Advertisement

ಹೊಸ ಜಿಲ್ಲೆ ಉದ್ಘಾಟನೆಗೆ ಭವ್ಯ ವೇದಿಕೆ

05:26 PM Sep 20, 2021 | Team Udayavani |

ಹೊಸಪೇಟೆ: ಚಾರಿತ್ರಿಕ ಹಿನ್ನೆಲೆಯ ನೂತನ ವಿಜಯನಗರಜಿಲ್ಲೆ ಅಧಿಕೃತ ಉದ್ಘಾಟನೆಗೆ ಹಂಪಿ ಪರಂಪರೆ ಸಾರುವ ಭವ್ಯವೇದಿಕೆ ನಿರ್ಮಾಣಗೊಳ್ಳಲಿದೆ.

Advertisement

ಈ ಮೂಲಕ ವಿಜಯನಗರಸಾಮ್ರಾಜ್ಯದ ಗತವೈಭವ ಮೆಲುಕು ಹಾಕುವ ಕಾರ್ಯವೂನಡೆಯಲಿದೆ.ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ರಾಜ (ಬಿಷ್ಟಪ್ಪಯ್ಯ)ಗೋಪುರ ಮಾದರಿಯಲ್ಲಿ ವೇದಿಕೆ ಸಿದ್ಧವಾಗುತ್ತಿದ್ದು, ಹಂಪಿಗತವೈಭವಕ್ಕೆ ಸಾಕ್ಷಿಯಾಗಲಿದೆ.

ಭವ್ಯ ವೇದಿಕೆಯಲ್ಲಿ ಹಂಪಿಭವ್ಯಗೋಪುರ ರಾರಾಜಿಸಲಿದೆ. ವಿಜಯನಗರದ ಜಿಲ್ಲಾಕ್ರೀಡಾಂಗಣದಲ್ಲಿ ಅ. 2 ಮತ್ತು 3ರಂದು ವಿಜಯನಗರಜಿಲ್ಲೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಅ. 2ರಂದುಮುಖ್ಯಮಂತ್ರಿಬಸವರಾಜಬೊಮ್ಮಾಯಿ ಅವರುಜಿಲ್ಲೆಗೆ ಅಧಿಕೃತಚಾಲನೆ ನೀಡಲಿದ್ದಾರೆ.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಗೋಪುರ ಮಾದರಿ ವೇದಿಕೆ: ಹಂಪಿ ಶ್ರೀವಿರೂಪಾಕ್ಷೇಶ್ವರದೇಗುಲದ ಭವ್ಯಗೋಪುರದ ಮಾದರಿಯಲ್ಲೇ 78 ಅಡಿಎತ್ತರದ ಗೋಪುರವನ್ನು ವೇದಿಕೆಯಲ್ಲಿ ನಿರ್ಮಿಸಲಾಗುತ್ತಿದೆ.ವೇದಿಕೆ ಸುತ್ತ ಹಂಪಿ ಪರಂಪರೆ ಸಾರುವ ಸ್ಮಾರಕಗಳ ವೈಭವವನ್ನುಶಿಲ್ಪಿಗಳು ಸೃಷ್ಟಿಸಲಿದ್ದಾರೆ. ಈ ಭವ್ಯ ವೇದಿಕೆ 120 ಅಡಿಗೂಹೆಚ್ಚು ಉದ್ದ ಹಾಗೂ ವಿಶಾಲ, ಅಗಲವಾಗಿರುತ್ತದೆ. ಹಂಪಿ ಭವ್ಯಪರಂಪರೆಯನ್ನು ಈ ವೇದಿಕೆ ಪ್ರತಿಬಿಂಬಿಸಲಿದೆ.

ವಿಜಯನಗರ ನೆಲದ ಪರಂಪರೆಯನ್ನು ಸಾರುವಮಾದರಿಯಲ್ಲಿ ಪ್ರವೇಶದ್ವಾರಗಳನ್ನು ನಿರ್ಮಿಸಲಾಗುತ್ತದೆ.ವಿಜಯನಗರದ ಕಲೆ, ಸಂಸ್ಕೃತಿ,ವಾಸ್ತುಶಿಲ್ಪವನ್ನುಪ್ರತಿಬಿಂಬಿಸುವಕಾರ್ಯವನ್ನು ನುರಿತ ಶಿಲ್ಪಿಗಳು, ತಜ್ಞರು ಮಾಡಲಿದ್ದಾರೆ.ಕ್ರೀಡಾಂಗಣದಲ್ಲಿ ಆಸನದ ವ್ಯವಸ್ಥೆ ಮಾಡದೇ ಮ್ಯಾಟ್‌ ಹಾಕಲುಚಿಂತನೆ ನಡೆದಿದೆ.ಎಲ್‌ಇಡಿ ವ್ಯವಸ್ಥೆ: ಕೋವಿಡ್‌ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿಜನಸಾಗರ ಸೇರದಂತೆ ಮುನ್ನೆಚ cರಿಕೆ ವಹಿಸಲಾಗುತ್ತಿದ್ದು, ನಗರದಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲುಯೋಚಿಸಲಾಗಿದ್ದು, ಇದಕ್ಕಾಗಿ ಈಗಾಗಲೇ ಒಂದು ಸುತ್ತಿನ ಚರ್ಚೆಯೂ ನಡೆದಿದೆ. ವಿಜಯನಗರದ ಭವ್ಯ ಪರಂಪರೆಬಿಂಬಿಸುವ ಮಾದರಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

Advertisement

2021ರ ಫೆಬ್ರವರಿ8ರಂದೇ ರಾಜ್ಯಸರ್ಕಾರ ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದರೂಕೊರೊನಾ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮಆಯೋಜನೆಗೆ ತಡವಾಗಿತ್ತು. ಈಗ ಕೋವಿಡ್‌ ನಿಯಮಪಾಲನೆಯೊಂದಿಗೆ ಭವ್ಯ ವೇದಿಕೆಯಲ್ಲೇ ಐತಿಹಾಸಿಕ ಜಿಲ್ಲೆಯಉದ್ಘಾಟನಾ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲು ಸಚಿವ ಆನಂದ್‌ ಸಿಂಗ್‌ ಹಾಗೂ ವಿಜಯನಗರ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ.

ದಶಕಗಳ ಹೋರಾಟದ ಫಲ: ವಿಜಯನಗರ ಜಿಲ್ಲೆಗೆ ದಶಕಗಳಹೋರಾಟದ ಹಿನ್ನೆಲೆ ಇದೆ. ಕೊಪ್ಪಳ ಜಿಲ್ಲೆ ರಚನೆಯಾದಸಂದರ್ಭದಲ್ಲೇ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವಾಗಿಸುವಕೂಗು ಎದ್ದಿತ್ತು.ಕಾರಣಾಂತರಗಳಿಂದ ಜಿಲ್ಲೆ ರಚನೆಯಾಗಿರಲಿಲ್ಲ.ನಿರಂತರ ಹೋರಾಟದ ಫಲವಾಗಿ ವಿಜಯನಗರ ಜಿಲ್ಲೆರಚನೆಯಾಗಿದ್ದು, ಈ ನೆಲದ ಸಂಸ್ಕೃತಿಯನ್ನು ಮತ್ತೂಮ್ಮೆಅನಾವರಣಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಬಳ್ಳಾರಿಯಿಂದ ಇಬ್ಭಾಗವಾಗಿರುವ ನೂತನವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ, Öಗರಿ‌ ಬೊಮ್ಮನಹಳ್ಳಿ,ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ ಮತ್ತು ಕೊಟ್ಟೂರುತಾಲೂಕುಗಳು ಒಳಗೊಂಡಿ¨. ಈೆ ಗ ನೂತನ ಜಿಲ್ಲೆಯ ಈ ಎಲ್ಲತಾಲೂಕುಗಳಲ್ಲೂಸಂಭ್ರಮಮನೆಮಾvಲಿದೆ. ‌ ವಿಜಯನಗರದನೆಲದಲ್ಲಿ ಐತಿಹಾಸಿಕ ಹಂಪಿ,ತುಂಗಭದ್ರಾಜಲಾಶಯ ಸೇರಿದಂತೆ ಚಾರಿತ್ರಿಕ ಕುರುಹುಗಳಿವೆ. ಹಾಗಾಗಿ ಐತಿಹಾಸಿಕತೆಯೊ ‌ ಂದಿಗೆಅಭಿವೃದ್ಧಿಗೆ ಭಾಷ್ಯ ಬರೆಯಲು ರಾಜ್ಯ ಸರ್ಕಾರ ಹೊಸ ಜಿಲ್ಲೆಗೆ ಹಲವು ಯೋಜನೆಗಳನ್ನು ಕೊಡುಗೆಯಾಗಿ ನೀಡುವ ಸಾಧ್ಯತೆಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವುಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಹಾಗಾಗಿ ಚಾರಿತ್ರಿಕನೆಲದಲ್ಲಿ ಅಭಿವೃದ್ಧಿ ಮಂತ್ರ ಅನುರಣಿಸಲಿದೆ.

ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next