Advertisement
ಪಾಲಕ್ ಸೂಪ್ಬೇಕಾಗುವ ಸಾಮಗ್ರಿ: ಪಾಲಕ್ ಸೊಪ್ಪು – 1 ಕಟ್ಟು , ನೀರುಳ್ಳಿ- 1, ಕಾರ್ನ್ಪ್ಲೋರ್- 2 ಚಮಚ, ಹಸಿಮೆಣಸಿನ ಕಾಯಿ- 2, ಲವಂಗ- 3, ಚಕ್ಕೆ – 2 ತುಂಡು, ರುಚಿಗೆ ತಕ್ಕಷ್ಟು ಉಪ್ಪು , ತುಪ್ಪ- 2 ಚಮಚ, ಸಕ್ಕರೆ- 1 ಚಮಚ.
ಬೇಕಾಗುವ ಸಾಮಗ್ರಿ: ಪುದೀನ ಎಲೆ- 10, ಕರಿಮೆಣಸಿನ ಪುಡಿ- 1/2 ಚಮಚ, ಬೆಳ್ಳುಳ್ಳಿ ಎಸಳು- 4, ಕೊತ್ತಂಬರಿ ಸೊಪ್ಪು ಕಡ್ಡಿ ಸಮೇತ- 10, ಬೆಣ್ಣೆ – 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಹಾಲಿನ ಕ್ರೀಮ್- 1 ಚಮಚ.
Related Articles
Advertisement
ಕ್ಯಾರೆಟ್ ಸೂಪ್ಬೇಕಾಗುವ ಸಾಮಗ್ರಿ: ಕ್ಯಾರೆಟ್ (ಹೆಚ್ಚಿಕೊಂಡಿದ್ದು)- 1 ಕಪ್, ಶುಂಠಿ- 1 ತುಂಡು, ಈರುಳ್ಳಿ- 1, ಎಣ್ಣೆ- 1 ಚಮಚ, ಕರಿಮೆಣಸಿನ ಪುಡಿ- 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ: ಕ್ಯಾರೆಟ್ ಮತ್ತು ಶುಂಠಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಕುಕ್ಕರ್‌ನಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿ ಈರುಳ್ಳಿ ಹುರಿಯಿರಿ. ಇದಕ್ಕೆ ಹೆಚ್ಚಿ ಕೊಂಡ ಕ್ಯಾರೆಟ್ ಮತ್ತು ಶುಂಠಿಯನ್ನು ಹಾಕಿ ಉಪ್ಪು$ಬೆರೆಸಿ, ನಂತರ ಮುಚ್ಚಳ ಮುಚ್ಚಿ ಎರಡು ವಿಷಲ್ ಕೂಗಿಸಿ. ಇದು ಆರಿದ ನಂತರ, ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಈ ಮಿಶ್ರಣಕ್ಕೆ ಅರ್ಧ ಕಪ್ ನೀರು ಸೇರಿಸಿ, ಕರಿಮೆಣಸಿನ ಪುಡಿ ಹಾಕಿ ಬಿಸಿ ಇರುವಾಗಲೇ ಕುಡಿಯಿರಿ. ಟೊಮೆಟೋ ಸೂಪ್
ಬೇಕಾಗುವ ಸಾಮಗ್ರಿ: ಟೊಮೆಟೊ- 8, ಜೀರಿಗೆ- 2 ಚಮಚ, ಕರಿಮೆಣಸಿನ ಪುಡಿ- 1 ಚಮಚ, ಬೆಳ್ಳುಳ್ಳಿ ಎಸಳು- 4, ದಾಲಿcನಿ ಎಲೆ, ಸಕ್ಕರೆ- 1 ಚಮಚ, ಬೆಣ್ಣೆ- 1 ಚಮಚ, ಜೋಳದ ಪುಡಿ- 2 ಚಮಚ, ರುಚಿಗೆ ಬೇಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ. ತಯಾರಿಸುವ ವಿಧಾನ: ಟೊಮೆಟೊ ಮತ್ತು ಬೆಳ್ಳುಳ್ಳಿಯನ್ನು ಒಂದು ಚಮಚ ತುಪ್ಪದೊಂದಿಗೆ ಬೇಯಿಸಿಕೊಳ್ಳಿ. ನಂತರ ಈ ಮಿಶ್ರಣವನ್ನು ಜೀರಿಗೆಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿರಿ, ಬಳಿಕ ಸೋಸಿಕೊಳ್ಳಬೇಕು.ಇದಕ್ಕೆ ಸಕ್ಕರೆ, ಉಪ್ಪು$, ಕರಿಮೆಣಸಿನ ಪುಡಿ, ಜೋಳದ ಪುಡಿ, ದಾಲಿcàನಿ ಎಲೆ, ತುಪ್ಪಹಾಕಿ ಐದು ನಿಮಿಷ ಚೆನ್ನಾಗಿ ಕುದಿಸಿದರೆ ಸೂಪ್ ರೆಡಿ. ರೈಸ್ ಸೂಪ್
ಬೇಕಾಗುವ ಸಾಮಗ್ರಿ: ಚೆನ್ನಾಗಿ ಮಸೆದ ಬೆಳ್ತಿಗೆ ಅನ್ನ- 4 ಚಮಚ, ಕ್ಯಾರೆಟ್‌ತುರಿ- 2 ಚಮಚ, ನೀರುಳ್ಳಿ ಚೂರು- 3 ಚಮಚ, ಕಾರ್ನ್ಪ್ಲೋರ್- 1 ಚಮಚ, ಕಾಳುಮೆಣಿಸಿನ ಪುಡಿ- 1/2 ಚಮಚ, ನಿಂಬೆರಸ- 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಬೆಣ್ಣೆ ಹಾಕಿ. ಬಿಸಿಯಾದಾಗ ಕ್ಯಾರೆಟ್ ಮತ್ತು ಈರುಳ್ಳಿ ಚೂರು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಸ್ವಲ್ಪ ನೀರಲ್ಲಿ ಕಾರ್ನ್ಪ್ಲೋರ್ ಹಾಕಿ ಕರಗಿಸಿ ಈ ಮಿಶ್ರಣಕ್ಕೆ ಸೇರಿಸಿ. ಇದನ್ನು ಒಲೆಯ ಮೇಲಿಟ್ಟು ಕುದಿಸಿ. ಕುದಿಯಲು ಪ್ರಾರಂಭವಾದಾಗ ಮಸೆದ ಬೆಳ್ತಿಗೆ ಅನ್ನ, ಕರಿಮೆಣಸು ಪುಡಿ, ಉಪ್ಪು, ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಕೆಳಗಿಳಿಸಿ. ನಂತರ ಬೌಲ್‌ಗೆ ಹಾಕಿ ಸವಿಯಿರಿ. ಸ್ವಾತಿ