ವಿಶ್ವ ವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಹುಣಸೂರು ನಗರದಲ್ಲಿ 50 ವರ್ಷಗಳ ಹಿಂದೆ ಉಡುಪಿಯ ಸೀತಾರಾಮಯ್ಯ ಈ ಹೋಟೆಲನ್ನು ಪ್ರಾರಂಭಿಸಿದರು. ಇಂದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಸಂಜೀವ ಶೆಟ್ಟರು ನಡೆಸುತ್ತಿದ್ದಾರೆ. ಇಲ್ಲಿ ಬೋರ್ಡಿಂಗ್ ಕೂಡ ಲಭ್ಯ. 14 ರೂಂಗಳಿವೆ. ಶುಚಿ-ರುಚಿಯಲ್ಲಿ ಈ ಹೋಟೆಲ್, ಎತ್ತಿದ ಕೈ.
ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಸಿಗುವ ಹುಣಸೂರು ನಗರದ ಹಳೇ ಸೇತುವೆ ಬಳಿ ಒಂದು ಹೋಟೆಲ್ ಇದೆ. ಅದರ ಹೆಸರೇ ಹೋಟೆಲ್ ದೇವಿ ಪ್ರಸಾದ್. ಇದರ ವಯಸ್ಸು 50 ವರ್ಷ ದಾಟಿದೆ. ಈ ಮಾರ್ಗವಾಗಿ ತೆರಳುವ ಮಂಗಳೂರು-ಕೊಡಗು ಜಿಲ್ಲೆಯ ಕಾಫಿ ಪ್ಲಾಂಟರ್‌ಗಳು ಒಮ್ಮೆ ಈ ಹೋಟೆಲ್ ಹೊಕ್ಕು ಅಲ್ಲಿನ ತಿಂಡಿ ಸವಿದು ನಂತರವೇ ಪ್ರಯಾಣ ಮುಂದವರಿಸುವುದು.
ವಿಶ್ವ ವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಹುಣಸೂರು ನಗರದಲ್ಲಿ ಕಳೆದ 50 ವರ್ಷಗಳ ಹಿಂದೆ ಉಡುಪಿಯ ಸೀತಾರಾಮಯ್ಯ ಈ ಹೋಟೆಲನ್ನು ಪ್ರಾರಂಭಿಸಿದರು. ಇಂದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಸಂಜೀವ ಶೆಟ್ಟರು ನಡೆಸುತ್ತಿದ್ದಾರೆ. ಇಲ್ಲಿ ಬೋರ್ಡಿಂಗ್ ಕೂಡ ಲಭ್ಯ. 14 ರೂಂಗಳಿವೆ. ಶುಚಿ ರುಚಿಯಲ್ಲಿ ಈ ಹೋಟೆಲ್, ಎತ್ತಿದ ಕೈ.
ಇಲ್ಲಿ ಸಿಗುವ ಇಡ್ಲಿ-ಸಾಂಬರ್ ತಿನ್ನಬೇಕು. ಗೊಡಂಬಿಯುಕ್ತ ತುಪ್ಪದ ಖಾರ ಪೊಂಗಲ್ ಬಹಳ ಫೇಮಸ್ಸು. ಇದೆಲ್ಲ ಆದ ಮೇಲೆ ಮರೆಯದೇ ತಿನ್ನಬೇಕಾದದ್ದು ತೈರ್ ವಡೆ. ಇವೆಲ್ಲವೂ ಬೆಳಗಿನ ತಿಂಡಿಯ ಮನು. ಮಧ್ಯಾಹ್ನವಾದರೆ ಹಸಿದ ಹೊಟ್ಟೆಗೆ ರುಚಿ ರುಚಿಯಾದ ಊಟವೂ ಉಂಟು. ತಿಳಿ ಸಾರು, ಅನ್ನದ ಜೊತೆಗೆ ದಕ್ಷಿಣ ಕನ್ನಡ ಶೈಲಿಯ ಊಟವೂ ದೊರೆಯತ್ತದೆ. ಚಿಕ್ಕಮಗಳೂರು ಕಾಫಿ ಬೀಜದಿಂದ ತಯಾರಿಸಿದ ಬಿಸಿಬಿಸಿ ಹಬೆಯಾಡುವ ಕಾಫಿ ಸ್ವಾದಿಷ್ಟವಾಗಿರುತ್ತದೆ.
ಹೇಳಲೇಬೇಕಾದ ವಿಚಾರವೆಂದರೆ, ಈ ಹೋಟೆಲ್ ಸದಾ ಶುಚಿಯಾಗಿರುತ್ತದೆ. ಅಕಸ್ಮಾತ್, ಎಲ್ಲಿಯಾದರೂ ಕಸ ಇತ್ತೆಂದರೆ ಮಾಲೀಕ ಸಂಜೀವಶೆಟ್ಟರು ತಾವೇ ಕಸಪೊರಕೆ ಹಿಡಿದು ಶುಚಿಗೆ ನಿಂತು ಬಿಡುತ್ತಾರೆ.
ಪರಿಸರ ಪ್ರೇಮ ಮೆರೆವ ಸಂಜೀವ ಶೆಟ್ಟರು ಇಲ್ಲಿಗೆ ಬರುವ ಗ್ರಾಹಕರ ವಾಹನ ನಿಲ್ಲಿಸಲು ಹೋಟೆಲ್ ಮುಂಭಾಗ ಅಚ್ಚುಕಟ್ಟಾದ ಪಾರ್ಕಿಗ್ ವ್ಯವಸ್ಥೆ ಮಾಡಿದ್ದಾರೆ. ಅದರ ಮುಂದೆ 3 ಹೊಂಗೆ ಮರ ಬೆಳೆಸಿದ್ದಾರೆ. ನೋಡುಗರಿಗೆ ಫಿಶ್ ಅಕ್ವೇರಿಯಂ ನಿರ್ಮಿಸಿದ್ದಾರೆ, ಹೋಟೆಲ್ ಮುಂಭಾಗದಲ್ಲಿ ಉಗುಳುವುದು, ಕಸ ಬಿಸಾಡುವುದನ್ನು ಸಂಪೂರ್ಣ ನಿಷೇದಿಸಿದ್ದಾರೆ. ಸಂಜೀವ ಶೆಟ್ಟರು ನಗುಮೊಗದಿಂದಲೇ ಎಲ್ಲರನ್ನು ಸ್ವಾಗತಿಸುತ್ತಾ, ಗ್ರಾಹಕರ ಬೇಕು ಬೇಡಗಳನ್ನು ವಿಚಾರಿಸುತ್ತಾ ಮಾಣಿ(ಸಪ್ಲೆ„ಯರ್)ಸ್ವತಹ ಮಾಲೀಕ, ಸ್ವಚ್ಚಗೊಳಿಸುವ ನೌಕರನೂ ಆಗಿ ಪ್ರಾಮಾಣಿಕರಾಗಿ ಕೆಲಸ ನಿರ್ವಹಿಸುತ್ತಿರುವುದರಿಂದಲೇ ಐವತ್ತು ವರ್ಷದ ಇತಿಹಾಸವಿರುವ ಈ ಹೋಟೆಲ್ ಇಂದಿಗೂ ತನ್ನ ಅಸ್ಥಿತ್ವ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ.
ಸಂಪತ್‌ಕುಮಾರ್ ಹುಣಸೂರು