ಇಂತಹ ಪ್ರಕರಣಗಳು ಹಲವು. ಮತ್ತೂಬ್ಬರಿಗೆ 38,340 ರೂ. ಬಿಲ್‌ಗೆ 4,800 ರೂ., 20,930 ರೂ.ಗೆ 6 ಸಾವಿರ ರೂ., 13,072 ರೂ.ಗೆ 1,500 ರೂ. 2.2 ಲಕ್ಷ ರೂ.ಗೆ 11,500 ರೂ., 23 ಸಾವಿರ ರೂ.ಗೆ 1,800 ರೂ., 1.37 ಲಕ್ಷ ರೂ.ಗೆ 29 ಸಾವಿರ ರೂ. ಕೊಟ್ಟು ಕೈ ತೊಳೆದುಕೊಂಡದ್ದೂ ಇದೆ.
Advertisement
ಕಟ್ಟಡ ಕಾರ್ಮಿಕರ ವೈದ್ಯ ಕೀಯ ಸಹಾಯಧನ, ಪ್ರಮುಖ ಕಾಯಿಲೆಗಳ ಚಿಕಿತ್ಸಾ ವೆಚ್ಚ, ಅಪಘಾತ ಚಿಕಿತ್ಸಾ ವೆಚ್ಚದ ಮರುಪಾವತಿಯನ್ನು ಕಾರ್ಮಿಕ ಕಲ್ಯಾಣ ಮಂಡಳಿ ಮಾಡುತ್ತದೆ. ಗಂಭೀರ ಚಿಕಿತ್ಸೆಗೆ 2 ಲಕ್ಷ ರೂ. ವರೆಗೆ, ಸಹಜ
ಯಾವುದಾದರೂ ಅಂಗ ಊನ ಗೊಂಡು ತಿಂಗಳುಗಟ್ಟಲೆ ಮನೆಯಲ್ಲೇ ಇರಬೇಕಾಗಿ ಬಂದರೆ ಮಾಸಾಶನ ಹಾಗೂ 2 ಲಕ್ಷ ರೂ. ಪರಿಹಾರ ನೀಡ ಬೇಕೆಂಬುದು ನಿಯಮ; ಆದರೆ ಅಂಗ ವೈಕಲ್ಯ ಪ್ರಮಾಣ ಪತ್ರ ಇದ್ದರೆ ಮಾತ್ರ. ಶಾಶ್ವತ ಅಂಗವೈಕಲ್ಯ ಆಗದೇ ವೈದ್ಯರು ಪ್ರಮಾಣಪತ್ರ ನೀಡುವುದಿಲ್ಲ. ತಾತ್ಕಾಲಿಕ ಪ್ರಮಾಣಪತ್ರದಂತಹ ತಾಂತ್ರಿಕ ಪರಿ ಹಾರ ನೀಡಬಹುದಾದರೂ ಮಂಡಳಿ, ಸಚಿವಾಲಯ ಮನಸ್ಸು ಮಾಡಿಲ್ಲ.
Related Articles
ಕಾರ್ಮಿಕ ಕಲ್ಯಾಣ ಮಂಡಳಿ ಮನಸ್ಸು ಮಾಡಿದರೆ ಬದಲಾವಣೆ ಸಾಧ್ಯ. ಇತ್ತೀಚೆ ಗಷ್ಟೇ ಎರಡು ನಿಯಮಗಳಲ್ಲಿ ಬದಲಾವಣೆ ತಂದಿದೆ. ಕಾರ್ಮಿಕರ ಸಹಜ ಸಾವಿಗೆ ದೊರೆಯುತ್ತಿದ್ದ 54 ಸಾವಿರ ರೂ.ಗಳನ್ನು 75 ಸಾವಿರಕ್ಕೆ ಏರಿಸಿದೆ. ಕಟ್ಟಡ ನಿರ್ಮಾಣ ವೇಳೆ ಬಿದ್ದು ಸಾವಿಗೀಡಾದರೆ 5 ಲಕ್ಷ ರೂ., ರಸ್ತೆ ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ಎಂದಿದ್ದ ತಾರತಮ್ಯವನ್ನೂ ಸಂಘಟನೆಗಳ ಮನವಿ ಮೇರೆಗೆ ಸರಿಪಡಿಸಲಾಗಿದೆ.
Advertisement
ವೈದ್ಯಕೀಯ ಸಹಾಯ ಧನ, ಪ್ರಮುಖ ಕಾಯಿಲೆಗಳ ಚಿಕಿತ್ಸಾ ವೆಚ್ಚ, ಅಪಘಾತ ಚಿಕಿತ್ಸಾ ವೆಚ್ಚವನ್ನು ಪೂರ್ಣವಾಗಿ ಕಾರ್ಮಿಕನಿಗೆ ಪಾವತಿಸಬೇಕು ಅಥವಾ ನಗದು ರಹಿತ ಸೇವೆ ಜಾರಿ ಮಾಡಬೇಕು.
– ಕೆ. ಜಯರಾಜ್ ಸಾಲಿಯಾನ್, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘ
ಗುಲ್ವಾಡಿ ಪ್ರಕರಣ ಗಮನಕ್ಕೆ ತಂದು ಸರಿಪಡಿಸಲಾಗುತ್ತಿದೆ. ವೈದ್ಯಕೀಯ ವೆಚ್ಚ ಹೆಚ್ಚಳ ಕುರಿತು ಕಾರ್ಮಿಕ ಸಚಿವರ ಸೂಚನೆಯಂತೆ ಆಯುಕ್ತರು ದರ ಮರು ಪರಿಶೀಲಿಸಿ ಮಂಡಿಸಲಿದ್ದಾರೆ. ಅನಂತರ ಆವಶ್ಯಕ ತಿದ್ದುಪಡಿ ಆಗಲಿದೆ.– ಡಾ| ಶಿವಪುತ್ರ ಬಾಬುರಾವ್, ಜಂಟಿ ಕಾರ್ಯದರ್ಶಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು