Advertisement

2019ರಲ್ಲಿ ಅತಿಯಾದ ತಾಪದಿಂದ 3.56 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಮೃತ್ಯು

01:36 AM Aug 21, 2021 | Team Udayavani |

ಹೊಸದಿಲ್ಲಿ : ಜಾಗತಿಕವಾಗಿ ಅತಿಯಾದ ತಾಪದಿಂದ 2019ರಲ್ಲಿ 3.56 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಇದು ವರ್ಷದಿಂದ ವರ್ಷಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂಬುದಾಗಿ “ದ ಲ್ಯಾನ್ಸೆಟ್‌’ ನಿಯತಕಾಲಿಕದಲ್ಲಿ ಈ ವಾರ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.

Advertisement

“ದ ಗ್ಲೋಬಲ್‌ ಬರ್ಡನ್‌ ಆಫ್ ಡಿಸೀಸ್‌ ಓವರ್‌ವ್ಯೂ’ ವರದಿಯಲ್ಲಿ ಈ ಅಂಶವನ್ನು ಪ್ರಸ್ತಾವಿಸಲಾಗಿದೆ. ಜಗತ್ತಿನ ಉಷ್ಣ ಪ್ರದೇಶಗಳಲ್ಲಿ ಅತಿಯಾದ ತಾಪದಿಂದ ಉಂಟಾಗುವ ಮೃತ್ಯುಗಳ ಸಂಖ್ಯೆ ಹೆಚ್ಚು ಎಂದು ಈ ವರದಿ ಹೇಳಿದೆ.

ಇದೇ ನಿಯತಕಾಲಿಕದಲ್ಲಿ ಪ್ರಕಟವಾದ ಇನ್ನೊಂದು ವರದಿ ಆರೋಗ್ಯದ ಮೇಲೆ ಹೆಚ್ಚುತ್ತಿರುವ ತಾಪಮಾನದ ಪರಿಣಾಮಗಳ ಬಗ್ಗೆ ಉಲ್ಲೇಖೀಸಿದೆ. ಪ್ಯಾರಿಸ್‌ ಹವಾಮಾನ ಒಪ್ಪಂದದಲ್ಲಿ ಪ್ರಸ್ತಾವಿಸಲಾಗಿರುವಂತೆ ಜಾಗತಿಕ ಬಿಸಿಯೇರುವಿಕೆಯನ್ನು 2.7 ಡಿಗ್ರಿ ಫ್ಯಾರನ್‌ಹೀಟ್‌ಗೆ ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಭಾರತದಲ್ಲಿ ಸಹಿತ ಮರಣ ಪ್ರಮಾಣ ಹೆಚ್ಚಲಿದೆ, ಜನರ ಉತ್ಪಾದಕತೆಯ ಮೇಲೆಯೂ ಅದು ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next