Advertisement

Hosapete; ನಾನೇ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಿದ್ದ :ಆನಂದ ಸಿಂಗ್

08:20 PM Oct 01, 2023 | Team Udayavani |

ಹೊಸಪೇಟೆ: ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಒಂದೊಮ್ಮೆ ಯಾರೂ ಮುಂದೆ ಬರದೇ ಹೋದಲ್ಲಿ ನಾನೇ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಿದ್ದವಾಗಿರುವುದಾಗಿ ಮಾಜಿ ಸಚಿವ ಆನಂದ ಸಿಂಗ್ ಹೇಳಿದರು.

Advertisement

ಚುನಾವಣೆ ಬಳಿಕ ಮೊದಲ ಬಾರಿಗೆ ತಾಲ್ಲೂಕಿನ ಕಮಲಾಪುರದ ರಜಪೂತ್ ಕೋಟೆಯ ತಮ್ಮ ಕಚೇರಿಯಲ್ಲಿ ಭಾನುವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ಜಂಬುನಾಥನಹಳ್ಳಿ ಗ್ರಾಮದಲ್ಲಿ84 ಎಕರೆಯಷ್ಟು ಸರ್ಕಾರಿ ಭೂಮಿಯಲ್ಲಿ ಸಕ್ಕರೆ ಸ್ಥಾಪನೆಗಾಗಿ ಹಂಪಿ ಶುಗರ್ಸ್ ಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿತ್ತು. ಇನ್ನೇನು ಹಂಪಿ ಶುಗರ್ಸ್ ಕಾರ್ಖಾನೆ ಸ್ಥಾಪನೆಗೆ ಭೂಮಿ ಪೂಜೆ ನೆರವೇರಬೇಕಿತ್ತು. ಅಷ್ಟೊರಳಗೆ ಚುನಾವಣೆ ದಿನಾಂಕ ಘೋಷಣೆಯಾಗಿ ಸ್ಥಾಪನೆಗೆ ಹಿನ್ನಡೆಯಾಯಿತು. ಇತ್ತೀಚಿಗೆ ಶಾಸಕ ಗವಿಯಪ್ಪ ಅವರು ಕಾರ್ಖಾನೆ ಸ್ಥಾಪನೆಗೆ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಹಾಗೂ ಶಾಸಕ ಗವಿಯಪ್ಪ ಹಾಗೂ ಜಿಲ್ಲಾಧಿಕಾರಿಗಳು ಕ್ಷೇತ್ರದ ನಾಲ್ಕು ದಿಕ್ಕುಗಳಲ್ಲಿ ಯಾವುದೇ ಮೂಲೆಯಲ್ಲಿ ಜಮೀನು ಒದಗಿಸಿಕೊಟ್ಟಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ನಾನು ಸಿದ್ದ ಎಂದು ಹೇಳಿದರು.

ಈಗಾಗಲೇ ಕಾಳಘಟ್ಟ ಮಾಗಣಿ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪನೆಗೆ ಸುಮಾರು 70 ಎಕರೆ ಜಾಗವನ್ನು ಶಾಸಕರು ಗುರುತಿಸಿದ್ದಾರೆ ಎಂದು ತಿಳಿದು ಬಂದಿದೆ. ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕನಿಷ್ಠ 120 ಜಾಗದ ಅವಶ್ಯಕತೆ ಇದೆ. 70 ಎಕರೆ ಪ್ರದೇಶದಲ್ಲಿ ತಾಂತ್ರಿಕವಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಸಾಧ್ಯವಾಗಲಿದೆ ಎಂಬುದು ಮನವರಿಕೆ ಮಾಡಿಕೊಟ್ಟರೆ, ಆ ಸ್ಥಳದಲ್ಲಿಯೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವುದಾಗಿ ತಿಳಿಸಿದರು.
ಜಂಬುನಾಥನಹಳ್ಳಿ ಭೂಮಿಯಲ್ಲಿ ಶಾಸಕರು, ಬಡವರಿಗೆ ನಿವೇಶನ ಒದಗಿಸಲಿ ಇದಕ್ಕೆ ನನ್ನ ಯಾವುದೇ ಅಡ್ಡಿಯಿಲ್ಲ. ಒಟ್ಟಾರೆ, ಬಡವರಿಗೆ ಒಳ್ಳೆಯಾದರೆ ಸಾಕು. ಕಳೆದ 15 ವರ್ಷದಲ್ಲಿ ಬಡವರಿಗೆ ನಿವೇಶನ ನೀಡುವಲ್ಲಿ ಹಿಂದೆ ಬಿದ್ದಿದೇನೆ. ಈಗ ಶಾಸಕರು, ಅವರಿಗೆ ನಿವೇಶನದ ವ್ಯವಸ್ಥೆ ಕಲ್ಪಿಸಲಿ. ಜತೆಗೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿ, ಈ ಭಾಗದ ರೈತರ ಅನುಕೂಲ ಮಾಡಿಕೊಡಲಿ. ಒಟ್ಟಾರೆ, ರೈತರು ಮತ್ತು ಬಡವರಿಗೆ ಅನುಕೂಲವಾದರೆ ಸಾಕು ಎಂದರು.

ಈ ಭಾಗದಲ್ಲಿ ಬೃಹತ್ ಉಕ್ಕಿನ ಕಾರ್ಖಾನೆಗಳಿಗೆ ಕಡಿಮೆ ಬೆಲೆಯಲ್ಲಿ ಸರ್ಕಾರ ಭೂಮಿ ನೀಡಿದೆ. ಈ ಭಾಗದ ರೈತರ ಅನುಕೂಲಕ್ಕಾಗಿ ಸರ್ಕಾರಿ ಭೂಮಿಯನ್ನು ಕಡಿಮೆ ಬೆಲೆಗೆ ನೀಡಲಿ. ಸರ್ಕಾರ ಅವಕಾಶ ಮಾಡಿಕೊಟ್ಟರೆ, ನಾನು ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವೆ. ಇದಕ್ಕಾಗಿ ಶಾಸಕರು ಆಹ್ವಾನ ನೀಡಿದರೆ, ಅವರ ಬಳಿ ತೆರಳಿ ಚೆರ್ಚೆ ಮಾಡುವೆ ಎಂದರು.ನೂತನ ಜಿಲ್ಲೆ ಅಭಿವೃದ್ಧಿಗಾಗಿ ನೂರಾರು ಕೋಟಿ ಅನುದಾನ ಈಗಾಗಲೇ ಕೆಲ ಇಲಾಖೆ ಖಾತೆಗಳಲ್ಲಿ ಇದೆ. ಈ ಹಣದಿಂದ ಅಭಿವೃದ್ಧಿ ಕೆಲಸಗಳು ತತ್ವರಿತಗತಿಯಲ್ಲಿ ಆಗಬೇಕಿದೆ ಎಂದರು.

ದ್ವೇಷದ ರಾಜಕಾರಣ ಮಾಡಲ್ಲ
ಅಭಿವೃದ್ಧಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡಲ್ಲ. ಐಎಸ್‌ಆರ್ ಸಕ್ಕರೆ ಕಾರ್ಖಾನೆ ಮತ್ತು ವಿಜಯನಗರ ಜಿಲ್ಲೆ ರಚನೆಗೆ ನನ್ನ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಸ್ವಾರ್ಥ ಸಾಧನೆಗಾಗಿ ಜಿಲ್ಲೆ ರಚನೆ ಮಾಡಲಿಲ್ಲ. 10 ವರ್ಷಗಳ ಬಳಿಕ ವಿಜಯನಗರ ಜಿಲ್ಲೆಯ ಲಾಭ ಏನೆಂಬದು ತಿಳಿಯುತ್ತದೆ. ಪ್ರತಿಷ್ಠೆಯಾಗಿ ವಿಜಯನಗರ ಜಿಲ್ಲೆ ಅಭಿವೃದ್ಧಿ ಕಾರ್ಯ ಕುಂಠಿತವಾಗುವುದು ಬೇಡ. ಸಚಿವರು, ಶಾಸಕರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ನನ್ನ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.

Advertisement

ಸದ್ಯ ನಾನೀಗ ರಾಜಕಾರಣದಿಂದ ದೂರ ಉಳಿದಿದ್ದೇನೆ. ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಕೊಪ್ಪಳ ಮಾತ್ರವಲ್ಲ ಯಾವುದೇ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next