಟಿ ಮ್ಯಾನೇಜರ್ ಆಕೆಯ ಸೀರೆ ಬಿಚ್ಚಲು ಯತ್ನಿಸಿದ್ದ!.

ಈ ರಂಪಾಟದ ನಂತರ 33 ವರ್ಷದ ಮಹಿಳೆಯನ್ನು ಹೋಟೆಲ್ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿ ವಿವರಿಸಿದೆ. ಕಳೆದ 2 ವರ್ಷದಿಂದ ಸಂತ್ರಸ್ತ ಮಹಿಳೆ ಹೋಟೆಲ್ ನ ಗೆಸ್ಟ್ ಸೆಕ್ಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದೆ. ಸೆಕ್ಯುರಿಟಿ ಮ್ಯಾನೇಜರ್ ಪವನ್ ಬಲವಂತವಾಗಿ ದೈಹಿಕ ಸಂಪರ್ಕಕ್ಕಾಗಿ ಒತ್ತಾಯಿಸಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

ಇಡೀ ಘಟನೆ ಬಗ್ಗೆ ಮಹಿಳಾ ಆಯೋಗದ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕೆ ತಿಳಿಸಿದ್ದಾರೆ. ಈಗ ತನ್ನನ್ನು ಕೆಲಸದಿಂದ ತೆಗೆದುಹಾಕಿರುವುದಾಗಿ ಎಎನ್ಐ ಜತೆ ಮಾತನಾಡುತ್ತ ಸಂತ್ರಸ್ತ ಮಹಿಳೆ ವಿವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next