Advertisement

ಟೇಸ್ಟಿ “ಆಮ್ಲೆಟ್‌’ಜೊತೆ ಹಾಟ್‌ ಸಂಯುಕ್ತಾ

10:10 AM Oct 17, 2019 | Team Udayavani |

ಇತ್ತೀಚೆಗೆ ಸ್ಯಾಂಡಲ್‌ವುಡ್‌ನ‌ಲ್ಲಿ ಅಷ್ಟಾಗಿ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿರದ ನಟಿ ಸಂಯುಕ್ತಾ ಹೊರನಾಡು ಈಗ ಮತ್ತೆ ಗ್ಲಾಮರಸ್‌ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಹೌದು, ಸದ್ಯ ಸಂಯುಕ್ತಾ ಹೊರನಾಡು “ಆಮ್ಲೆಟ್‌’ ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ವಿಭಿನ್ನಪಾತ್ರದಲ್ಲಿ ಸಂಯುಕ್ತಾ ಪ್ರೇಕ್ಷಕರ ಮುಂದೆ ಬರಲಿದ್ದಾರಂತೆ.

Advertisement

ಈ ಹಿಂದೆ “ಡೇ ಇನ್‌ ದಿ ಸಿಟಿ’, “ಕೆಂಪಿರ್ವೆ’, “ಬಬ್ಲೂಷ’ ಹಾಗೂ ತಮಿಳಿನ “ಉನವುರ್‌’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ವೆಂಕಟ್‌ ಭಾರದ್ವಾಜ್‌ “ಆಮ್ಲೆಟ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಓಂಪ್ರಕಾಶ್‌ ಮತ್ತು ಪ್ರಸನ್ನ ಜಂಟಿಯಾಗಿ ನಿರ್ಮಿಸುತ್ತಿರುವ “ಆಮ್ಲೆಟ್‌’ ಚಿತ್ರದ ಚಿತ್ರೀಕರಣ ಸದ್ಯ ಭರದಿಂದ ನಡೆಯುತ್ತಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಪ್ರಾರಂಭದಲ್ಲಿ ಪ್ರೇಕ್ಷಕರು “ಆಮ್ಲೆಟ್‌’ ಟೇಸ್ಟ್‌ ನೋಡಬಹುದು.

ಇನ್ನು “ಆಮ್ಲೆಟ್‌’ ಚಿತ್ರದಲ್ಲಿ ಸಂಯುಕ್ತ ಹೊರನಾಡು ಅವರೊಂದಿಗೆ, ನವೀನ್‌, ನಿರಂಜನ್‌ ದೇಶಪಾಂಡೆ, ಬಿ.ಡಿ ಸತೀಶ್‌ ಚಂದ್ರ, ಶೋಭರಾಜ್‌, ಶರ್ಮಿತ ಗೌಡ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ಆಮ್ಲೆಟ್‌’ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವಿಶಾಖ್‌ ರಾಮಪ್ರಸಾದ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ರಾಕೇಶ್‌ ಅಡಿಗ, ರಾಜ್‌, ಮಹೇಶ್‌ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ. ಸಿ.ಜಿ ಜೈದೇವನ್‌ ಛಾಯಾಗ್ರಹಣ, ಚಂದನ್‌ ಸಂಕಲನ ಚಿತ್ರಕ್ಕಿದೆ. ಇತ್ತೀಚೆಗೆ “ಆಮ್ಲೆಟ್‌’ ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್‌ ಅವರ ಲುಕ್‌ ಹೊರಬಿದ್ದಿದ್ದು, “ಆಮ್ಲೆಟ್‌’ನಂತೆಯೇ ಕೊಂಚ ಹಾಟ್‌ ಆಗಿ ಸಂಯುಕ್ತಾ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next