ವಾಷಿಂಗ್ಟನ್ : ಅಮೆರಿಕದ ಕೆಂಚುಕಿ ನಗರದಲ್ಲಿ ಸೋಮವಾರ ಲೂಯಿಸ್ವಿಲ್ಲೆಯಲ್ಲಿ ಗುಂಡಿನ ದಾಳಿಯ ನಂತರ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಗಾಯಗೊಂಡವರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ ಎಂದು ಲೂಯಿಸ್ವಿಲ್ಲೆ ಪೊಲೀಸ್ ವಕ್ತಾರರು ಮಾಧ್ಯಮಗೋಷ್ಠಿಗೆ ತಿಳಿಸಿದರು, ಆದರೆ ಇಲಾಖೆ ಶಂಕಿತ ಶೂಟರ್ ನನ್ನು ಹೊಡೆದುರುಳಿಸಲಾಗಿದೆ” ಎಂದು ಪ್ರತ್ಯೇಕವಾಗಿ ಟ್ವೀಟ್ ಮಾಡಿದ್ದಾರೆ.
ಇಬ್ಬರ ಸ್ಥಿತಿ ಗಂಭೀರವಾಗಿದೆ. ಆ ಇಬ್ಬರಲ್ಲಿ ಒಬ್ಬರು ಪೊಲೀಸ್ ಅಧಿಕಾರಿಯಾಗಿದ್ದು, ಅವರಿಗೆ ಪ್ರಸ್ತುತ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.