ಹೊಸಪೇಟೆ: ಹೊಸಪೇಟೆ-ಕೊಟ್ಟೂರು ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದ್ದು, ರೈಲ್ವೆ ಇಲಾಖೆ ಅ.17ರಂದು ಪ್ರಯಾಣಿಕರ ರೈಲು ಓಡಾ ಟಕ್ಕೆ ಹಸಿರು ನಿಶಾನೆ ನೀಡಿದೆ. ರೈಲ್ವೆ ಸುರಕ್ಷಿತ ಅಧಿಕಾರಿಗಳು ರೈಲ್ವೆ ಸಂಚಾರದ “ಗ್ರೀನ್ ಸಿಗ್ನಲ್’ ತೋರಿದ ಹಿನ್ನೆ ಲೆ ಯಲ್ಲಿ ರೈಲು ಓಡಾಟಕ್ಕೆ ದಿನಾಂಕ ನಿಗದಿಗೊಳಿಸಿ, ಅಧಿಕೃತ ಘೋಷಣೆ ಹೊರಡಿಸಿದೆ.
Advertisement
ನಿರಂತರ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದ್ದು, ರೈಲ್ವೆ ಇಲಾಖೆಯಿಂದ ದಿನಾಂಕ ನಿಗದಿಯಾಗುತ್ತಿದ್ದಂತೆ ಈ ಭಾಗದಲ್ಲಿ ಸಂಭ್ರಮ ಮನೆ ಮಾಡಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಳ್ಳಾರಿ ಸಂಸದ ವೈ.ದೇ ವೆಂದ್ರಪ್ಪ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಚಿತ್ರದುರ್ಗ ಶಾಸಕ ಎ.ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ರಾಮಪ್ಪ, ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಹಗರಿಬೊಮ್ಮನ ಹಳ್ಳಿ ಶಾಸಕ ಭೀಮಾ ನಾಯ್ಕ, ಬಳ್ಳಾರಿ ಜಿಪಂ ಅಧ್ಯಕ್ಷೆ ಸಿ. ಭಾರತಿ, ದಾವಣಗೆರೆಯ ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ ಸಮಾರಂಭ ದಲ್ಲಿ ಭಾಗವಹಿಸಲಿದ್ದಾರೆ. ಈ ರೈಲು ಬಳ್ಳಾರಿವರೆಗೂ ಸಂಚರಿಸಬೇಕೆಂಬ ಕೂಗು ಕೇಳಿಬಂದಿದೆ.