Advertisement
ಸಾಕಷ್ಟು ಉದಾಹರಣೆ: ಹೋಬಳಿ ವ್ಯಾಪ್ತಿಯ ಮಗ್ಗೆ ಗ್ರಾಪಂಗೆ ಸೇರಿದ ಹೊಸೂರು ಕೊಪ್ಪಲು ಗ್ರಾಮ ಮುಖ್ಯ ರಸ್ತೆ ಸೇರಿ ಕೆಲವು ಗ್ರಾಮದ ರಸ್ತೆ ಗಳು ಸ್ವಲ್ಪ ಮಳೆಯಾದರೆ ಸಾಕು ಕೆಸರುಗದ್ದೆಯಂತಾಗುತ್ತವೆ. ಡಾಂಬರಿಕರಣ ಕಾಣದೆ ರಸ್ತೆಗಳು ಭಾರೀ ಪ್ರಮಾಣದಲ್ಲಿ ಹದಗೆಟ್ಟಿದ್ದು ಇದು ರಸ್ತೆಯೇ ಎಂಬ ಸಂದೇಹ ಜನಸಾಮಾನ್ಯರಲ್ಲಿ ಮೂಡುತ್ತಿದೆ. ರಾತ್ರಿ ವೇಳೆ ಗುಂಡಿಗಳು ಕಾಣದೆ ಎಷ್ಟೋ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಈ ಮಾರ್ಗದಲ್ಲಿ ಓಡಾಡುವ ಜನ ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ.
Related Articles
Advertisement
ತಾಲೂಕು ಆಡಳಿತಕ್ಕೆ ತಿಳಿಸಿದ್ದರೂ ಪ್ರಯೋಜನವಿಲ್ಲಹಲವು ವರ್ಷಗಳಿಂದ ಹದಗೆಟ್ಟ ರಸ್ತೆ ಬಗ್ಗೆ ಹೋಬಳಿ ಮಟ್ಟದ ರೈತ ಸಂಘತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೂ ಇದುವರೆಗೂ ಗಮನ ಹರಿಸಿಲ್ಲ. ಈ ಭಾಗದ ಜನ ಒಂದು ಕಡೆಕಾಡಾನೆಯಿಂದ ಇನ್ನೊಂದೆಡೆ ಹದಗೆಟ್ಟ ರಸ್ತೆಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಮೂಲಕ ಮೂಲಭೂತ ಸೌಕರ್ಯ ಪಡೆಯಬೇಕಾದ ಪರಿಸ್ಥಿತಿ ಇದೆ ಎಂದು ಕೆ.ಹೊಸಕೋಟೆ ಹೋಬಳಿ ರೈತಸಂಘದ ಮುಖಂಡರಾದ ಜಯಣ್ಣ ಹೈದೂರು ತಿಳಿಸಿದ್ದಾರೆ. ಕೆಲವು ರಸ್ತೆಗಳ ಬಗ್ಗೆ ಹಲವು ದೂರು ಬಂದಿದ್ದು ಮಳೆ ನಿಂತ ತಕ್ಷಣ ರಸ್ತೆಗಳ ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು, ಗ್ರಾಪಂ ಸಭೆಯಲ್ಲಿ ಸದಸ್ಯರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
– ಶಿವಲಿಂಗಪ್ಪ, ಪಿಡಿಒ, ಮಗ್ಗೆ ಗ್ರಾಪಂ – ಟಿ.ಕೆ.ಕುಮಾರಸ್ವಾಮಿ ಆಲೂರು