Advertisement

ಮಿನಿ ಸಮರ: ವಿಜಯನಗರದಾದ್ಯಂತ ಪ್ರಚಾರದ ಅಬ್ಬರ

02:57 PM Nov 23, 2019 | Naveen |

ಹೊಸಪೇಟೆ: ವಿಜಯನಗರ ಉಪಚುನಾವಣೆ ಪಕ್ಷದ ಅಭ್ಯರ್ಥಿ ಆನಂದ ಸಿಂಗ್‌ ಪರ ಪ್ರಚಾರ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನ. 25ರಂದು ನಗರಕ್ಕೆ ಆಗಮಿಸಲಿದ್ದು ಅಂದು ತಾಲೂಕಿನ ಕಮಲಾಪುರದಲ್ಲಿ ಬೃಹತ್‌ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಸುರಪುರ ಶಾಸಕ ಹಾಗೂ ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ರಾಜುಗೌಡ ತಿಳಿಸಿದರು.

Advertisement

ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಟಿಯಿಂದ ವಿಜಯನಗರ ಜಿಲ್ಲೆಯಾಗಬೇಕು. ವಿಜಯನಗರ ನೂತನ ಜಿಲ್ಲೆಗೆ ನನ್ನ ಸಂಪೂರ್ಣ ಸಹಮತ ಇದೆ. ಇದಕ್ಕೆ ನಾನು ಕಲ್ಯಾಣ ಕರ್ನಾಟಕದ ಶಾಸಕನಾಗಿ ಸಹಿ ಕೂಡ ಹಾಕಿದ್ದೇನೆ ಎಂದು ತಿಳಿಸಿದರು.

ಆನಂದ್‌ ಸಿಂಗ್‌ ಅವರು ಶುಭಗಳಿಗೆಯಲ್ಲಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅವರ ರಾಜೀನಾಮೆ ಬಳಿಕ ಉಳಿದ ಶಾಸಕರು ರಾಜೀನಾಮೆ ನೀಡಿದ್ದಾರೆ. 17 ಶಾಸಕರ ರಾಜೀನಾಮೆ ನೀಡಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. 15 ಕ್ಷೇತ್ರಗಳಲ್ಲಿ ಉತ್ತಮ ವಾತಾವರಣ ಇದ್ದು, ಇನ್ನೂ ಮೂರುವರೆ ವರ್ಷಗಳ ಕಾಲ ಬಿಜೆಪಿ ಸರಕಾರ ಆಡಳಿತ ನಡೆಸಲಿದೆ ಎಂದರು.

ವಾಕ್ಸಮರ: ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಇಬ್ಬರೂ ಜನ-
ಜನಾಂಗದ ಮಾತ ನಾ ಡದೇ ವೈಯುಕ್ತಿಕವಾಗಿ ಹೊಡೆದಾಡಿಕೊಳ್ಳಲಿ. ಈಗಾಗಲೇ ಇಬ್ಬರು ನಾಯಕರಿಗೆ ಮನವಿ ಮಾಡಿಕೊಂಡಿದ್ದೇನೆ. ಇಬ್ಬರ ನಾಯಕರ ಡಿಬೇಟ್‌ ಕೋರ್ಟ್‌ ನಲ್ಲಿ ಲಾಯರ್‌ ಇರುವ ಹಾಗೆಯೇ ಇರಬೇಕು. ಇಲ್ಲದಿದ್ದರೆ ಅಮಾಯಕರ ಜನರು ತೊಂದರೆ ಪಡಬೇಕಾಗುತ್ತದೆ. ಮಾಜಿ ವಿಧಾನಪರಿಷತ್‌ ಸದಸ್ಯ ನಾರಾಯಣಸಾ ಭಾಂಡೆಗೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ, ಮಂಡಳದ ಅಧ್ಯಕ್ಷ ಅನಂತಪದ್ಮನಾಭ, ಮುಖಂಡರಾದ ರತನ ಸಿಂಗ್‌, ಬಸವರಾಜ ನಾಲತ್ವಾಡ, ಅಶೋಕ ಜೀರೆ, ಗುದ್ಲಿ ಪರಶುರಾಮ, ವ್ಯಾಸನಕೇರಿ ಶ್ರೀನಿವಾಸ, ಶಶಿಧರಯ್ಯಸ್ವಾಮಿ, ಅಯ್ಯಳಿ ತಿಮ್ಮಪ್ಪ, ಶಿವುಕುಮಾರ, ಸುಗುಣಾ, ಭಾರತಿ ಪಾಟೀಲ ಇನ್ನಿತರರಿದ್ದರು.

ಪ್ರಚಾರ: ಪಕ್ಷದ ಅಭ್ಯರ್ಥಿ ಆನಂದಸಿಂಗ್‌ ಪರ ಸಚಿವ ಶ್ರೀರಾಮುಲು ಶುಕ್ರವಾರ ಪ್ರಚಾರ ನಡೆಸಿದರು. ತಾಲೂಕಿನ ಕಾರಿಗನೂರು, ಇಂಗಳಿಗಿ, ಪಾಪಿನಾಯಕನಹಳ್ಳಿ, ಕಾಕುಬಾಳು ಹಾಗೂ ಗಾದಿಗನೂರು ಗ್ರಾಮಗಳಲಿ ಮತಯಾಚನೆ ಮಾಡಿದರು. ಸಂಸದ ವೈ.ದೇವೇಂದ್ರಪ್ಪ, ಶಾಸಕ ರಾಜು ಗೌಡ್ರು, ಪಕ್ಷದ ಪ್ರಧಾನ ಕಾರ್ಯದರ್ಶಿ, ರವಿಕುಮಾರ್‌, ಮಂಡಲ ಅಧ್ಯಕ್ಷ ಅನಂತಪದ್ಮನಾಭ, ಡಾ.ಮಹಿಪಾಲ, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ ಹಾಗೂ ಸಾಲಿಸಿದ್ದಯ್ಯ ಸ್ವಾಮಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next