Advertisement
ಸಾವಿರ ವರ್ಷಗಳಿಗೊಮ್ಮೆ ಕಂಡುಬರುವಂಥ “ಹೀಟ್ ಡೋಮ್’ ಎಂಬ ವಿದ್ಯಮಾನವೇ ಅತಿಯಾದ ತಾಪಮಾನ ಹಾಗೂ ಸಾವುನೋವಿಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಪರಿಸರದ ಮೇಲಿನ ಮಾನವನ ಅತಿಯಾದ ದಾಳಿಯಿಂದ ಪರಿಸರೀಯ ಅಸಮತೋಲನ ಉಂಟಾಗಿ ಸೃಷ್ಟಿಯಾಗಿರುವ ಹೀಟ್ ಡೋಮ್(ಉಷ್ಣ ಗುಮ್ಮಟ) ಈ ಎಲ್ಲ ದುರಂತಕ್ಕೆ ಕಾರಣ.
Related Articles
ವಾತಾವರಣದ ಮೇಲ್ಪದರದಲ್ಲಿ ಭಾರೀ ಪ್ರಮಾಣದ ಬಿಸಿಯಾದ ಗಾಳಿಯು ಗುಮ್ಮಟಾಕಾರದಲ್ಲಿ ಸಂಗ್ರಹವಾಗುವುದಕ್ಕೆ ಹೀಟ್ ಡ್ರೋಮ್ ಅಥವಾ ಉಷ್ಣ ಗುಮ್ಮಟ ಎನ್ನುತ್ತಾರೆ.
Advertisement
ಸಾವಿರ ವರ್ಷಗಳಿಗೊಮ್ಮೆಸಾಮಾನ್ಯವಾಗಿ ಇಂಥ ವಿದ್ಯಮಾನವು ಸಾವಿರ ವರ್ಷಗಳಿಗೆ ಒಮ್ಮೆ ಸಂಭವಿಸುವಂಥದ್ದು. ಆದರೆ, ಮಾನವನಿರ್ಮಿತ ಎಡವಟ್ಟುಗಳಿಂದ ಪರಿಸರದಲ್ಲಿ ಕೃತಕ ತಾಪಮಾನ ಹೆಚ್ಚಾಗುತ್ತಿರುವ ಕಾರಣ, ಇಂಥ ವಿದ್ಯಮಾನವು ಇನ್ನು ಆಗಾಗ್ಗೆ ಸಂಭವಿಸುವ ಸಾಧ್ಯತೆಯಿದೆ. ಉಷ್ಣ ಗುಮ್ಮಟ ಸೃಷ್ಟಿಯಾಗುವುದು ಹೇಗೆ?
ಸಮುದ್ರದ ಬಿಸಿ ಗಾಳಿಯನ್ನು ವಾತಾವರಣವು ಟ್ರ್ಯಾಪ್ ಮಾಡಿ ಇಟ್ಟಾಗ ಹೀಟ್ ಡೋಮ್ ಸೃಷ್ಟಿಯಾಗುತ್ತದೆ.
ಬೇಸಗೆಯಲ್ಲಿ ಜೆಟ್ ಸ್ಟ್ರೀಮ್ (ಗಾಳಿಯನ್ನು ಒಂದೆಡೆಯಿಂದ ಮತ್ತೂಂದೆಡೆಗೆ ಸಾಗಿಸುವಂಥದ್ದು) ಉತ್ತರದತ್ತ ಸಂಚರಿಸುತ್ತದೆ
ಬಿಸಿ ಮತ್ತು ನಿಶ್ಚಲ ಗಾಳಿಯು ಮೇಲ್ಭಾಗಕ್ಕೆ ವ್ಯಾಪಿಸಲಾರಂಭಿಸುತ್ತದೆ. ಆಗ, ಅಧಿಕ ಒತ್ತಡವು ವಾತಾವರಣದಲ್ಲಿ ದೊಡ್ಡ ಮುಚ್ಚಳದ ರೂಪದಲ್ಲಿ ನಿರ್ಮಾಣವಾಗುತ್ತದೆ. ಈ ಅವಧಿಯಲ್ಲಿ ಬಿಸಿ ಗಾಳಿಯು ಎಸ್ಕೇಪ್ ಆಗಲು ಯತ್ನಿಸುತ್ತದಾದರೂ, ಮುಚ್ಚಳದ ರೂಪದಲ್ಲಿರುವ ಅಧಿಕ ಒತ್ತಡವು ಆ ಗಾಳಿಯನ್ನು ಮತ್ತೆ ಕೆಳಕ್ಕೆ ದೂಡುತ್ತದೆ. ಡೋಮ್‌ನ ಕೆಳಭಾಗದಲ್ಲಿ ಗಾಳಿಯು ಸಂಕುಚಿತಗೊಂಡು, ಇನ್ನಷ್ಟು ಉಷ್ಣತೆಯನ್ನು ಬಿಡುಗಡೆ ಮಾಡುತ್ತದೆ.
ಗಾಳಿಯು ಬಿಸಿ ಮಾರುತವನ್ನು ಪೂರ್ವದತ್ತ ಚಲಿಸುವಂತೆ ಮಾಡುವಾಗ, ಆ ಗಾಳಿಯನ್ನು ಜೆಟ್ ಸ್ಟ್ರೀಟ್ ಟ್ರ್ಯಾಪ್ ಮಾಡುತ್ತದೆ. ಇದರ ಪರಿಣಾಮದಿಂದಾಗಿ ಉಷ್ಣ ಮಾರುತ ಸೃಷ್ಟಿಯಾಗುತ್ತದೆ.