Advertisement

ಚೀನಾದಲ್ಲಿ ಕುಸಿದು ಬಿದ್ದ ಹೋಟೆಲ್: 29 ಮಂದಿ ಸಾವು, ಹಲವರಿಗೆ ಗಾಯ

12:46 PM Aug 30, 2020 | keerthan |

ಬೀಜಿಂಗ್: ಎರಡು ಮಹಡಿಯ ಹೋಟೆಲ್ ಒಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ 29 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಚೀನಾದ ಶ್ಯಾಂಕ್ಸಿ ಪ್ರಾಂಥ್ಯದಲ್ಲಿ ನಡೆದಿದೆ.

Advertisement

ಶೆಂಜ್ಯುವಾಂಗ್ ನ ಜ್ಯುಶಿಯನ್ ರೆಸ್ಟೋರೆಂಟ್ ನಲ್ಲಿ 80 ವರ್ಷದ ವ್ಯಕ್ತಿಯೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತಿತ್ತು. ಇದಕ್ಕಾಗಿ ಸಂಬಂಧಿಕರು ಮತ್ತು ಊರಿನ ಗಣ್ಯರು ಆಗಮಿಸಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಶನಿವಾರ ಈ ಘಟನೆ ನಡೆದಿದ್ದು, ರವಿವಾರ ಬೆಳಗ್ಗಿನ ಜಾವ ತೆರವು ಕಾರ್ಯಾಚರಣೆ ಮುಕ್ತಾಯವಾಗಿದೆ.

ಇದನ್ನೂ ಓದಿ: ಪಂಥಾ ಚೌಕ್ ಎನ್ ಕೌಂಟರ್: ಮೂವರು ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಘಟನೆಯಲ್ಲಿ 29 ಮಂದಿ ಸಾವವನ್ನಪ್ಪಿದ್ದು, 21ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ. 57 ಮಂದಿ ಯನ್ನು ಹೋಟೆಲ್ ನಿಂದ ಹೊರತೆಗೆಯಲಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next